ನೆಲದಡಿ ಪತ್ತೆಯಾಯ್ತು 3,787 ಮೂಳೆಗಳು, 7 ಮಂದಿಯನ್ನು ಹತ್ಯೆಗೈದ ಶಂಕೆ!

By Suvarna News  |  First Published Jun 13, 2021, 4:27 PM IST

* ಶಂಕಿತ ಆರೋಪಿ ಮನೆಯೊಳಗೆ ಪತ್ತೆಯಾಯ್ತು ರಾಶಿ ರಾಶಿ ಮೂಳೆಗಳು

* ಹದಿನೇಳು ಮಂದಿಯ ಮೂಳೆಗಳಿರಬಹುದೆಂಬ ಶಂಕೆ

* ಪೊಲೀಸ್ ಕಮಾಂಡರ್ ಪತ್ನಿ ನಾಪತ್ತೆ ಪ್ರಕರಣದಿಂದ ಸಿಕ್ಕಾಕೊಂಡ ಆರೋಪಿ


ಮೆಕ್ಸಿಕೋ ಸಿಟಿ(ಜೂ.13): ಮೆಕ್ಸಿಕನ್ ಸಿಟಿಯಲ್ಲಿರುವ ಮನೆಯೊಂದನ್ನು ಅಗೆಯುವ ವೇಳೆ 3,787 ಮೂಳೆಯ ಭಾಗಗಳು ಪತ್ತೆಯಾಗಿವೆ. ಇವು ಹದಿನೇಳು ವಿಭಿನ್ನ ವ್ಯಕ್ತಿಗಳ ಮೂಳೆಗಳೆನ್ನಲಾಗಿದೆ.  ಇಲ್ಲಿ ಮೇ 17ರಿಂದ ಈ ಅಗೆಯುವ ಕಾರ್ಯ ಆರಮಭವಾಗಿತ್ತು. ಆದರೀಗ ಪರಿಸ್ಥಿತಿ ಅವಲೋಜಕಿಸಿದ ಅಧಿಕಾರಿಗಳು ಈ ಕಾರ್ಯ ಇಲ್ಲಿಗೇ ನಿಲ್ಲುವುದಿಲ್ಲ ಎಂದಿದ್ದಾರೆ. ಶಂಕಿತ ಆರೋಪಿ ವಾಸಿಸುತ್ತಿದ್ದ ಮನೆಯೊಳಗಿನ ಸಂಪೂರ್ಣ ನೆಲವನ್ನು ತನಿಖಾಧಿಕಾರಿಗಳು ಅಗೆದಿದ್ದಾರೆನ್ನಲಾಗಿದೆ. 

NGO ನಡೆಸ್ತಿದ್ದ ಮಹಿಳೆಯಿಂದ ಬಾಲಕಿ ಮೇಲೆ ಲೈಂಗಿಕ ಶೋಷಣೆ, ಅರೆಸ್ಟ್!

Tap to resize

Latest Videos

ಪ್ರಕರಣ ಬಹಿರಂಗಗೊಂಡಿದ್ದು ಹೇಗೆ?

ಮೆಕ್ಸಿಕನ್ ಟಿಟಿ ಕಾನೂನಿನ ಅನ್ವಯ ಸದ್ಯ ಈ ಆರೋಪಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಪೊಲೀಸ್ ಕಮಾಂಡರ್ ಒಬ್ಬ ತನ್ನ ಪತ್ನಿ ನಾಪತ್ತೆಯಾದಾಗ ಈ ವ್ಯಕ್ತಿಯ ಮೇಲೆ ಅನುಮಾನಪಟ್ಟು ಬಂಧಿಸಿದಾಗ ಈತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈ ಶಂಕಿತ ವ್ಯಕ್ತಿ ಪೊಲೀಸ್ ಕಮಾಂಡರ್ ಪತ್ನಿಯ ಪರಿಚಿತನಾಗಿದ್ದ. ಆತನೇ ಖರೀದಿಗೆಂದು ಹೋಗುವಾಗ ಆಕೆಯನ್ನು ಕರೆದೊಯ್ಯುತ್ತಿದ್ದ. ಆದರೆ ಅದೊಂದು ದಿನ ಕಮಾಂಡರ್ ಪತ್ನಿ ಮನೆಗೆ ಮರಳಿ ಬಂದಿಲ್ಲ. ಹೀಗಾಗಿ ಪೊಲೀಸ್ ಕಮಾಂಡರ್‌ಗೆ ಈ ಮಿಸ್ಸಿಂಗ್ ಕೇಸ್ ಹಿಂದೆ ಈ ವ್ಯಕ್ತಿ ಕೈವಾಡ ಇದೆ ಎಂಬ ಅನುಮಾನ ಮೂಡಿದೆ. ಸಿಸಿಟಿವಿ ಕ್ಯಾಮೆರಾದಲ್ಲೂ ಮಹಿಳೆ ಆ ಶಂಕಿತ ವ್ಯಕ್ತಿಯ ಮನೆಗೆ ಹೋಗುವ ದೃಶ್ಯಗಳಿದ್ದರೂ, ಮರಳಿ ಬರುವ ದೃಶ್ಯಗಳಿಲಿಲ್ಲ. ಇದಾದ ಬಳಿಕ ಮಹಿಳೆಯ ವಸ್ತುಗಳು ಶಂಕಿತ ವ್ಯಕ್ತಿಯ ಮನೆಯಲ್ಲಿ ಪತ್ತೆಯಾಗಿವೆ.

ರಕ್ಕಸನಾದ ಅಪ್ಪ: ಹೆಂಡತಿ ಇಲ್ಲದಾಗ ಮಗಳ ಮೇಲೆ ರೇಪ್: ಮಗುವಿಗೆ ಜನ್ಮ ಕೊಟ್ಟ ಬಾಲಕಿ!

ಕಪಾಟಿನಲ್ಲಿತ್ತು ಹಲವಾರು ಐಡಿಗಳು

ಮನೆಯೊಳಗಿದ್ದ ಕಪಾಟಿನಲ್ಲಿ ಅನೇಕ ಐಡಿಗಳು ಪತ್ತೆಯಾಗಿವೆ. ಇನ್ನು ಈ ಐಡಿಗಳೆಲ್ಲವೂ ಕಳೆದ ಕೆಲ ವರ್ಷದಿಂದ ನಿಗೂಢವಾಗಿ ನಾಪತ್ತೆಯಾಗಿದ್ದವರದಾಗಿತ್ತು. ಇನ್ನು ನೆಲದಡಿ ಸಿಕ್ಕ ಮೂಳೆಗಳೂ ಇವರದ್ದೆನ್ನಲಾಗಿದೆ. ಸದ್ಯ ಮೂಳೆಗಳ ಅಧ್ಯಯನ ಆರಂಭಿಸಲಾಗಿದೆ. ಬಹಳಷ್ಟು ಸ್ವಚ್ಛಗೊಳಿಸಿದ ಬಳಿಕ ಈ ಮೂಳೆಗಳ ಗುರುತು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದೇವೆ. ಈವರೆಗೂ ಪತ್ತೆ ಹಚ್ಚಲಾದ ಮೂಳೆಗಳಿಂದ ಇವು ಒಟ್ಟು ಹದಿನೇಳು ಮಂದಿಯ ಮೂಳೆಗಳೆಂದು ಹೇಳಬಹುದು ಎಂದಿದ್ದಾರೆ. 

click me!