ಎಲ್ಲ ಪಕ್ಷಗಳ ‘ಡಾರ್ಲಿಂಗ್‌’ ಆಗಿದ್ದ ಕುಮಾರಸ್ವಾಮಿ ಒಂದೇ ವರ್ಷದಲ್ಲಿ ಒಂಟಿ?

By Web DeskFirst Published Jul 9, 2019, 1:05 PM IST
Highlights

ಎಲ್ಲ ಶಾಸಕರ ಪಾಲಿನ ಡಾರ್ಲಿಂಗ್ ಆಗಿದ್ದ ಕುಮಾರಸ್ವಾಮಿ ಒಂದೇ ವರ್ಷದಲ್ಲಿ ಒಂಟಿ | ಮೈತ್ರಿ ಸರ್ಕಾರ ಪತನದ ಭೀತಿಯಲ್ಲಿ ಸಿಎಂ | 

ಹಿಂದೊಮ್ಮೆ ಧರ್ಮಸಿಂಗ್‌ ಹೇಳುತ್ತಿದ್ದರು- ‘2006 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದಮೇಲೆ ರಾಜ್ಯದ 20 ವರ್ಷದ ರಾಜಕೀಯ ಸಂಸ್ಕೃತಿ ಬದಲಾಗಿಹೋಯಿತು’ ಎಂದು.

ಉಪ್ಪಿಟ್ಟು ತಿನ್ನಿಸಿ ಹರಟೆ ಹೊಡೆಯುವ, ಮದುವೆ-ಕಾಯಿಲೆ ಎಂದು ಬಂದವರಿಗೆ ಅಲ್ಲೇ ಹಣ ಕೊಡುವ ಕುಮಾರಣ್ಣನ ಸ್ಟೈಲ್ಗೆ ಜೆಡಿಎಸ್‌ನವರು ಬಿಡಿ, ಬಿಜೆಪಿ ಮತ್ತು ಕಾಂಗ್ರೆಸ್‌ನವರೂ ಫಿದಾ ಆಗಿದ್ದರು. ಒಂದು ಸಲ ಕುಮಾರಸ್ವಾಮಿ ಅವರ ಪತ್ರಿಕಾಗೋಷ್ಠಿಗೆ ನಾನು ಹೋಗಿರಲಿಲ್ಲ. ಕೂಡಲೇ ಅವರೇ ಫೋನ್‌ ಮಾಡಿದ್ದರು.

ಸಿಎಂ ಅಮೆರಿಕದಿಂದ ಬೇಗ ಬಂದಿದ್ರೆ ಸರ್ಕಾರ ಉಳಿಯುತ್ತಿತ್ತಾ?

ಆಗ ‘ಇಲ್ಲ, ಅಪ್ಪ ಬಂದಿದ್ದಾರೆ’ ಎಂದಾಗ ‘ಕರೆದುಕೊಂಡು ಬನ್ನಿ’ ಎಂದರು. ಸ್ಯಾಂಡ್‌ವಿಚ್‌, ಉಪ್ಪಿಟ್ಟು ತಿನ್ನಿಸಿ ಹೈಸ್ಕೂಲ್ ಶಿಕ್ಷಕರಾದ ನನ್ನ ತಂದೆಯ ಜೊತೆ 45 ನಿಮಿಷ ಶಿಕ್ಷಕರ ಸಮಸ್ಯೆ ಬಗ್ಗೆ ಮಾತನಾಡಿದರು. ಹೊರಗಡೆ ಬಂದಾಗ ಸಾದಾ ಶಿಕ್ಷಕರಾದ ನನ್ನ ತಂದೆಯ ಕಣ್ಣಲ್ಲಿ ನೀರಿದ್ದವು. ಆದರೆ ಈಗ? ಆ ಹಳೆಯ ಕುಮಾರಣ್ಣ ಎಲ್ಲಿದ್ದಾರೆ? ಯಾರಿಗೂ ಕಾಣುತ್ತಿಲ್ಲ. ಹೀಗಾಗಿಯೇ ವಿಪಕ್ಷಗಳ ಶಾಸಕರನ್ನು ಬಿಡಿ, ಸ್ವಪಕ್ಷದಲ್ಲೂ ಸಾ ರಾ ಮಹೇಶ್‌, ಪುಟ್ಟರಾಜು, ಬೋಜೇಗೌಡರ ಕೋಟರಿ ಬಿಟ್ಟರೆ ಕುಮಾರಸ್ವಾಮಿ ಅವರು ಯಾರನ್ನೂ ಜಾಸ್ತಿ ಹಚ್ಚಿಕೊಳ್ಳೋದಿಲ್ಲ.

ಹೆಚ್ಚಿದ ರೋಷ : ಕಾಂಗ್ರೆಸ್ ಬಿಟ್ಟ ಹಿರಿಯ ನಾಯಕ ಬಿಜೆಪಿಯತ್ತ

ಕಾಂಗ್ರೆಸ್‌ ಶಾಸಕರೊಂದಿಗೆ ಅಷ್ಟಕಷ್ಟೇ. ಹೀಗಾಗಿಯೇ ಏನೋ ಒಂದು ಕಾಲದಲ್ಲಿ ಎಲ್ಲ ಪಕ್ಷಗಳ ಶಾಸಕರ ‘ಡಾರ್ಲಿಂಗ್‌’ ಆಗಿದ್ದ ಕುಮಾರಸ್ವಾಮಿ ಈಗ ಒಂದೇ ವರ್ಷದಲ್ಲಿ ಒಂಟಿಯಾಗಿದ್ದಾರೆ. ಚಾಣಕ್ಯನನ್ನು ಬಹುವಾಗಿ ಓದುವ ಕುಮಾರಸ್ವಾಮಿ, ರಾಜನ ಕರ್ತವ್ಯದಲ್ಲಿ ಎಡವಿದ್ದೆಲ್ಲಿ?

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

click me!