ಆರ್ಟಿಕಲ್ 370 ರದ್ದತಿ: ಮೋದಿಗೆ ರಷ್ಯಾದ ಬೆಂಬಲ ಸಿಕ್ಕೈತಿ!

By Web DeskFirst Published Aug 10, 2019, 6:00 PM IST
Highlights

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆ| ಭಾರತದ ನಿರ್ಣಯಕ್ಕೆ ರಷ್ಯಾದ ಬೆಂಬಲ| ಮೋದಿ ಸರ್ಕಾರದ ನಿರ್ಣಯ ಸರಿಯಾಗಿದೆ ಎಂದ ರಷ್ಯಾ| ಸಂವಿಧಾನದ ಚೌಕಟ್ಟಿನೊಳಗೆ ವಿಶೇಷ ಸ್ಥಾನಮಾನ ರದ್ದತಿ ಎಂದ ರಷ್ಯಾ| 

ನವದೆಹಲಿ(ಆ10): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ  ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಮೋದಿ ಸರ್ಕಾರಕ್ಕೆ ಇದೇ ಮೊದಲ ಬಾರಿಗೆ ವಿದೇಶಿ ಬೆಂಬಲ ದೊರೆತಿದೆ. 

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ, ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಭಾರತದ ನಿರ್ಧಾರವನ್ನು ರಷ್ಯಾ ಬೆಂಬಲಿಸಿದೆ.

ಭಾರತದ ನಿರ್ಧಾರದಿಂದ ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿರುವ ರಷ್ಯಾ, ಇದರಿಂದ ಎರಡೂ ದೇಶಗಳು ಆಕ್ರಮಣಕಾರಿ ನೀತಿ ಅನುಸರಿಸುವುದಿಲ್ಲ ಎಂದು ನಿರ್ಧಾರವನ್ನು ವಿಶ್ಲೇಷಣೆ ಮಾಡಿದೆ.  

ಭಾರತ ಸಂವಿಧಾನದ ಚೌಕಟ್ಟಿನೊಳಗೆ ಜಮ್ಮು- ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿದ್ದು, ಈ ನಿರ್ಧಾರವನ್ನು ರಷ್ಯಾ ಬೆಂಬಲಿಸಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. 

click me!