ಉದ್ಘಾಟನೆಗೊಂಡಿತು ಅಟಲ್ ಟನೆಲ್, ಮತ್ತೆ ಹತ್ರಾಸ್‌ಗೆ ರಾಹುಲ್: ಅ.3ರ ಟಾಪ್ 10 ಸುದ್ದಿ!

By Suvarna NewsFirst Published Oct 3, 2020, 4:39 PM IST
Highlights

ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಅಟಲ್‌ ಟನಲ್ ಲೋಕಾರ್ಪಣೆಯಾಗಿದೆ. ಪಿಎಂ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಡ್ರಗ್ಸ್ ಪ್ರಕರಣ ವಿಚಾರಣೆ ಎದುರಿಸುತ್ತಿರುವ ಅನುಶ್ರಿ ಫೋನ್ ಕಾಲ್‌ ವಿವರಕ್ಕೆ ಮಾಜಿ ಸಿಎಂ ಹೆಡಿಕೆ ಗರಂ ಆಗಿದ್ದಾರೆ. ಕರ್ನಾಟಕದಲ್ಲಿ ದೇಶದಲ್ಲೇ ಅತಿಹೆಚ್ಚು ನಕಲಿ 2000 ರು. ನೋಟುಗಳು ಜಪ್ತಿಯಾಗಿವೆ. ಸಂತ್ರಸ್ತೆ ಕುಟುಂಬ ಮಂದಿ ಭೇಟಿಯಾಗಲು ಮತ್ತೆ ಹತ್ರಾಸ್‌ಗೆ ರಾಹುಲ್ ಗಾಂಧಿ, ಅಭಿಮಾನಿಗಳಿಗೆ ಡಬಲ್ ಧಮಾಕ ಐಪಿಎಲ್ ಸೇರಿದಂತೆ ಅಕ್ಟೋಬರ್ 3ರ ಟಾಪ್ 10 ಸುದ್ದಿ!

ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ...

ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರು ಮಾಜಿ ಸಿಎಂಗೆ ಕಾಲ್‌ ಮಾಡಿರುವ ಬಗ್ಗೆ ಸಿಸಿಬಿ ಶಾಕ್ ಆಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಸಹ ಸಿಡಿದೆದ್ದಿದ್ದಾರೆ.

'ಅವರಲ್ಲಿ ಧೈರ್ಯ ಕಡಿಮೆ ಇತ್ತು, ಚುನಾವಣೆ ಇತ್ತು, ನಮಗೆ ದೇಶವೇ ಮೊದಲು'...

ವಿಶ್ವದ ಅತಿ ದೊಡ್ಡ ಸುರಂಗ ಮಾರ್ಗ ಅಟಲ್‌ ಟನಲ್ ಲೋಕಾರ್ಪಣೆಯಾಗಿದೆ. ಪಿಎಂ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಇನ್ನು ಸುರಂಗ ಮಾರ್ಗದ ಮೂಲಕ ಸಂಚರಿಸಿ ಲಾಹೌಲ್‌ನ ಸಿಸು ಹಾಗೂ ಸೋಲಂಗ್ ನಾಲಾಗೆ ಭೇಏಟಿ ನೀಡಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇನ್ನು ಸೋಲಂಗ್‌ ನಾಲಾದಲ್ಲಿ ಮಾತನಾಡಿದ ಪಿಎಂ ಮೋದಿ ಇನ್ಮುಂದೆ ಗುಡ್ಡಗಾಡಿನ ಭಾರವನ್ನು ಅಡಲ್ ಸುರಂಗ ಮಾರ್ಗ ಹೊರಲಿದ್ದು, ಇದರಿಂದ ಮನಾಲಿಯ ಜನರ ಭಾರ ಕಡಿಮೆಯಾಗಲಿದೆ ಎಂದಿದ್ದಾರೆ.

ಮಹಿಳೆಯರ ಮೇಲೆ ಕಣ್ಣು ಹಾಕುವ​ವರ ವಿನಾ​ಶ: ಸಿಎಂ ಯೋಗಿ ಶಪಥ!...

ಉತ್ತರ ಪ್ರದೇ​ಶದ ಹಾಥ್ರ​ಸ್‌​ನಲ್ಲಿ ಸಂಭ​ವಿ​ಸಿದ ಅತ್ಯಾ​ಚಾರ ಪ್ರಕ​ರ​ಣದ ಬಗ್ಗೆ ದೇಶ​ವ್ಯಾಪಿ ಆಕ್ರೋಶ ವ್ಯಕ್ತ​ವಾ​ಗು​ತ್ತಿ​ರು​ವ ನಡು​ವೆಯೇ, ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ಅವರು ‘ಮ​ಹಿ​ಳೆ​ಯರ ಮೇಲೆ ಕಣ್ಣು ಹಾಕಿ​ದ​ವರ ವಿನಾಶ ಮಾಡ​ಲಾ​ಗು​ವು​ದು’ ಎಂದು ಗುಡು​ಗಿ​ದ್ದಾ​ರೆ.


IPL 2020: ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, ತಂಡದಲ್ಲಿ 1 ಬದಲಾವಣೆ!...

