ಅಧಿಕಾರಿಗಳ ವರ್ಗಾವಣಾ ಕಾಯಕದಲ್ಲಿ ರೇವಣ್ಣ ಫುಲ್ ಬ್ಯೂಸಿ!

By Web DeskFirst Published Jul 10, 2019, 5:20 PM IST
Highlights

ಸರ್ಕಾರ ಉರುಳೋದು ಪಕ್ಕಾ ಆಯ್ತಾ..?| ಮೊನ್ನೆಯಿಂದಲೂ ಸೂಪರ್ ಸಿಎಂ ರೇವಣ್ಣ ಇಲಾಖೆಯಲ್ಲಿ ನಿರಂತರ ಟ್ರಾನ್ಸ್ ಫರ್| ಸರ್ಕಾರ ಹೋಗುವ ಕೊನೆ ಘಳಿಗೆಯಲ್ಲಿ ಟ್ರಾನ್ಸ್ ಫರ್ ಮೇಲೆ ಟ್ರಾನ್ಸ್ ಫರ್| 99 ಸಹಾಯಕ ಇಂಜಿನಿಯರ್, 109 ಜ್ಯೂನಿಯರ್ ಇಂಜಿನಿಯರ್ ಗಳ ವರ್ಗಾವಣೆ

ಬೆಂಗಳೂರು[ಜು.10]: ರಾಜ್ಯ ರಾಜಕೀಯದಲ್ಲಿ ಶಾಸಕರ ರಾಜೀನಾಮೆ ಪರ್ವ ಆರಂಭವಾದಾಗಿನಿಂದಲೂ ಸೂಪರ್ ಸಿಎಂ ರೇವಣ್ಣ ಲೋಕೋಪಯೋಗಿ ಇಲಾಖೆಯಲ್ಲಿ ನಿರಂತರ ಟ್ರಾನ್ಸ್ ಫರ್ ಮಾಡಿಸುವುದರಲ್ಲಿ ತಲ್ಲೀನರಾಗಿದ್ದಾರೆ.

ಸರ್ಕಾರ ಉರುಳೋ ಭೀತಿ: ಕಡತಗಳಿಗೆ ಸಹಿ ಹಾಕೋದ್ರಲ್ಲಿ ಸಿಎಂ ಫುಲ್ ಬ್ಯುಸಿ

ಸರ್ಕಾರ ಪತನಗೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿರುವ ಬೆನ್ನಲ್ಲೇ ಟ್ರಾನ್ಸ್ ಫರ್ ಗಳು ಆರಂಭವಾಗಿವೆ. 99 ಸಹಾಯಕ ಇಂಜಿನಿಯರ್, 109 ಜ್ಯೂನಿಯರ್ ಇಂಜಿನಿಯರ್ ಗಳ ವರ್ಗಾವಣೆ ಮಾಡಲಾಗಿದೆ. ಹೀಗೆ ಒಂದೇ ದಿನದಲ್ಲಿ ಒಟ್ಟು 200 ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆಗೆ ಲೋಕೋಪಯೋಗಿ ಸಚಿವ ರೇವಣ್ಣ ಆದೇಶ ಹೊರಡಿಸಿದ್ದಾರೆ

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೂ ಬಾಕಿ ಇದೆ

ನಿತ್ಯ ವಿಧಾನಸೌಧಕ್ಕೆ ಆಗಮಿಸುವ ರೇವಣ್ಣ ತರಾತುರಿಯಲ್ಲಿ ಪ್ರಮೋಷನ್, ಟ್ರಾನ್ಸ್ ಫರ್ ಮಾಡುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ನಡೆದಿರುವ ವರ್ಗಾವಣೆಗಳನ್ನು ಹೊರತುಪಡಿಸಿ ಇನ್ನೂ ಎಸ್ ಡಿಎ, ಎಫ್ ಡಿಎ ಟ್ರಾನ್ಸ್ ಫರ್ ಬಾಕಿ ಇದೆ ಎನ್ನಲಾಗಿದೆ.

ಕಡತಕ್ಕೆ ಸಹಿ ಮಾಡಿ ಬಂದು, ಪೊಲೀಸರಿಗೆ ಶಾಕ್ ಕೊಟ್ಟ ಸಿಎಂ ಹೆಚ್ಡಿಕೆ

click me!