ಬಂಧನ ಭೀತಿಯಲ್ಲಿ ತರೂರ್, ಹೊಸ ಸಿನ್ಮಾದಲ್ಲಿ ದರ್ಶನ್ ಯಶ್ ಖದರ್; ಡಿ.22ರ ಟಾಪ್ 10 ಸುದ್ದಿ!

By Suvarna News  |  First Published Dec 22, 2019, 5:30 PM IST

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುತ್ತಿರುವವರಿಗೆ ಮೋದಿ ಸೂಚನೆ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. ದರ್ಶನ್-ಯಶ್ ಜೊತೆಯಾಗಿ ಸನಿಮಾ ಮಾಡುತ್ತಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ, ಮಂಗಳೂರು ಗೋಲಿಬಾರ್ ಪ್ರಕರಣ ಸೇರಿದಂತೆ ಡಿಸೆಂಬರ್ 22ರ ಟಾಪ್ 10 ಸುದ್ದಿ ಇಲ್ಲಿವೆ.


ಮೋದಿ ಪ್ರತಿಕೃತಿ ಸುಡಿ, ಸಾರ್ವಜನಿಕ ಆಸ್ತಿಯನ್ನಲ್ಲ: ಪ್ರಧಾನಿ

Tap to resize

Latest Videos

undefined

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದೇಶದ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಸಮರ್ಥನೆ ನೀಡಿದ್ದಾರೆ.  ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಮಾಜದ ದೀನದಲಿತರು,ಬಡವರು ಮತ್ತು ಶೋಷಣೆಗೊಳಗಾದವರ ಉದ್ಧಾರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಶಶಿ ತರೂರ್‌ ವಿರುದ್ಧ ಬಂಧನ ವಾರಂಟ್‌!

30 ವರ್ಷಗಳ ಹಿಂದೆ ಬರೆದಿದ್ದ ಪುಸ್ತಕವೊಂದರಲ್ಲಿ ನಾಯರ್‌ ಮಹಿಳೆಯರ ಬಗ್ಗೆ ಅಪಮಾನಕಾರಿ ಅಂಶ ಉಲ್ಲೇಖಿಸಿದ್ದಾರೆ ಎಂಬ ಪ್ರಕರಣ ಸಂಬಂಧ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರಿಗೆ ಕೇರಳ ನ್ಯಾಯಾಲಯವೊಂದು ಬಂಧನ ವಾರಂಟ್‌ ಹೊರಡಿಸಿದೆ.

'ಮಂಗ್ಳೂರು ಗೋಲಿಬಾರ್ ಹಿಂದಿನ ದಿನ ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಪೊಲೀಸ್ರು'

ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದಾರೆ. ಆದ್ರೆ, ಗಲಾಟೆ ಹಿಂದಿನ ದಿನ ಪೊಲೀಸ್ ಅಧಿಕಾರಿಗಳು ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಇದ್ದರು ಎಂದು ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ. 

ನೀಲಂ ಕಣಿವೆ ಮೇಲೆ ಭಾರತ ದಾಳಿ, ಪಿಒಕೆ ಉಗ್ರ ಶಿಬಿರ ಧ್ವಂಸ!.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನೀಲಂ ಕಣಿವೆಯಲ್ಲಿನ ಭಯೋತ್ಪಾದಕ ಶಿಬಿರವೊಂದನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಗ್ರ ಶಿಬಿರ ಎನ್ನಲಾದ ಸ್ಥಳವು ದಾಳಿಯಿಂದಾಗಿ ಹೊತ್ತಿ ಉರಿಯುತ್ತಿರುವ ಚಿತ್ರಗಳೂ ಲಭಿಸಿವೆ.

ಪೌರತ್ವ ಕಾಯ್ದೆ ಪರ ಜನಜಾಗೃತಿ: ತುಂಬಿ ತುಳುಕಿದ ಟೌನ್‌ ಹಾಲ್.

ಪೌರತ್ವ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ  ಈ ಮಸೂದೆಯ ಕುರಿತು ಜನಜಾಗೃತಿ ಮೂಡಿಸಲು ರಾಷ್ಟ್ರವ್ಯಾಪಿಯಲ್ಲಿ ಅಭಿಯಾನಗಳು ಸಹ ನಡೆಯುತ್ತಿವೆ. ಅದರಂತೆ ಇಂದು (ಭಾನುವಾರ) ಬೆಂಗಳೂರಿನ ಟೌನ್‌ ಹಾಲ್‌ ಬಳಿ ಪೌರತ್ವ ಕಾಯ್ದೆ ಪರ ಜನಜಾಗೃತಿ ನಡೆದಿದ್ದು, ಇದಕ್ಕೆ ಜನ ಸಾಗರವೇ ಹರಿದುಬಂದಿದೆ. 

