
ಬೆಂಗಳೂರು[ಜು.09]: ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದೆ. ದೋಸ್ತಿ ಸರ್ಕಾರ ಪತನಗೊಳ್ಳುವ ಹಂತದಲ್ಲಿದೆ. ಹೀಗಿರುವಾದ ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಎಲ್ಲಾ ಯತ್ನಗಳನ್ನು ನಡೆಸುತ್ತಿದ್ದಾರೆ. ಈಗಾಗಲೇ ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಕೊನೆಯ ವಾರ್ನಿಂಗ್ ನೀಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಪ್ರಕಾರ 14 ಶಾಸಕರ ಅನರ್ಹತೆ ಕೋರಿ ಸ್ಪೀಕರ್‌ಗೆ ದೂರು ನೀಡುವುದಾಗಿ’ ತಿಳಿಸಿದ್ದರು. ಆದರೀಗ ಅನರ್ಹತೆ ಅಸ್ತ್ರ ಪ್ರಯೋಗಿಸಲು ಮುಂದಾದ 'ವ್ಯಾಕರಣ ಮೇಷ್ಟ್ರಿಗೆ' ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ರಾಜಕೀಯ ಪಾಠ ಮಾಡಿದ್ದಾರೆ.
"
ರಾಜೀನಾಮೆ ನೀಡಿದ 14 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ದೂರು ನೀಡುತ್ತೇವೆಂದ ಸಿದ್ದರಾಮಯ್ಯಗೆ ಟ್ವೀಟ್ ಮೂಲಕ ಟಾಂಗ್ ನೀಡಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್ 'ವ್ಯಾಕರಣ ಮೇಸ್ಟ್ರೇ. ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿಗಲ್ಲ). ಇದು ಹೇಗೆ ಪಕ್ಷಾಂತರ ವಿರೋಧಿ ಕಾಯ್ದೆ (Anti-defection law) ಉಲ್ಲಂಘನೆ ಆಗುತ್ತದೆ? ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.
ಉಲ್ಟಾ ಹೊಡೆದ ರಾಜೀನಾಮೆ ಅಸ್ತ್ರ!: ಅತೃಪ್ತ ಶಾಸಕರಿಗೆ ಢವ ಢವ?
ಇದರ ಬೆನ್ನಲ್ಲೇ ಮೋದಿ ಟೀಕಿಸಿದ ಸಿದ್ದರಾಮಯ್ಯಗೆ ಮತ್ತೊಂದು ಏಟು ಕೊಟ್ಟಿರುವ ಶಾಸಕ ಸುರೇಶ್ ಕುಮಾರ್ 'ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಿಂದದ್ದು ಜೀರ್ಣವಾಯಿತು. ಏಕೆಂದರೆ ಮತ್ತೆ ಮೋದಿಯವರ ಮೇಲೆ ಟೀಕೆ ಮಾಡಿಯಾಯಿತು' ಎಂದಿದ್ದಾರೆ.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನರ್ಹತೆ ಸಾಧ್ಯ ಇಲ್ಲವಾ? ಕಾನೂನು ತಜ್ಞರು ಏನಂತಾರೆ?
ಹಾಗಾದ್ರೆ ಸಿದ್ದರಾಮಯ್ಯ ಸುದ್ದಿಗೋಷ್ಟಿಯಲ್ಲಿ ತಿಳಿಸಿರುವಂತೆ ಆರ್ಟಿಕಲ್ 164-1ಬಿ ಪ್ರಕಾರ ಶಾಸಕರನ್ನು ಅನರ್ಹಗೊಳಿಸುವುದು ಅಸಾಧ್ಯವಾ?. ಇದಕ್ಕೆ ಸಂಬಂಧಿಸಿದಂತೆ ಮಾಜಿ ಅಡ್ವೋಕೇಟ್ ಜನರಲ್, ಅಶೋಕ್ ಹಾರ್ನಳ್ಳಿ 8 ಕಾರಣಗಳನ್ನು ನೀಡಿ, ಯಾವ ಸಂದರ್ಭದಲ್ಲಿ ಇದು ಸಾಧ್ಯ ಹಾಗೂ ಯಾವ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.
ಕಾರಣ -1 ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ 2 ಸಂದರ್ಭದಲ್ಲಿ ಅನರ್ಹತೆ ಸಾಧ್ಯ
ಕಾರಣ -2 - ಪಕ್ಷದ ವಿಪ್ ಉಲ್ಲಂಘಿಸಿದರೆ ಶಾಸಕರನ್ನು ಅನರ್ಹಗೊಳಿಸಬಹುದು
ಕಾರಣ -3 - ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರೆ ಅನರ್ಹಗೊಳಿಸಬಹುದು
ಕಾರಣ -4 - ಈಗ ಅತೃಪ್ತರು ಶಾಸಕ ಸ್ಥಾನಕಷ್ಟೇ ರಾಜೀನಾಮೆ ನೀಡಿದ್ದಾರೆ, ಪಕ್ಷ ತೊರೆದಿಲ್ಲ
ಕಾರಣ - 5- ರಾಜೀನಾಮೆ ಸ್ಪೀಕರ್ ಮುಂದೆ ಇರುವಾಗ ಅನರ್ಹತೆ ಸಾಧ್ಯವಿಲ್ಲ
ಕಾರಣ -6- ಅನರ್ಹತೆಗೆ ಮುನ್ನ ಶಾಸಕರನ್ನು ಸ್ಪೀಕರ್ ವಿಚಾರಣೆ ನಡೆಸಬೇಕು
ಕಾರಣ - 7- ಸ್ವಇಚ್ಛೆಯಿಂದಲೋ? ಬಲವಂತದ ರಾಜೀನಾಮೆಯೋ ಎಂದು ವಿಚಾರಿಸಬೇಕು
ಕಾರಣ - 8- ರಾಜೀನಾಮೆ ಕೊಟ್ಟ ತಕ್ಷಣವೇ ಅನರ್ಹಗೊಳಿಸುವಂತಿಲ್ಲ
ಒಟ್ಟಾರೆಯಾಗಿ ರಾಜಕೀಯ ಹೈಡ್ರಾಮಾದ ನಡುವೆ ಟ್ವೀಟ್ ವಾರ್ ಕೂಡಾ ರಾಂಭವಾಗಿದ್ದು, ಶಾಸಕ ಸುರೇಶ್ ಕುಮಾರ್ ಪ್ರಶ್ನೆಗೆ, ವ್ಯಾಕರಣ ಪಾಠ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಏನಂತಾರೆ ಎಂದು ಕಾದು ನೋಡಬೇಕಷ್ಟೇ
ಸದಾ+ಆನಂದ=ಸದಾನಂದ: ಕನ್ನಡ ವ್ಯಾಕರಣ ಪಠಿಸಿದ ಸಿದ್ದರಾಮಯ್ಯ
ಶ್ರೀರಾಮುಲುಗೆ ಕನ್ನಡ ವ್ಯಾಕರಣ ಪಾಠ ಮಾಡಿದ ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.