13ನೇ ಆವೃತ್ತಿ ಐಪಿಎಲ್ ಲೀಗ್ ಟೂರ್ನಿಯ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಿದೆ. ಅಂಕಿತ್ ರಜಪೂತ್ ಬದಲು ಮಹಿಪಾಲ್ ಲಮ್ರೊರ್ ತಂಡ ಸೇರಿಕೊಂಡಿದ್ದಾರೆ.

1 ಸೀರಿಯಲ್ ಎಪಿಸೋಡ್‌ಗೆ 1ವರೆ ಲಕ್ಷ, ಎಷ್ಟು ಎಪಿಸೋಡ್ಸ್ ಇರುತ್ತೆ ನಿಮಗೇ ಗೊತ್ತಲ್ಲ..!...

ಸಿನಿಮಾ ಮಾತ್ರವಲ್ಲ, ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಸಂಭಾವನೆ ಪಡೆಯೋ ನಟಿಯರಿದ್ದಾರೆ. ಹಾಗಾಗಿಯೇ ಬಹಳಷ್ಟು ವರ್ಷಗಳಿಂದ ಇಲ್ಲಿಯೇ ನೆಲೆ ಕಂಡು ಕೊಂಡಿದ್ದಾರೆ ಬಹಳಷ್ಟು ಟ್ಯಾಲೆಂಟೆಡ್ ನಟಿಯರು.

ಕರ್ನಾಟಕದಲ್ಲೇ ಅತಿಹೆಚ್ಚು 2000 ರೂ. ನಕಲಿ ನೋಟು ಪತ್ತೆ!...

ದೇಶದಲ್ಲಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿಬೀಳುತ್ತಿರುವ ನಕಲಿ ನೋಟುಗಳ ಪೈಕಿ 2000 ರು. ನೋಟುಗಳ ಸಂಖ್ಯೆಯೇ ಹೆಚ್ಚಾಗುತ್ತಿದ್ದು, ಅದರಲ್ಲೂ ಕಳೆದ ವರ್ಷ ಕರ್ನಾಟಕದಲ್ಲಿ ದೇಶದಲ್ಲೇ ಅತಿಹೆಚ್ಚು ನಕಲಿ 2000 ರು. ನೋಟುಗಳು ಜಪ್ತಿಯಾಗಿವೆ.

ಎಲೆಕ್ಟ್ರಿಕ್ ಕಾರು ತಯಾರಿಯಲ್ಲಿ ವೋಲ್ವೋ: 2021ರಿಂದ ಕೇವಲ ಹೈಬ್ರಿಡ್, ಎಲೆಕ್ಟ್ರಿಕ್ ಕಾರು ಮಾರಾಟ!...

ಆಟೋಮೊಬೈಲ್ ಸೆಕ್ಟರ್ ಡೀಸೆಲ್ ಕಾರಿಗೆ ಗುಡ್‌ಬೈ ಹೇಳುತ್ತಿದೆ. ಬಹುತೇಕ ಆಟೋಮೇಕರ್ ಇದೀಗ ಪೆಟ್ರೋಲ್ ಕಾರು ಮಾತ್ರ ಉತ್ಪಾದನೆ ಮಾಡುತ್ತಿದೆ. ಇಷ್ಟೇ ಹಲವು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಸ್ವೀಡನ್‌ನ ಲಕ್ಸುರಿ ಕಾರು ಬ್ರ್ಯಾಂಡ್ ವೋಲ್ವೋ  ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಸಂತ್ರಸ್ತೆ ಕುಟುಂಬ ಮಂದಿ ಭೇಟಿಯಾಗಲು ಮತ್ತೆ ಹತ್ರಾಸ್‌ಗೆ ರಾಹುಲ್ ಗಾಂಧಿ!...

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 20 ವರ್ಷದ ಯುವತಿ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವಿಪಕ್ಷಗಳು ಕೃತ್ಯದ ವಿರುದಸ್ಧ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿ ಕಾರಿವೆ. ಹೀಗಿರುವಾಗ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತೊಂದು ಬಾರಿ ಸಂತ್ರಸ್ತೆಯ ಮನೆಗೆ ಹೋಗುವ ಯತ್ನ ನಡೆಸಲಿದ್ದಾರೆ. 

ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್‌ ಸುರಂಗ ಮಾರ್ಗ ಲೋಕಾರ್ಪಣೆ: ವಿಶೇಷತೆಗಳಿವು...

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂಬ ಹಿರಿಮೆ ಹೊಂದಿರುವ, ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ 9.02 ಕಿ.ಮೀ. ಉದ್ದದ ಮನಾಲಿ- ಲೇಹ್‌ ನಡುವಣ ರಸ್ತೆ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಲೋಕಾರ್ಪಣೆ ಮಾಡಿದ್ದಾರೆ. 

ನಿರುದ್ಯೋಗಿಗಳಿಗೆ ಗುಡ್‌ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ..!...

ಕೊರೋನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡ ಮತ್ತು ಸ್ವ-ಉದ್ಯೋಗ ಮಾಡಲು ಇಚ್ಛಿಸುವ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನ ನೀಡಿದ್ದು, ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

click me!