ಬೊರಿವಲಿ ಕಾ ಡಾನ್ ಎಂದ ಫ್ಯಾನ್ಸ್‌ಗೆ ರೋಹಿತ್ ಪ್ರತಿಕ್ರಿಯೆ!

ಭಾರತ ಹಾಗೂ ವೆಸ್ಟ್ ನಡುವಿನ 3ನೇ ಹಾಗೂ ಅಂತಿಮ ಏಕದಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಪಂದ್ಯ ಸರಣಿ ಯಾರಿಗೆ ಅನ್ನೋದನ್ನು ನಿರ್ಧರಿಸಲಿದೆ. ಈ ಮಹತ್ವದ ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು, ಸ್ಫೋಟಕ ಆರಂಭಿಕ ರೋಹಿತ್ ಶರ್ಮಾಗೆ ಬೊರಿವಲಿ ಕಾ ಡಾನ್ ಎಂದು ಕೂಗಿದ್ದಾರೆ. ಇದಕ್ಕೆ ರೋಹಿತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್- ಯಶ್ ಒಟ್ಟಿಗೆ ಸಿನಿಮಾ ಮಾಡ್ತಾರಾ?

ದರ್ಶನ್ -ಯಶ್ ಸೇರಿ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಗಾಂಧಿ ನಗರದಲ್ಲಿ ಗಿರಕಿ ಹೊಡೆಯುತ್ತಿದೆ. ಚಿತ್ರಕ್ಕೆ 'ಜೋಡೆತ್ತು' ಎಂದು ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಸುಮಲತಾನೇ ಪ್ರೊಡ್ಯೂಸರ್ ಎಂದೂ ಹೇಳಲಾಗುತ್ತಿದೆ. 

ಬೆಂಗಳೂರಲ್ಲಿ ಓದಿದ್ದ ಸೇತುರಾಮನ್‌ ಅಮೆರಿಕ ವಿಜ್ಞಾನ ಸಂಸ್ಥೆ ಮುಖ್ಯಸ್ಥ.

ವೈದ್ಯಕೀಯೇತರ ವಿಜ್ಞಾನ ಹಾಗೂ ಎಂಜಿನಿಯರಿಂಗ್‌ನಲ್ಲಿ ಸಂಶೋಧನೆಗೆ ನೆರವಾಗುವ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನಕ್ಕೆ ಬೆಂಗಳೂರಲ್ಲಿ ಓದಿದ್ದ ಡಾ. ಸೇತುರಾಮನ್‌ ಪಂಚನಾಥನ್‌ (58) ಅವರನ್ನು ಮುಖ್ಯಸ್ಥರನ್ನಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇಮಕ ಮಾಡಿದ್ದಾರೆ.

ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!...

ಕಾರಿನ ನಂಬರ್ ಪ್ಲೇಟ್ ಅಥವಾ ರಿಜಿಸ್ಟ್ರೇಶನ್‌ಗಾಗಿ ನಾವು ಹೆಚ್ಚೆಂದರೆ 500, 1,000,2,000 ರೂಪಾಯಿ ಖರ್ಚು ಮಾಡಬಹುದು. ಈ ಹಣದಲ್ಲಿ ರಿಜಿಸ್ಟ್ರೇಶನ್ ಜೊತೆಗೆ ನಂಬರ್ ಪ್ಲೇಟ್ ವಾಹನಕ್ಕೆ ಫಿಕ್ಸ್ ಮಾಡಿ ಆಗಿರುತ್ತೆ. ಆದರೆ ಇಲ್ಲೊಬ್ಬ ಉದ್ಯಮಿ ಕಾರಿನ ರಿಜಿಸ್ಟ್ರೇಶನ್‌‍ಗೆ ಬರೋಬ್ಬರಿ 60 ಕೋಟಿ ರೂಪಾಯಿ ನೀಡಿದ್ದಾನೆ.

ಮೋದಿ ಮುಂದಿನ ಅಜೆಂಡಾ ಎನ್‌ಪಿಆರ್‌? ಸಂಪುಟದಲ್ಲಿ ಚರ್ಚೆ ಸಂಭವ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸುವಲ್ಲಿ ಸಫಲವಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಜಾರಿಗೆ ಮುಂದಾಗುವ ಸಾಧ್ಯತೆ ಇದೆ.  
 

click me!