ಪುಲ್ವಾಮಾ ಹುತಾತ್ಮರಿಗೆ ನಮನ, ಸೇನೆ ಸೇರಿದ ಸ್ವದೇಶಿ ಅರ್ಜುನ; ಫೆ.14ರ ಟಾಪ್ 10 ಸುದ್ದಿ!

By Suvarna NewsFirst Published Feb 14, 2021, 5:38 PM IST
Highlights

ಪುಲ್ವಾಮಾ ದಾಳಿ ನಡೆದು ಇಂದಿಗೆ 2 ವರ್ಷವಾಗಿದೆ. ದಾಳಿಯಲ್ಲಿ ಹುತಾತ್ಮರಾದ 40 ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಗಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ನಿರ್ಮಿತ ಅರ್ಜುನ ಯುದ್ಧಟ್ಯಾಂಕ್ ರಾಷ್ಟಕ್ಕೆ ಸಮರ್ಪಿಸಿದ್ದಾರೆ. ಒಂದು ತಿಂಗಳಲ್ಲಿ ರಾಮಮಂದಿರಕ್ಕೆ 1511 ಕೋಟಿ ರೂ ಸಂಗ್ರಹವಾಗಿದೆ. ಡಿಕೆ ಶಿವಕುಮಾರ್ ಪುತ್ರಿಯ ವಿವಾಹ, ರಾಜ್ಯದ ಮೀಸಲಾತಿ ಹೋರಾಟ ಸೇರಿದಂತೆ ಫೆಬ್ರವರಿ 14ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

ಗ್ರೆಟಾ ಥನ್ಬರ್ಗ್ ಟೂಲ್‌ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್!...

Latest Videos

ದೆಹಲಿಯಲ್ಲಿರುವ ರೈತ ಹೋರಾಟ ಬೆಂಬಲಿಸಿ 18ರ ಹರೆಯದ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೇ ಇವರು ಟ್ವಿಟರ್‌ನಲ್ಲಿ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ್ದ ಟೂಲ್‌ಕಿಟ್ ಕೂಡಾ ಭಾರೀ ವಿವಾದ ಸೃಷ್ಟಿಸಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಯುವತಿಯನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. 

ಪುಲ್ವಾಮಾ ದಾಳಿಗೆ ಎರಡು ವರ್ಷ: ಹುತಾತ್ಮ ಯೋಧರಿಗೆ ಗಣ್ಯರ ಶ್ರದ್ಧಾಂಜಲಿ!...

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆದ ಭಯೋತ್ದಾದಕ ದಾಳಿಗೆ ಇಂದು ವರ್ಷವ./ ಅಂದಿನ ಆ ಕರಾಳ ದಿನ ಭಾರತ ತನ್ನ ನಲ್ವತ್ತು ವೀರ ಯೋಧರನ್ನು ಕಳೆದುಕೊಂಡಿತ್ತು. ಇಡೀ ದೇಶವೇ ಅಂದು ಕಂಬನಿ ಮಿಡಿದಿತ್ತು. ಆ ಕರಾಳ ನೆನಪು ಇಂದಿಗೂ ಜನರ ಮನದಲ್ಲಿ ಜೀವಂತವಾಗಿದೆ. ಈ ಭಯೋತ್ದಾದಕ ದಾಳಿ ನಡೆದು ಎರಡು ವರ್ಷವಾಗುತ್ತಿರುವ ಸಂದರ್ಭದಲ್ಲಿ ರಾಜಕೀಯ ಮುಖಂಡರು, ಜನ ಸಾಮಾಣ್ಯರು ಸೇರಿ ಎಲ್ಲರೂ ಮತ್ತೊಮ್ಮೆ ವೀರ ಯೋಧರ ಬಲಿದಾನವನ್ನು ನೆನಪಿಸಿಕೊಂಡಿದ್ದಾರೆ. 

ಭಾರತೀಯ ಸೇನೆಗೆ ಸ್ವದೇಶಿ ಬಲ: ಮೋದಿಯಿಂದ ಅರ್ಜುನ ಯುದ್ಧ ಟ್ಯಾಂಕ್ ಹಸ್ತಾಂತರ!...

ಭಾರತೀಯ ಸೇನೆಗೆ ಅರ್ಜುನ್ ಯುದ್ಧ ಟ್ಯಾಂಕ್ (ಎಂಕೆ-1ಎ)ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 14ರಂದು ಸೇನಾ ಮುಖ್ಯಸ್ಥ ಎಂ. ಎಂ ನರವಣೆಯವರಿಗೆ ತಮಿಳುನಾಡಿನಲ್ಲಿ ಹಸ್ತಾಂತರಿಸಿದರು 

ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆಶಿ ಮಗಳು ಐಶ್ವರ್ಯ, ಅಮರ್ಥ್ಯ...

