ಬೆಂಗಳೂರು: ಎಟಿಎಂ ಒಡೆಯಲು ಈ ಕಳ್ಳರು ಮಾಡಿದ್ದ ಮಾಸ್ಟರ್ ಪ್ಲಾನ್!

By Suvarna News  |  First Published Aug 10, 2020, 5:03 PM IST

ಬೆಂಗಳೂರಲ್ಲಿ ಕಳ್ಳರ ಕೈಚಳಕ/ ಎಟಿಎಂ ಒಡೆದು ಹಣ ದೋಚಿದರು/ ಜಾಲಹಳ್ಳಿಯ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ/ ಎಟಿಎಂ ಒಳಗಿದ್ದ 27 ಲಕ್ಷ ರೂ.  ಕಳ್ಳರ ಪಾಲು


ಬೆಂಗಳೂರು(ಆ.10) ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಕಳ್ಳರು ಎಟಿಎಂ  ದೋಚಿದ್ದಾರೆ. ಜಾಲಹಳ್ಳಿಯ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಮಾಡಲಾಗಿದೆ.

ಗ್ಯಾಸ್ ಕಟರ್ ಬಳಸಿ ಎಟಿಎಂ ಒಡೆದು ಹಣ ಕದ್ದು ಪರಾರಿಯಾಗಿದ್ದಾರೆ. ಎಟಿಎಂ ಒಳಗಿದ್ದ 27 ಲಕ್ಷ ರೂ.  ಕಳ್ಳತನವಾಗಿದೆ. ಸೋಮವಾರ ಬೆಳಿಗ್ಗೆ ಹತ್ತಿರದ ಮನೆ ಮಾಲೀಕರು ಗಮನಿಸಿದಾಗ ವಿಚಾರ ಬೆಳಕಿಗೆ ಬಂದಿದೆ. 

Tap to resize

Latest Videos

ಈ  ಬಗ್ಗೆ  ಉತ್ತರ ವಿಭಾಗದ ಡಿಸಿಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಕೆನರಾ ಎಟಿಎಂನಲ್ಲಿ ನೆನ್ನೆ ರಾತ್ರಿ ಕಳ್ಳತನ ನಡೆದಿದೆ. ಎಟಿಎಂಗೆ ಯಾವುದೇ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ ಹೊರಗೆ ಮತ್ತು ಒಳಗೆ ಸಿಸಿಟಿವಿಗಳೂ ಇರಲಿಲ್ಲ. ಶನಿವಾರ ಎಟಿಎಂ ಆಫ್ ಲೈನ್ ಆಗಿತ್ತು ಆ ವಿಚಾರವನ್ನು ಪೊಲೀಸರಿಗೆ ಬ್ಯಾಂಕ್ ಸಿಬ್ಬಂದಿ ತಿಳಿಸಿರಲಿಲ್ಲ.  ಪಕ್ಕಾ ಪ್ಲಾನ್ ಮಾಡಿ ಕಳ್ಳರು ಹಣ ದೋಚಿದ್ದು ಮಹತ್ವದ ಸುಳಿವು ಲಭ್ಯವಾಗಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ. 

click me!