ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅನುಷ್ಕಾ ಮನೆಯಲ್ಲಿ ಮದುವೆ ಸಂಭ್ರಮ? ಫೆ.7ರ ಟಾಪ್ 10 ಸುದ್ದಿ!

Suvarna News   | Asianet News
Published : Feb 07, 2020, 05:05 PM IST
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅನುಷ್ಕಾ ಮನೆಯಲ್ಲಿ ಮದುವೆ ಸಂಭ್ರಮ? ಫೆ.7ರ ಟಾಪ್ 10 ಸುದ್ದಿ!

ಸಾರಾಂಶ

ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಉದ್ಯೋಗದಲ್ಲಿ ಶೇಕಡಾ 75 ರಷ್ಟು ಮೀಸಲಾತಿ ನೀಡಲು ಸರ್ಕಾರ ಸಿದ್ದತೆ ನಡೆಸಿದೆ. ದೇಶದ ಜನತೆ ಬೆಂಬಲ ನೀಡಿರುವಾಗ ವಿರೋದಿಗಳ ಭಯವಿಲ್ಲ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳನ್ನು ಕುಟುಕಿದ್ದಾರೆ. ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ, ಅನುಷ್ಕಾ ಶೆಟ್ಟಿ ಮದುವೆ ಕುರಿತು ಸಹೋದರನ ಸ್ಪಷ್ಟನೆ ಸೇರಿದಂತೆ ಫೆಬ್ರವರಿ 7ರ ಟಾಪ್ 10 ಸುದ್ದಿ ಇಲ್ಲಿವೆ.

ವಿರೋಧಿಗಳ 'ಡಂಡಾ' ಭಯ ಇನ್ನಿಲ್ಲ: ಮೋದಿ ಹೇಳಿದ್ದರಲ್ಲಿ ಏನುಂಟು, ಏನಿಲ್ಲ?.

ಇಡೀ ದೇಶದ ಜನತೆ ತಮ್ಮ ಬೆಂಬಲಕ್ಕಿದ್ದು, ವಿರೋಧಿಗಳ 'ಡಂಡಾ' ಭಯ ತಮಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಭಯದಿಂದ ದೂರವಾಗಿರುವುದಾಗಿ ಅವರು ನುಡಿದರು.

70 ವರ್ಷದಲ್ಲಿ ಏನ್ಮಾಡಿದ್ರಿ? ಕೈ ನಾಯಕಿಯ ಉತ್ತರಕ್ಕೆ ಬಿಜೆಪಿಗರು ಫುಲ್ ಸೈಲೆಂಟ್!

ಕಾಂಗ್ರೆಸ್ ನಾಯಕಿ ವಿಪ್ಲವ್ ಠಾಕೂರ್ ಗುರುವಾರದಂದು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದ ಬಿಜೆಪಿಗರಿಗೆ ಖಾರವಾಗಿಯೇ ಉತ್ತರಿಸಿರುವ ನಾಯಕಿ, ಏನೇನು ಸಾಧನೆ ಮಾಡಿದ್ದೇವೆಂಬುವುದನ್ನು ವಿವರಿಸಿದ್ದಾರೆ. ವಿಪ್ಲವ್ ಈ ಮಾತಿಗೆ ಬಿಜೆಪಿ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ.

ಕನ್ನಡಿಗರಿಗೇ ಮೊದಲ ಆದ್ಯತೆ, ಶೇ.75ರಷ್ಟು ಉದ್ಯೋಗ ಮೀಸಲಾತಿಗೆ ಸರ್ಕಾರದ ಸಿದ್ಧತೆ!

ಆಂಧ್ರಪ್ರದೇಶ ಮಾದರಿಯಲ್ಲೇ ಕರ್ನಾಟಕದಲ್ಲೂ ಕನ್ನಡಿಗರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಅಗತ್ಯ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

ರಾಹುಲ್‌ ಗಾಂಧಿ ‘ಟ್ಯೂಬ್‌ಲೈಟ್‌’: ಬಿಜೆಪಿಗರನ್ನು ನಗೆಗಡಲಲ್ಲಿ ತೇಲಿಸಿದ ಮೋದಿ ಮಾತು!

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ‘ಟ್ಯೂಬ್‌ಲೈಟ್‌’ಗೆ ಹೋಲಿಸುವ ಮೂಲಕ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿದರು.

ಅನಿಲ್ ಕುಂಬ್ಳೆ ಪರ್ಫೆಕ್ಟ್ 10 ವಿಕೆಟ್‌ಗೆ 21 ವರ್ಷದ ಸಂಭ್ರಮ..!

