ಕಾರ್ಮಿಕರಿಗೆ ವಿಶೇಷ ವಿಮಾನ, ಇಟಲಿ ಹಿಂದಿಕ್ಕಿದ ಭಾರತಕ್ಕೆ 6ನೇ ಸ್ಥಾನ; ಜೂ.6ರ ಟಾಪ್ 10 ಸುದ್ದಿ!

Suvarna News   | Asianet News
Published : Jun 06, 2020, 04:49 PM IST
ಕಾರ್ಮಿಕರಿಗೆ ವಿಶೇಷ ವಿಮಾನ, ಇಟಲಿ ಹಿಂದಿಕ್ಕಿದ ಭಾರತಕ್ಕೆ 6ನೇ ಸ್ಥಾನ; ಜೂ.6ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ಅಟ್ಟಹಾಸದಲ್ಲಿ ಭಾರತ ಇದೀಗ ಇಟಲಿ ಹಿಂದಿಕ್ಕಿ 6ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ಸಂಕಷ್ಟದಲ್ಲಿರುವ 170 ವಲಸೆ ಕಾರ್ಮಿಕರಿಗೆ ಬಾಲಿವುಡ್ ನಟ ಸೊನು ಸೂದ್ ವಿಶೇಷ ವಿಮಾನ ಬುುಕ್ ಮಾಡಿದ್ದಾರೆ. ಕೊರೋನಾ ವೈರಸ್ ಚೀನಾ ಕೊಟ್ಟ ಅತ್ಯಂತ ಕೆಟ್ಟ ಗಿಫ್ಟ್ ಎಂದು ಡೋನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ. ಸರ್ಕಾರದ ವಿಡಿಯೋ ಕಾನ್ಫೆರನ್ಸ್ ಸಭೆಯಲ್ಲಿ ನಾಯಕಿಯೊಬ್ಬರು ಲೈವ್‌ನಲ್ಲೇ ಬಟ್ಟೆ ಬಿಚ್ಚಿದ ಘಟನೆ ನಡೆದಿದೆ. ದೀಪಿಕಾ ಡ್ಯಾನ್ಸ್, ರಾಜ್ಯಸಭಾ ಎಲೆಕ್ಷನ್‌ಗೆ ಬಿಜೆಪಿ ಅಭ್ಯರ್ಥಿ ಸೇರಿದಂತೆ ಜೂನ್ 6 ರ ಟಾಪ್ 10 ಸುದ್ದಿ ಇಲ್ಲಿವೆ.

'ಎಂಥಾ ಕೆಟ್ಟ ಗಿಫ್ಟ್ ಕೊಟ್ರಿ'..! ಚೀನಾ ವಿರುದ್ಧ ಟ್ರಂಪ್‌ ಕಿಡಿ

ಕೊರೋನಾ ವೈರಸ್‌ ಚೀನಾ ಕೊಟ್ಟ ಕೆಟ್ಟ ಗಿಫ್ಟ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ. ಈ ವೈರಸ್‌ನ್ನು ಅದು ಆರಂಭವಾದ ಮೂಲ ಸ್ಥಳದಲ್ಲಿಯೇ ನಿಲ್ಲಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ವೇಳೆ ಬಟ್ಟೆ ಬಿಚ್ಚಿದ ನಾಯಕಿ, ಸಚಿವರೆಲ್ಲಾ ಶಾಕ್!

ಸರ್ಕಾರ ಜೂಮ್ ಕಾಲ್ ಮೂಲಕ ತಮ್ಮ ನಾಯಕರೊಂದಿಗೆ ಮೀಟಿಂಗ್ ನಡೆಸಿದ್ದಾರೆ. ಇದರಲ್ಲಿ ಸರ್ಕಾರದ ಎಲ್ಲಾ ಸಚಿವರು ಭಾಗಿಯಾಗಿದ್ದರು. ಹೀಗಿರುವಾಗ ನಾಯಕಿಯೊಬ್ಬರು ಅಚಾನಕ್ಕಾಗಿ ಎದ್ದು ತಮ್ಮ ಬಟ್ಟೆ ಬಿಚ್ಚಲಾರಂಭಿಸಿದ್ದಾರೆ. ಇದನ್ನು ಎಲ್ಲರೂ ಗಮನಿಸಿದ್ದು, ಆನ್‌ಲೈನ್‌ ಕರೆಯಲ್ಲಿ ಅನಾನುಕೂಲ ವಾತಾವರಣ ನಿರ್ಮಾಣವಾಗಿದೆ.

ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೊಲೀಸ್ ಪೇದೆ!

ಜಾರ್ಜ್ ಫ್ಲೋಯ್ಡ್‌ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಕುತ್ತಿಗೆ ಮೇಲೆ ಅಮೆರಿಕದ ಬಿಳಿಯ ಪೊಲೀಸ್‌ ಅಧಿಕಾರಿಯೊಬ್ಬ ಮಂಡಿ ಇಟ್ಟು ಅದುಮಿದ, ಆ ಬಳಿಕ ಫ್ಲೋಯ್ಡ್‌ ಸಾವಿಗೀಡಾದ ಘಟನೆ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ, ಅದನ್ನು ಹೋಲುವಂತಹ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.

ಕೊರೋನಾ ಅಟ್ಟಹಾಸ: ಇಟಲಿ ಹಿಂದಿಕ್ಕಿ ಭಾರತ ಈಗ ನಂ.6! 

ಅತಿ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿದ ದೇಶಗಳ ಪಟ್ಟಿಯಲ್ಲಿ ಭಾರತ ಶುಕ್ರವಾರ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೆ ಜಿಗಿದಿದೆ ಎಂದು ವಿಶ್ವದ ಕೊರೋನಾ ವೈರಸ್‌ ಕುರಿತ ಅಂಕಿ-ಅಂಶಗಳನ್ನು ನಿರ್ವಹಿಸುವ ‘ವಲ್ಡೋರ್‍ಮೀಟರ್‌’ ವೆಬ್‌ಸೈಟ್‌ ತಿಳಿಸಿದೆ. ಅದರ ಪ್ರಕಾರ, ದೇಶದಲ್ಲಿ ಶುಕ್ರವಾರ ಕೊರೋನಾ ಪೀಡಿತರ ಸಂಖ್ಯೆ 2,34,163ಕ್ಕೇರಿದೆ.

ಬಡ ರಾಷ್ಟ್ರಗಳಿಗೆ ಉಚಿತ ಕೊರೋನಾ ಲಸಿಕೆ; $10 ಬಿಲಿಯನ್ ಹೂಡಿಕೆ ಮಾಡಿದ ಬಿಲ್ ಗೇಟ್ಸ್!...

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹಲವು ಉದ್ಯಮದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತು, ಸೇರಿದಂತೆ ಹಲವು ತುರ್ತು ಸಂದರ್ಭದಲ್ಲಿ ಹಣ ದೇಣಿಗೆ ನೀಡಿದ್ದಾರೆ. ಆದರೆ ಈ ವರೆಗೆ ಬಂಡವಾಳ ಹೂಡಿಕೆ, ಹಣ ದೇಣಿಗೆಯಲ್ಲಿ ಇದೀಗ 10 ಬಿಲಿಯನ್ ಅಮೆರಿಕನ್ ಡಾಲರ್ ಹಣ ಹೂಡಿಕೆ ಅತ್ಯಂತ ತೃಪ್ತಿ ನೀಡಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ. ಈ ಬಾರಿ ಬಿಲ್ ಗೇಟ್ಸ್  ಹಣ ಹೂಡಿಕೆ ಮಾಡಿರುವುದು ಕೊರೋನಾ ವೈರಸ್ ಲಸಿಕೆಗಾಗಿ.

ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

ಕೊರೋನಾ ವೈರಸ್ ಭೀತಿ ನಡುವೆ  ಅಮೆರಿಕದಲ್ಲಿ ಲಕ್ಷಕ್ಕೂ ಹೆಚ್ಚು ಜನ  ವರ್ಣ ಭೇದ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕ ಪೊಲೀಸರು ಅಮಾನವೀಯವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಅಮೆರಿಕ ಖ್ಯಾತ ಬಾಸ್ಕೆಟ್ ಬಾಲ್ ಪಟು, ಜನಾಂಗೀಯ ಸಮಾನತೆ ಸ್ಥಾಪಿಸಲು 100 ಮಿಲಿಯನ್ ಅಮೆರಿಕನ್ ಡಾಲರ್ ಹಣ ದೇಣಿಗೆ ನೀಡಿದ್ದಾರೆ.

