
ಮುಂಬೈ[ಡಿ.19] ಆಕೆ ಲೋಕನ್ ಟ್ರೈನ್ ಹತ್ತಿ ಮನೆಗೆ ಬರುತ್ತಿದ್ದಳು. ದೃಷ್ಟಿ ದೋಷ ಹೊಂದಿರುವ ಬಾಲಕಿ ಸ್ವಯಂ ರಕ್ಷಣೆಗೆ ಕರಾಟೆ ಅಭ್ಯಾಸ ಮಾಡಿದ್ದಳು. ತನಗೆ ಮೀಸಲಿರುವ ಆಸನದಲ್ಲಿ ಕುಳಿತುಕೊಂಡಿದ್ದ ಆಕೆಯನ್ನು ವಿಕೃತ ಕೈಗಳು ಬಿಗಿದಪ್ಪಿಕೊಳ್ಳಲು ಮುಂದಾಗಿವೆ. ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿ ತನಗಿಂತಲೂ ಎತ್ತರ ಇದ್ದವನಿಗೆ ಜಾಢಿಸಿದ್ದಾಳೆ. ಜನರೊಂದಿಗೆ ಸೇರಿ ಪೊಲೀಸರಿಗೆ ಒಪ್ಪಿಸಿದ್ದಾಳೆ.
ತನ್ನ ಮೇಲೆ ಎರಗಿ ಬಂದ ಕೈಯನ್ನೇ ಹಿಡಿದು 15 ವರ್ಷದ ಬಾಲಕಿ ತಿರುಗಿಸಿದ್ದಾಳೆ. ಅಲ್ಲದೇ ಸುರಕ್ಷತೆಗೆಂದು ಇಟ್ಟುಕೊಂಡಿದ್ದ ಪಿನ್ ಬಳಸಿ ಆರೋಪಿಯ ಕೈಗೆ ಚುಚ್ಚಿದ್ದಾಳೆ. ರಕ್ಷಣೆಗೆ ಎಂದು ಕಲ್ಯಾಣದಿಂದ ದಾದರ್ ಕಡೆಗೆ ಬಾಲಕಿ ತನ್ನ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ನಡೆದ ಪ್ರಕರಣ ಇದಾಗಿದೆ.
ಓರಲ್ ಸೆಕ್ಸ್‌ಗೆ ಒತ್ತಾಯಿಸಿದವನಿಗೆ ಮಹಿಳೆ ಕೊಟ್ಟ ಮರ್ಮಾಘಾತ, ಪೇರಿ ಕಿತ್ತಿದ್ದು ಹೀಗೆ!
ಆರೋಪಿ 24 ವರ್ಷದ ವಿಶಾಲ್ ಬಲ್ ರಾಮ್ ಸಿಂಗ್‌ನನ್ನು ಬಂಧಿಸಲಾಗಿದೆ. ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ ಸಿಂಗ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತನೆ ಮಾಡಲು ಮುಂದಾಗಿದ್ದ. ಬಾಲಕಿಯ ಮೇಲೆ ಎರಗಿದ್ದವನಿಗೆ ಬಾಲಕಿಯೇ ತಕ್ಕ ಬುದ್ಧಿ ಕಲಿಸಿದ್ದು ಇತರರಿಗೆ ಮಾದರಿಯಾಗಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.