1999ರ ಫೆಬ್ರವರಿ 7 ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ ಪಾಲಿಗೆ ಎಂದೆಂದಿಗೂ ಮರೆಯಲಾಗದ ದಿನ. ಕುಂಬ್ಳೆ ಮಾತ್ರವಲ್ಲ ವಿಶ್ವ ಕ್ರಿಕೆಟ್‌ ಪಾಲಿಗೆ ಅದು ಚಾರಿತ್ರಿಕ ದಿನ. ಆ ದಿನ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ಫಿರೋಜ್‌ ಶಾ ಕೋಟ್ಲಾ(ಈಗ ಅರುಣ್ ಜೇಟ್ಲಿ ಮೈದಾನ)ದಲ್ಲಿ ನಡೆದ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆ ಸರಿಗಟ್ಟಿದ್ದರು.  ಆ ಐತಿಹಾಸಿಕ ದಿನಕ್ಕೆ ಇಂದಿಗೆ 21 ವರ್ಷಗಳು ಸಂದಿವೆ.

ಕ್ರಿಕೆಟರ್ ಕೈ ಹಿಡಿತಾರಾ ಬಾಹುಬಲಿ ಹಿರೋಯಿನ್..?

ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್‌ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.

ತಿರುಪತಿ ಭಕ್ತರಿಗೆ ವಂಚನೆ: 19 ನಕಲಿ ವೆಬ್ ಪತ್ತೆ!

ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಟಿಟಿಡಿ ಹೆಸರಿನಲ್ಲಿ ಭಕ್ತಾದಿಗಳಿಗೆ ವಂಚಿಸುತ್ತಿರುವ ನಕಲಿ ವೆಬ್‌ಸೈಟ್‌ಗಳ ಜಾಲ ಸಮಸ್ಯೆ ಹೊಸ ಮತ್ತ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

7 ರಾಜ್ಯಗಳಲ್ಲಿ ಜನಸಂಖ್ಯೆಗಿಂತ ಆಧಾರ್‌ ಕಾರ್ಡುಗಳೇ ಹೆಚ್ಚು!

 ದೇಶದ 7 ರಾಜ್ಯಗಳಲ್ಲಿ ಅಂದಾಜು ಜನಸಂಖ್ಯೆಗಿಂತ ಹೆಚ್ಚು ಮಂದಿಗೆ ಆಧಾರ್‌ ಕಾರ್ಡ್‌ ವಿತರಣೆಯಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ಕೇಂದ್ರ ಸರ್ಕಾರವೇ ಬಹಿರಂಗಪಡಿಸಿದೆ.

MG G10 ಕಾರು ಅನಾವರಣ; ಇನೋವಾ ಕಾರಿಗೆ ಪ್ರತಿಸ್ಪರ್ಧಿ!

ಟೊಯೊಟಾ ಇನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಕಾರ್ನಿವಲ್ ಕಾರು ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಎಂಜಿ ಮೋಟಾರ್ಸ್ ನೂತನ ಕಾರು ಅನಾವರಣ ಮಾಡಿದೆ. MG G10 ಕಾರು ಬೆಲೆ, ವಿನ್ಯಾಸ ಸೇರಿದಂತೆ ಪ್ರತಿಯೊಂದ ವಿಭಾಗದಲ್ಲೂ ಇನೋವಾ ಕಾರಿಗೆ ಹೋರಾಟ 

ಕೆಸರಲ್ಲಿ ಬಿದ್ದವನಿಗೆ ನೆರವಿನ ಕೈ ಚಾಚಿದ ಪೂರ್ವಜ: ಬೇಡವೆಂದ ಮನುಜ!

ಬೊರೆನೋ ಐಲ್ಯಾಂಡ್‌ನಲ್ಲಿ ವ್ಯಕ್ತಿಯೋರ್ವ ಕಾಡು ಕೆಸರಲ್ಲಿ ಸಿಕ್ಕಿ ಹಾಕಿಕೊಂಡು ಒದ್ದಾಡುತ್ತಿದ್ದಾಗ ಓರಾಂಗಟನ್'ವೊಂದು ಆತನ ನೆರವಿಗೆ ಧಾವಿಸಿರುವ ಕ್ಷಣವನ್ನು ವನ್ಯಜೀವಿ ಛಾಯಾಗ್ರಾಹಕ ಅನಿಲ್ ಪ್ರಭಾಕರ್ ಎಂಬುವವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?