ರಾಜ್ಯದ ಅಲ್ಪಸಂಖ್ಯಾತ ಇಲಾಖೆಯಲ್ಲಿ ನಿಯಮ ಬಾಹಿರವಾಗಿ ಮುಂಬಡ್ತಿ ನೀಡಲಾಗುತ್ತಿದೆ, ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳನ್ನು ಉಲ್ಲಂಘಿಸಿ, ಕಾರ್ಯಕಾರಿ ಆದೇಶದ ಮೂಲಕ ತರಾತುರಿಯಲ್ಲಿ ಮುಂಬಡ್ತಿ ನೀಡಲು ಆದೇಶಿಸಲಾಗಿದೆ.
ಬೆಂಗಳೂರು (ಏ.3): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಗಿನ ನೇರಕ್ಕೆ ಸರ್ಕಾರದ ಮಟ್ಟದಲ್ಲಿ ನ್ಯಾಯ ಉಲ್ಲಂಘನೆ ಆಗುತ್ತಿದ್ದರೂ ಸುಮ್ಮನೆ ಕುಳಿತಿದ್ದಾರೆ.ರಾಜ್ಯದಲ್ಲಿ ಅಲ್ಪಸಂಖ್ಯಾತ ಇಲಾಖೆಯಲ್ಲಿ ನಿಯಮ ಬಾಹಿರ ಮುಂಬಡ್ತಿಯಾಗುತ್ತಿದ್ದರೂ ಸಿಎಂ ಗಮನಕ್ಕೆ ಮಾತ್ರ ಇದು ಬಂದಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಧಕ್ಕೆ ತಂದು ಮುಂಬಡ್ತಿ ನೀಡಲಾಗುತ್ತಿದೆ. ನಿಯಮ ತಿದ್ದುಪಡಿ ಮಾಡಿ ಮುಂಬಡ್ತಿ ನೀಡುವ ಬದಲು ಹೊಸ ಕ್ರಮಕ್ಕೆ ತಿರ್ಮಾನ ಮಾಡಲಾಗಿದೆ.
ಕಾರ್ಯಕಾರಿ ಆದೇಶದ ಮೂಲಕ ತರಾತುರಿಯಲ್ಲಿ ಮುಂಬಡ್ತಿ ನೀಡಲು ಆದೇಶ ನೀಡಲಾಗಿದೆ. ಅದರೊಂದಗೆ ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಭರವಸೆಯನ್ನು ಸಚಿವ ಜಮೀರ್ ಅಹಮದ್ ಮರೆತಿದ್ದಾರೆ. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆಕ್ಷೇಪಕ್ಕೆ ಸಮಜಾಯಿಷಿ ಕೊಡುವ ವೇಳೆ ಜಮೀರ್ ಈ ಭರವಸೆ ನೀಡಿದ್ದರು. ವೃಂದ ಮತ್ತು ನೇಮಕಾತಿ ನಿಯಮ ರಚಿಸಿ ಆ ಮೂಲಕ ಮುಂಬಡ್ತಿ ನೀಡುವುದಾಗಿ ವಿಧಾನಪರಿಷತ್ ಕಲಾಪದಲ್ಲಿ ಸಚಿವ ಜಮೀರ್ ಅಹಮದ್ ಭರವಸೆ ಕೊಟ್ಟಿದ್ದರು. ಈಗ ನೇಮಕಾತಿ ನಿಯಮ ಬದಲಾವಣೆ ಮುನ್ನವೇ ಅಲ್ಪಸಂಖ್ಯಾತ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗುತ್ತಿದೆ.
ಒಳ ಮೀಸಲಾತಿಗೂ ಜಾರಿಯಾಗುವ ಸೂಚನೆ: ಮುಂಬಡ್ತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಕುರಿತು ಆದೇಶ ಹೊರಬೀಳುವ ಸಾಧ್ಯತೆ ಇದೆ. ಆದೇಶ ಹೊರಬಿಳುವ ಮುನ್ನವೇ ಕಾರ್ಯಾಕಾರಿ ಆದೇಶದ ಮೂಲಕ ಮುಂಬಡ್ತಿ ನೀಡಲು ಪ್ಲ್ಯಾನ್ ಮಾಡಲಾಗಿದೆ. ತರಾತುರಿ ಆದೇಶ ಹೊರಡಿಸುವ ಮೂಲಕ ಪರಿಶಿಷ್ಟ ನೌಕರರ ಹಿತಕ್ಕೆ ಧಕ್ಕೆ ತಂದಿರುವ ಬಗ್ಗೆ ಚರ್ಚೆ ಆಗುತ್ತಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಸ್.ಸಿ ನೌಕರರಿಗೆ ಇದರಿಂದ ಅನ್ಯಾಯವಾಗಲಿದೆ. ಅಲ್ಪಸಂಖ್ಯಾತರ ಇಲಾಖೆಯಲ್ಲಿ 2010 ರಿಂದಲೂ ನೇಮಕಾತಿ ನಿಯಮ ರೂಪಿಸಿಲ್ಲ. 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ.
ಒಳಮೀಸಲಾತಿ ವರದಿ ಬರುವ ಮುನ್ನ ಯಾವುದೇ ಮುಂಬಡ್ತಿ ಕೊಡಬಾರದು ಎಂದು ಸರ್ಕಾರ ಹೇಳಿದೆ. ಮುಂಬಡ್ತಿ, ನೇಮಕಾತಿ ಮಾಡದಂತೆ ಸಿಎಂ ಸೂಚನೆ ಕೊಟ್ಟಿದ್ದರೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅದಕ್ಕೆ ಕ್ಯಾರೇ ಎಂದಿಲ್ಲ.ನಿಯಮ ಬಾಹಿರವಾಗಿ ಮುಂಬಡ್ತಿ ನೀಡುವ ಆದೇಶವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೊರಡಿಸಿದೆ.
ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ಬೆನ್ನಲ್ಲೇ ಶಿಕ್ಷಣ-ಉದ್ಯೋಗ ಮೀಸಲಾತಿ ಶೇ.10ಕ್ಕೆ ಹೆಚ್ಚಿಸಲು ಸ್ಪಂದಿಸಿದ ಸರ್ಕಾರ