ಸ್ಮಾರ್ಟ್ ಫೋನ್ ಇರುವವರೆಲ್ಲಾ ಈ ಸುದ್ದಿ ನೀವು ನೋಡಲೇಬೇಕು..!

ಇಡೀ ಜಗತ್ತನ್ನೇ ಕೊರೋನಾ ಕಷ್ಟ ಕೂಪದಲ್ಲಿ ನೂಕಿ ಚೀನಾ ಮಜಾ ನೋಡುತ್ತಿದೆ. ಚೀನಾ ವೈರಸ್‌ನಂತೆ ಚೀನಾದ ವಸ್ತುಗಳು ಇಡೀ ಜಗತ್ತನ್ನೇ ಆವರಿಸಿಕೊಂಡುಬಿಟ್ಟಿದೆ. ನಮ್ಮ ನಿಮ್ಮ ಮನೆಯಲ್ಲಿರಿರುವ ಅರ್ಧಕ್ಕರ್ಧ ವಸ್ತುಗಳು ಚೀನಾ ಕಂಪನಿಯವೇ ಆಗಿವೆ.


ಹುಷಾರಮ್ಮಾ... ದೀಪಿಕಾ, ಹೆಚ್ಚು ಕಡಿಮೆ ಆದೀತು..!

ನಟಿ ದೀಪಿಕಾ ಪಡುಕೋಣೆಗೆ ಅಭಿಮಾನಿಗಳು ಹುಷಾರಮ್ಮೋ... ಹುಷಾರು..! ಅಂತಿದ್ದಾರೆ. ಅರೇ, ಏನಾಯ್ತಪ್ಪಾ? ಅಂದ್ಕೊಂಡ್ರಾ?  ಕಾನ್ಫರೆನ್ಸ್‌ವೊಂದಕ್ಕೆ ಹೋದಾಗ ಗ್ರೀನ್‌ ರೂಂನಲ್ಲಿ  ಸಖತ್ ಸ್ಟೆಪ್ ಹಾಕಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಹುಷಾರಮ್ಮೋ... ಹೆಚ್ಚು ಕಡಿಮೆ ಆದೀತು ಎಂದಿದ್ದಾರೆ. 

ವಿಶೇಷ ವಿಮಾನ ಮೂಲಕ 170 ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಿದ ಸೋನು ಸೂದ್

ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ತವರಿಗೆ ಕಳಿಸಿ ಜನ ಮೆಚ್ಚುಗೆ ಗಳಿಸಿದ ನಟ ಸೋನು ಸೂದ್ ಈಗ 170 ಜನ ಕಾರ್ಮಿಕರನ್ನು ವಿಮಾನದ ಮೂಲಕ ಊರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ರಾಜ್ಯಸಭಾ ಎಲೆಕ್ಷನ್: ಕೋರ್ ಕಮಿಟಿಗೂ ಮುನ್ನ ನಡೆದ ಮತ್ತೊಂದು ಸಭೆ, ಬಿಜೆಪಿ ಅಭ್ಯರ್ಥಿ ಯಾರು..?...

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಇಂದು (ಶನಿವಾರ) ಸಂಜೆ 5ಕ್ಕೆ ನಿಗದಿಯಾಗಿದೆ. ಆದ್ರೆ, ಅದಕ್ಕೂ ಮುನ್ನ ಉತ್ತರ ಕರ್ನಾಟಕದ ನಾಯಕರ ಸಭೆ ನಡೆದಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
ಫೇಸ್‌ಬುಕ್ ಚಿಟ್ಟೆಯ ಮುಖ ನೋಡಿ ಹನಿಹೀರಲು ಬಂದವನೇ ಟ್ರ್ಯಾಪ್ , ಯುವಕನ ಮೇಲೆ ಹಲ್ಲೆ, ಹಣಕ್ಕೆ ಬೇಡಿಕೆ ಇಟ್ಟವರು ಎಸ್ಕೇಪ್!