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಗಳು ಐಶ್ವರ್ಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಅವರ ಮಗ ಅಮರ್ಥ್ಯ ಹೆಗ್ಡೆ ಪ್ರೇಮಿಗಳ ದಿನವಾದ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿದೆ ನೋಡಿ ಐಶ್ವರ್ಯ, ಅಮರ್ಥ್ಯ ಮದುವೆ ಫೋಟೋಸ್ 

ಒಂದು ತಿಂಗಳಲ್ಲಿ ರಾಮಮಂದಿರಕ್ಕೆ 1511 ಕೋಟಿ ರೂ. ದೇಣಿಗೆ ಸಂಗ್ರಹ!...

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಅಭಿಯಾನಕ್ಕೆ ದೇಶವ್ಯಾಪಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ದೇಣಿಗೆ ಸಂಗ್ರಹ ಅಭಿಯಾನ ಆರಂಭವಾದ 1 ತಿಂಗಳಿಗೂ ಮೊದಲೇ 1500 ಕೋಟಿ ರು.ಗೂ ಹೆಚ್ಚಿನ ಹಣ ಹರಿದುಬಂದಿದೆ.

ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್; 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ!...

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. 

25 ವರ್ಷದ ಸಿನಿ ಜರ್ನಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ‌ ಆಚರಿಸಿಕೊಂಡ ಕಿಚ್ಚ!...

ವಾಯ್ಸು ಅಮಿತಾಭ್ ಬಚ್ಚನ್‌ರಂತೆ, ಇವರ ಫ್ಯಾನ್ಬೇಸ್ ರಜನಿಕಾಂತ್... ಹೀಗಿದ್ದರೂ ಯಾವ ಗ್ಯಾಂಗ್ ಇಲ್ಲದೆಯೇ, ಯಾವುದೇ ಗಾಡ್‌ ಫಾದರ್ ಇಲ್ಲದೆ ನಿಜಕ್ಕೂ ಇವರು ಕಟ್ಟಿದಂತ ಬ್ರ್ಯಾಂಡ್ ಸೆಲ್ಫ್‌ ಮೇಡ್‌. ಇದು ಬೇರೆ ಯಾರೂ ಇಲ್ಲ ಕರ್ನಾಟಕದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌. 25 ವರ್ಷದ ಸಿನಿ ಜರ್ನಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಆಚರಿಸಿಕೊಂಡಿದ್ದಾರೆ. ವಿಡಿಯೋ ನೋಡಿ....

ರಾಜ್ಯದಲ್ಲಿ ಟೆಸ್ಲಾ ಕಾರು ಉತ್ಪಾದನೆ: ಸ್ವತಃ ಸಿಎಂ ಬಿಎಸ್‌ವೈ ಘೋಷಣೆ...

ಜಪಾನ್‌ ಮೂಲದ ಟೊಯೋಟಾ ಕಾರು ತಯಾರಿಕಾ ಕಂಪನಿಯನ್ನು ಹೊಂದಿರುವ ಕರ್ನಾಟಕಕ್ಕೆ ಅಮೆರಿಕ ಮೂಲದ ಐಷಾರಾಮಿ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಟೆಸ್ಲಾ ಕೂಡ ಪ್ರವೇಶಿಸುತ್ತಿದೆ.

ಭಾರತೀಯ ವಾಯುಪಡೆ ಸೇರಲು ಅವಕಾಶ; ತಿಂಗಳಿಗೆ ಕನಿಷ್ಠ 18 ಸಾವಿರ ವೇತನ...

ಭಾರತೀಯ ವಾಯುಪಡೆ(ಐಎಎಫ್)ಯಲ್ಲಿ ಗ್ರೂಪ್ ಸಿ 255 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಿಂಗಳಿಗೆ ಕನಿಷ್ಠ 18000 ರೂ. ಸಂಬಳವಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 13 ಕೊನೆಯ ದಿನವಾಗಿದೆ. ಕೂಡಲೇ ಅರ್ಜಿ ಸಲ್ಲಿಸಿ.

ಮೀಸಲಾತಿಗಾಗಿ ಹೋರಾಟ: ಸಮುದಾಯ, ಸ್ವಾಮೀಜಿಗಳಿಗೆ ಹೊಸ ಭರವಸೆ ಕೊಟ್ಟ ಸಿಎಂ...

ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಪ್ರತಿಭನಟನೆ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

click me!