ಟ್ರಂಪ್’ಗೆ ಹೌಡಿ ಮೋದಿ ಫೋಟೋ ಉಡುಗೊರೆ ನೀಡಿದ ಪ್ರಧಾನಿ ಮೋದಿ| ಮೋದಿ-ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ಸಂದರ್ಭ| ಉಭಯ ನಾಯಕರು ಕೈ ಹಿಡಿದು ವೇದಿಕೆಯೇರಿದ ಫೋಟೋ ಉಡುಗೊರೆ| ಮೋದಿ ನೀಡಿದ ಉಡುಗರೆಗೆ ಧನ್ಯವಾದ ಅರ್ಪಿಸಿದ ಅಮೆರಿಕ ಅಧ್ಯಕ್ಷ|
ನ್ಯೂಯಾರ್ಕ್(ಸೆ.25): ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಇತ್ತೀಚಿಗೆ ಹೂಸ್ಟನ್’ನಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಉಭಯ ನಾಯಕರ ಫೋಟೋವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು.
United States: PM Narendra Modi presented a framed photograph from the event to US President Donald Trump. The two leaders also held a bilateral meet at New York today. pic.twitter.com/7jzejvSFCi
— ANI (@ANI)
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಜಂಟಿಯಾಗಿ ವೇದಿಕೆ ಮೇಲೆರಿದ್ದ ಟ್ರಂಪ್ ಹಾಗೂ ಮೋದಿ, ಪರಸ್ಪರ ಕೈ ಹಿಡಿದು ತಮ್ಮ ಗಾಢ ಸ್ನೇಹವನ್ನು ತೋರಿದ್ದರು.
ಈ ವೇಳೆ ಕ್ಲಿಕ್ಕಿಸಿದ್ದ ಫೋಟೋವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದು, ಈ ