ಸ್ಯಾಂಡಲ್‌ವುಟ್ ನಟ ಸಂಚಾರಿ ವಿಜಯ್ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಎಸ್‌ವೈ ಮಾತ್ರವಲ್ಲ, ಉತ್ತರ ಪ್ರದೇಶದಲ್ಲೂ ಸಿಎಂ ಬದಲಾವಣೆ ಇಲ್ಲ ಎಂದಿದೆ ಬಿಜೆಪಿ ಹೈಕಮಾಂಡ್. ಕೋವಿಡ್ ಮೂಲ ಪತ್ತೆಗೆ ಸಹಕರಿಸಲು ಚೀನಾಗೆ ಖಡಕ್ ವಾರ್ನಿಂಗ್ ನೀಡಲಾಗಿದೆ. ಅಲರ್ಜಿ ಇದ್ದವರು ಲಸಿಕೆ ಪಡೆಯಬಹುದೇ? ವಿಕ್ರಾಂತ್ ರೋಣ ಕುರಿತ ಇಂಟ್ರಿಸ್ಟಿಂಗ್ ಮಾಹಿತಿ ಸೇರಿದಂತೆ ಜೂನ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬೈಕ್ ಅಪಘಾತ; ನಟ ಸಂಚಾರಿ ವಿಜಯ್ ಪರಿಸ್ಥಿತಿ ಚಿಂತಾಜನಕ...
ಒಂದು ಕಡೆ ಕೊರೋನಾ ಸ್ಯಾಂಡಲ್ ವುಡ್ ನ್ನು ಕಾಡುತ್ತಿದ್ದರೆ ಇನ್ನೊಂದು ಕಡೆಯಿಂದ ಅಪಘಾತದ ಸುದ್ದಿ ಬಂದಿದೆ. ನಟ ಸಂಚಾರಿ ವಿಜಯ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಚೀನಾಗೆ ಖಡಕ್ ವಾರ್ನಿಂಗ್; ಕೋವಿಡ್ ಮೂಲ ಪತ್ತೆಗೆ ಸಹಕರಿಸಲು ಸೂಚಿಸಿದ WHO!...
ಈ ಸಂಕಷ್ಟಕ್ಕೆ ಚೀನಾ ಕಾರಣ ಅನ್ನೋ ಆರೋಪಗಳು ಬಲವಾಗುತ್ತಿದೆ. ಆದರೆ ಚೀನಾ ನಿರಾಕರಿಸುತ್ತಲೇ ಬಂದಿದೆ. ಚೀನಾಗೆ ವಿಶ್ವ ಆರೋಗ್ಯ(WHO) ಸಂಸ್ಥೆ ಕೂಡ ಬೆನ್ನೆಲುಬಾಗಿ ನಿಂತಿವೆ ಅನ್ನೋ ಆರೋಪಗಳಿವೆ. ಇದೀಗ ಒತ್ತಡ ಹೆಚ್ಚಾಗುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆ, ವೈರಸ್ ಮೂಲ ಪತ್ತೆಗೆ ಸಹಕರಿಸುವಂತೆ ಚೀನಾಗೆ ಖಡಕ್ ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲಿ ಯೋಗಿ ನಾಯಕತ್ವ ಅಬಾಧಿತ!...
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬದಲಾವಣೆಗೆ ಸಂಬಂಧಿಸಿದಂತೆ ಎದ್ದಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿ ಹೈಕಮಾಂಡ್ ಯೋಗಿ ಆದಿತ್ಯನಾಥ್ ಅವರ ನಾಯಕತ್ವದ ಮೇಲೆ ಸಂಪೂರ್ಣ ವಿಶ್ವಾಸ ಇಟ್ಟಿದ್ದು, 2022ರ ವಿಧಾನಸಭೆ ಚುನಾವಣೆಯನ್ನು ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲೇ ಎದುರಿಸಲು ಒಲುವು ತೋರಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ 70 ದಿನದ ಕನಿಷ್ಠ: 84,332 ಮಂದಿಗೆ ಸೋಂಕು, 4,002 ಸಾವು!...
ದೇಶಾದ್ಯಂತ ಶನಿವಾರ 84,332 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಶನಿವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಸತತ 3ನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಜೊತೆಗೆ ಕಳೆದ 70 ದಿನಗಳ ಸೋಂಕಿತರ ಕನಿಷ್ಠ ಸಂಖ್ಯೆ ಇದಾಗಿದೆ.
ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ಇಲ್ಲಿದೆ ಸ್ಪೇಷಲ್ ಅಪ್ಡೇಟ್!...
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ನಟ ರವಿಶಂಕರ್ ಗೌಡ ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ. ಡಬ್ಬಿಂಗ್ ಮುಗಿಸಿದ ರವಿಶಂಕರ್ ಚಿತ್ರ ವಿಮರ್ಶೆ ಕೂಡ ಮಾಡಿದ್ದಾರೆ. ಗೆಳೆಯ ದೀಪು ಮತ್ತು ತಂಡಕ್ಕೆ ಶುಭ ಹಾರೈಸಿದ್ದಾರೆ.
ಪೆಟ್ರೋಲ್ ಬಳಿಕ ಡೀಸೆಲ್ ಕೂಡ 100 ರು.!...
ದೇಶಾದ್ಯಂತ ಪೆಟ್ರೋಲ್ ದರ ಶತಕ ಬಾರಿಸಿದ ದಾಟಿದ ಬೆನ್ನಲ್ಲೇ, ಇದೀಗ ಡೀಸೆಲ್ ದರವೂ 100 ರು. ಆಗಿದೆ. ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಡೀಸೆಲ್ ದರ ಶನಿವಾರ 100 ರು. ದಾಟಿದೆ.
ಅಲರ್ಜಿ ಸಮಸ್ಯೆ ಇದ್ದರೆ ಕೋವಿಡ್ ಲಸಿಕೆ ಪಡೆಯಬಹುದೇ? ನೀತಿ ಆಯೋಗದಿಂದ ಸ್ಪಷ್ಟನೆ!...
ಕೊರೋನಾ ವೈರಸ್ ಅಪಾಯದಿಂದ ದೂರವಿರಲು ಪ್ರತಿಯೊಬ್ಬರು ಲಸಿಕೆ ಪಡೆಯುವುದು ಅವಶ್ಯಕವಾಗಿದೆ. ಆದರೆ ಹಲವು ಗೊಂದಲ, ಭಯ, ಸುಳ್ಳು ಪ್ರಚಾರಗಳಿಂದ ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲಿ ಅಲರ್ಜಿ ಸಮಸ್ಯೆ ಇದ್ದವರಿಗೆ ಲಸಿಕೆ ಉತ್ತಮವಲ್ಲ ಅನ್ನೋ ಮಾತುಗಳು ಇವೆ. ಆದರೆ ಈ ಗೊಂದಲಕ್ಕೆ ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಉತ್ತರ ನೀಡಿದ್ದಾರೆ.
ಕಾಂಗ್ರೆಸ್–ಬಿಜೆಪಿಗಳೆರಡೂ ಶೋಷಣೆ ಪರ ನಿಂತಿವೆ: ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದ HDK...
ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸುತ್ತಿದೆ. ಇತ್ತ ಕಾಂಗ್ರೆಸ್ ದೇಶದಾದ್ಯಂತ ಹೋರಾಡುತ್ತಿದೆ. ಪೆಟ್ರೋಲ್ ಬೆಲೆ ಇಳಿಯಬೇಕಿದ್ದರೆ ಅದನ್ನು GSTಗೆ ಸೇರಿಸಬೇಕೆಂದು ಕೇಂದ್ರ ಹೇಳಿದರೆ, ಕಾಂಗ್ರೆಸ್ ಕೂಡ ಅದನ್ನೇ ಪ್ರತಿಪಾದಿಸಿದೆ. ಹಾಗಾದರೆ, ಕಾಂಗ್ರೆಸ್ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್ ಅನ್ನು GSTಗೆ ಸೇರಿಸಲೋ? ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡಿ: ತುಳುನಾಡಿನಲ್ಲಿ ಟ್ವಿಟ್ಟರ್ ಅಭಿಯಾನ!...
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೇ ನಾನಾ ಧರ್ಮದ ಜನರಿದ್ದರೂ ಇವರನ್ನೆಲ್ಲಾ ಒಂದಾಗಿಸಿರುವುದು ತುಳು ಭಾಷೆ. ಧರ್ಮ ಎಂಬ ಗಡಿಯನ್ನು ತಳ್ಳಿ ಕರಾವಳಿ ಭಾಗದ ಜನರನ್ನು ಒಂದಾಗಿಸಿದೆ ಈ ಭಾಷೆ. ಸದ್ಯ ಈ ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಒತ್ತಾಯಿಸಿ ಕರಾವಳಿಯಲ್ಲಿ ಟ್ವಿಟರ್ ಅಭಿಯಾನ ಆರಂಭವಾಗಿದೆ.