ಕಾಂಗ್ರೆಸ್ ಆಡಳಿತದ ಮತ್ತೊಂದು ರಾಜ್ಯ ಸರ್ಕಾರದಿಂದ ರೈತರ ಸಾಲ ಮನ್ನಾ

By Web DeskFirst Published Dec 19, 2018, 8:19 PM IST
Highlights

ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ನೀಡಿದ ಮಾತಿನಂತೆ ಮಧ್ಯಪ್ರದೇಶ, ಛತ್ತೀಸ್ ಗಢ ಸರ್ಕಾರದ ನಂತರ ಇದೀಗ ಮತ್ತೊಂದು ರಾಜ್ಯ ರೈತರ ಸಾಲ ಮನ್ನಾ ಮಾಡಿದೆ.

ಜೈಪುರ್, (ಡಿ.19): ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಸರ್ಕಾರ ರೈತರ ಸಾಲ ಮನ್ನಾ ಘೋಷಿಸಿದ ಬೆನ್ನಲ್ಲಿಯೇ  ರಾಜಸ್ತಾನ ಸರ್ಕಾರ ಕೂಡ ಇಂದು [ಬುಧವಾರ] ರೈತರ ಸಾಲ ಮನ್ನಾ ಮಾಡಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹತ್ತು ದಿನದೊಳಗೆ ಕೃಷಿ ಸಾಲ ಮನ್ನಾ ಮಾಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಂಚರಾಜ್ಯ ಚುನಾವಣೆ ವೇಳೆ ಮಾತು ಕೊಟ್ಟಿದ್ದರು. 

ಅಧಿಕಾರ ಸ್ವೀಕರಿಸುತ್ತಿದ್ದಂತೆ ರೈತರ ಸಾಲ ಮನ್ನಾಕ್ಕೆ ಸಹಿ ಹಾಕಿದ ಸಿಎಂ

ಅದರಂತೆ ಈಗಾಗಲೇ ಕಾಂಗ್ರೆಸ್ ಜಯ ಗಳಿಸಿರುವ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅಲ್ಪಕಾಲೀನ ಸಾಲ ಮನ್ನಾ ಘೋಷಣೆ ಮಾಡಿಯಾಗಿದೆ. ಇದೀಗ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೂಡ ರೈತರ 2 ಲಕ್ಷ ರೂ. ವರೆಗಿನ ರೈತರ ಕೃಷಿ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದೆ.

Rajasthan govt announces farm loan waiver for loans upto Rs 2 Lakh. State govt will bear a burden of Rs 18,000 Crore. pic.twitter.com/BUPb33xfWR

— ANI (@ANI)

ಈ ಸಾಲ ಮನ್ನಾದಿಂದ ರಾಜಸ್ತಾನ ಸರ್ಕಾರದ ಮೇಲೆ 18,000 ಸಾವಿರ ಕೋಟಿ ರುಪಾಯಿ ಆರ್ಥಿಕ ಹೊರೆ ಆಗಲಿದೆ.

click me!