ಮತ್ತೆರಡು ವಿಕೆಟ್ ಪತನ: ಟೀಂ ಇಂಡಿಯಾದ್ದಲ್ಲ, ದೋಸ್ತಿ ಸರ್ಕಾರದ್ದು!

By Web DeskFirst Published Jul 10, 2019, 4:21 PM IST
Highlights

ದೋಸ್ತಿಗೆ ಮತ್ತೆರಡು ಕಂಟಕ| ರಾಜೀನಾಮೆ ಪಟ್ಟಿಗೆ ಎರಡು ಶಾಸಕರ ಹೆಸರು ಸೇರ್ಪಡೆ| ಪತನದ ಅಂಚಿನಲ್ಲಿದ್ದ ದೋಸ್ತಿಗೆ ಮತ್ತೆ ಟೆನ್ಶನ್

ಬೆಂಗಳೂರು[ಜು.10]: ಈಗಾಗಲೇ ಬಹುಮತ ಕುಸಿದು ಪತನದಂಚಿನಲ್ಲಿರುವ ದೋಸ್ತಿ ಸರ್ಕಾರಕ್ಕೆ ಮತ್ತೆ ಬರಸಿಡಿಲು ಬಂದೆರಗಿದೆ. ಈಗಾಗಲೇ ರಾಜೀನಾಮೆ ನೀಡಿರುವ ಶಾಸಕರ ಪಟ್ಟಿಗೆ ಮತ್ತೆ ಎರಡು ಹೆಸರು ಸೇರ್ಪಡೆಯಾಗಿದೆ. ಈ ಮೂಲಕ ಸರ್ಕಾರ ಉಳಿಸಲು ಯತ್ನಿಸುತ್ತಿದ್ದ ದೋಸ್ತಿ ನಾಯಕರ ಮೇಲೆ ಮತ್ತಷ್ಟು ಒತ್ತಡ ಬಿದ್ದಂತಾಗಿದೆ.

"

ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ರಾಜೀನಾಮೆ ನೀಡಿದ ಶಾಸಕರ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಈಗಾಗಲೇ ಸ್ಪೀಕರ್ ರಮೇಶ್ ಕುಮಾರ್‌ರನ್ನು ಭೇಟಿಯಾಗಿರುವ ಈ ಇಬ್ಬರು ಶಾಸಕರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಇಂಡೋ-ಕಿವೀಸ್ ಸೆಮಿಫೈನಲ್; ಭಾರತದ 3 ವಿಕೆಟ್ ಪತನ, ಸಂಕಷ್ಟದಲ್ಲಿ ಕೊಹ್ಲಿ ಸೈನ್ಯ!

ಇನ್ನು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಹಾಗೂ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಕೂಡಾ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಜೋರಾಗಿವೆ.

ಇನ್ನು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಕೂಡಾ ಸ್ಪೀಕರ್ ಕಚೇರಿಗೆ ಆಗಮಿಸಿದ್ದು, ಇವರೂ ಕೂಡಾ ರಾಜೀನಾಮೆ ನೀಡುತ್ತಾರೆನ್ನಲಾಗಿತ್ತು. ಆದರೆ ತಾನು ವಿಪ್ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಮಾತನಾಡಲು ಬಂದಿದ್ದೆ ಎಂದು ಗಣೇಶ್ಹ್ಕುಕೇರಿ ಸ್ಪಷ್ಟಪಡಿಸಿದ್ದಾರೆ.

 

click me!