ರವಿ ಚನ್ನಣ್ಣನವರ್ ವ್ಯಾಪ್ತಿಯಲ್ಲಿ ಪೊಲೀಸರಿಂದಲೇ ನಿರ್ಮಾಪಕನ ಕಿಡ್ನಾಪ್?

By Suvarna News  |  First Published Dec 22, 2019, 4:54 PM IST

ನೆಲಮಂಗಲ ಪೊಲೀಸರಿಂದಲೇ ಕಿಡ್ನಾಪ್? ಸೆಟ್ಲ್ ಮೆಂಟ್ ಹೆಸರಿನಲ್ಲಿ ನಿರ್ದೇಶಕನಿಗೆ ಧಮ್ಕಿ? ಐಜಿ, ಡಿಜಿ, ನ್ಯಾಯಾಲಯಕ್ಕೆ ದೂರು ಕೊಟ್ಟ ನಿರ್ದೇಶಕ ಕಂ ನಿರ್ಮಾಪಕ


ಬೆಂಗಳೂರು(ಡಿ. 22) ಸಿನಿಮಾ‌ ಸ್ಟೈಲ್‌ನಲ್ಲಿ ನಡೀತಾ ಸಿನಿಮಾ ಡೈರೆಕ್ಟರ್ ಕಿಡ್ನಾಪ್ ಎಂಬ ಪ್ರಶ್ನೆ ಮೂಡಿದೆ.  ಡೈರೆಕ್ಟರ್ ಕಿಡ್ನಾಪ್ ಮಾಡಲು ಪೊಲೀಸರೇ ಮುಂದಾದ್ರಾ ಎಂದು ಪ್ರಶ್ನೆಎದುರಾಗಿದೆ. ಖಡಕ್ ಆಫೀಸರ್ ಅಂಡರ್ ನಲ್ಲಿ ಕೆಲಸ‌ ಮಾಡುವ ಅಧಿಕಾರಿಗಳಿಂಲೇ ಕಿಡ್ನಾಪ್ ನಡೆಯಿತಾ? ಎಂಬ ಪ್ರಶ್ನೆ ಎದ್ದಿದೆ.  

ಕುತೂಹಲಕಾರಿ ಕತೆಯಲ್ಲಿ ಅಸಲಿಗೆ ನಡೆದಿದ್ದು  ಅಲ್ಲಿ ನಡೆದದ್ದು ಅಪಹರಣನಾ ಇಲ್ಲ ಆರೋಪಿ ಸೆರೆಯಾ? ಈ ಸ್ಟೋರಿ ನೋಡಲೇಬೇಕು.

Latest Videos

undefined

'ಪತಿ ಬೇಕು ಡಾಟ್ ಕಾಮ್' ಸಿನಿಮಾ ನಿರ್ದೇಶಕ ರಾಕೇಶ್ ನ  ಅವರನ್ನು ನೆಲಮಂಗಲ ಪೊಲೀಸರೇ ಅಪಹರಣ ಮಾಡಿದ್ರಾ? ಅಕ್ಟೋಬರ್ 21 ರಂದು ವಿಜಯನಗರ ಮನೆಯಿಂದ ಕಿಡ್ನಾಪ್ ಮಾಡಿದ್ರಾ ಎಂಬುದಕ್ಕೆ ಉತ್ತರ ಬೇಕಾಗಿದೆ.

ಭತ್ತದ ಚೀಲ ಕದ್ದು 36 ವರ್ಷದಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ

ನಿರ್ದೇಶಕರನ್ನು ಕಾರಿನಲ್ಲಿ ರೋಹಿತ್ ನೆಲಮಂಗಲ ಠಾಣೆಗೆ ಕರೆದೊಯ್ದಿದ್ದ ಕ್ರೈಂ ಪಿಸಿ ಕೇಶವ ಅಂಡ್ ಟೀಂ ಸೆಟ್ಲಮೆಂಟ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ನಿರ್ದೇಶಕ ರಾಕೇಶ್ ದೂರು ನೀಡಿದ್ದಾರೆ.

ಇಬ್ಬರು ನಿರ್ಪಾಪಕರ ನಡುವೆ ಜಟಾಪಟಿ ಆರಂಭವಾದಾಗ ಅದನ್ನು ಬಗೆಹರಿಸಲು ನಿರ್ದೇಶಕ ಕಂ ನಿರ್ಮಾಪಕರಾಗಿರುವ ರಾಕೇಶ್ ವಿಜಯನಗರ ಠಾಣೆಗೆ ದೂರು ನೀಡಿದ್ದರು.  ಹಣಕಾಸು ವಿಚಾರದಲ್ಲಿ ಇನ್ನೊಬ್ಬ ನಿರ್ಮಾಪಕ ಮಂಜುನಾಥ್ ಧಮ್ಕಿ ಹಾಕಿದ್ದಾರೆ ಎಂದು ರಾಕೇಶ್ ದೂರು ನೀಡಿದ್ದರು.

ಇದಾದ ನಂತರ ಎಫ್ ಐ ಆರ್ ದಾಖಲಾಗಿ ಮಂಜುನಾಥ್ ಜಾಮೀನು ಸಹ ಪಡೆದುಕೊಂಡಿದ್ದರು. ಜಾಮೀನು ಪಡೆದ ಮಂಜುನಾಥ್ ನೆಲಮಂಗಲ ಠಾಣೆಯಲ್ಲಿ ರಾಕೇಶ್ ಮೇಲೆ ದೂರು ದಾಖಲು ಮಾಡುತ್ತಾರೆ.  ಸೆ. 27 ರಂದು ರಾಕೇಶ್ ಮೇಲೆ‌ ನೆಲಮಂಗಲದಲ್ಲಿ ಎಫ್ ಐಆರ್   ದಾಖಲಾಗುತ್ತದೆ.  ಅ. 21 ಕ್ಕೆ ನೆಲಮಂಗಲ ಪೊಲೀಸರು ರಾಕೇಶ್ ಅವರನ್ನು ಕರೆದುಕೊಂಡು ಹೋಗುತ್ತಾರೆ.

ರಾಕೇಶ್ ಠಾಣೆಗೆ ಹೋಗ್ತಿದ್ದಂತೆ ರೋಹಿತ್ ಅಣ್ಣನಿಗೆ ಕಾಲ್ ಮಾಡಿ ಸೆಟ್ಲಮೆಂಟ್ ಮಾಡಿಕೊಳ್ಳಲು ಪೊಲೀಸರೇ ಆಫರ್ ನೀಡುತ್ತಾರೆ. ಭಯಗೊಂಡ ರಾಕೇಶ್ ಅಣ್ಣ ಚಂದ್ರಾಲೇಔಟ್ ಠಾಣೆಗೆ ದೌಡಾಯಿಸಿ ವಿವರ ತಿಳಿಸುತ್ತಾರೆ.

ಚಂದ್ರಾಲೇಔಟ್ ಪೊಲೀಸರು ನೆಲಮಂಗಲಕ್ಕೆ ಕರೆ ಮಾಡಿ ಕೇಳಿದಾಗ ರಾಕೇಶ್ ಇಲ್ಲ ಎಂದು ಪೇದೆ ಕೇಶವ ಹೇಳುತ್ತಾರೆ. ಮತ್ತೆ ಕಾಲ್ ಮಾಡಿ ಮಿಸ್ಸಿಂಗ್ ಕಂಪ್ಲೈಂಟ್ ಮಾಡ್ತಿದ್ದೀವಿ ಎಂದಾಗ ನೆಲಮಂಗಲ ಪೊಲೀಸರು ಗಾಬರಿ ಬೀಳುತ್ತಾರೆ.

ನನ್ನನ್ನು  ರಾತ್ರಿವರೆಗೂ ಸೆಲ್ ನಲ್ಲಿಟ್ಟು ಸೆಟ್ಲಮೆಂಟ್ ಮಾಡಿಕೊಳ್ಳುವಂತೆ ಪಿಎಸ ಐ ಮಂಜುನಾಥ್ ಸಹ ಧಮ್ಕಿ ಹಾಕಿದ್ದರು. ಸೆಟ್ಲಮೆಂಟ್ ಇಲ್ಲ ಅಂದ್ರೆ ರೌಡಿ ಶೀಟ್ ಒಪನ್ ಮಾಡಿ ಶೂಟ್ ಔಟ್ ಮಾಡುವುದಾಗಿ ಹೆದರಿಸಿದ್ದರು.  ಇದಕ್ಕೆ ಒಪ್ಪದಿದ್ದಾಗ ಬಲವಂತವಾಗಿ ಚೆಕ್ ಗೆ ಸಹಿ ಹಾಕಿಸಿಕೊಂಡು ನೆಲಮಂಗಲ ಪೊಲೀಸರು ಬಿಟ್ಟು ಕಳಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ .ಡಿ ಚನ್ನಣ್ಣನವರ್ , ಐಜಿ, ಡಿಜಿ ಮತ್ತು ನ್ಯಾಯಾಲಯಕ್ಕೆ ನಿರ್ದೇಶಕ ರಾಕೇಶ್ ದೂರು ನೀಡಿದ್ದಾರೆ.

 

click me!