
ನವದೆಹಲಿ[ಡಿ.19] ಬಿಜೆಪಿಯಿಂದ ದೂರವಾಗಿರುವ ಹಳೆ ಸ್ನೇಹಿತ ಶಿವಸೇನೆ ಮತ್ತೆ ಕಮಲದ ಜತೆ ಹೆಜ್ಜೆ ಹಾಕಲು ಸಿದ್ಧವಾಗಿದೆ. ಆದರೆ ಎರಡು ಕಂಡಿಶನ್‌ಗಳನ್ನು ಹಾಕಿದೆ.
20196ರಲ್ಲಿಯೇ ನಡೆಯಲಿರುವ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆ 288ರಲ್ಲಿ 155 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸುತ್ತಿದೆ. ಇದಕ್ಕೆ ಬಿಜೆಪಿ ಒಪ್ಪಿಕೊಂಡರೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು.
ಬಿಜೆಪಿ ಮತ್ತು ಶಿವಸೇನೆ ಈ ವರ್ಷದ ಆರಂಭದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಎರಡು ಕಡೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಕೆಲ ಕಾರಣಗಳಿಂದ ದೂರ ಆಗಿದ್ದವು.
ಧೂಳೆಬ್ಬಿಸಿದ ಬಿಜೆಪಿ: 3+2=5 ಮತ್ತೆ ಕಮಲ ತೆಕ್ಕೆಗೆ?
ಮಹಾರಾಷ್ಟ್ರದ ಅಸೆಂಬ್ಲಿಯಲ್ಲಿ ಬಿಜೆಪಿ 121 ಸ್ಥಾನಗಳನ್ನು ಗೆದ್ದಿದ್ದರೆ ಶಿವಸೇನೆ ಬಲ 63. ಮೂಲಗಳು ಹೇಳುವ ಪ್ರಕಾರ ಮುಂದಿನ ಸಾರಿ ಬಿಜೆಪಿ ಶಿವಸೇನೆಗೆ 138 ಸೀಟು ಬಿಟ್ಟುಕೊಡಲು ಸಿದ್ಧವಿದೆ. ಆದರೆ 150 ಸ್ಥಾನಗಳಲ್ಲಿ ತಾನೇ ಸ್ಪರ್ಧೆ ಮಾಡಬೇಕು ಎಂದು ಬಯಸುತ್ತಿದೆ. ಮೂರು ರಾಜ್ಯಗಳ ಸೋಲಿನ ನಂತರ ಬಿಜೆಪಿಯೂ ಸಹ ದೋಸ್ತಿ ಮಾಡಿಕೊಳ್ಳುವುದೇ ಉತ್ತಮ ಎಂದು ಬಯಸುತ್ತಿದೆ. ಆದರೆ ಮತ್ತೆ ಒಂದಾಗಲು ಎರಡು ಪಕ್ಷಗಳ ಪ್ರಮುಖ ನಾಯಕರು ಒಪ್ಪಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.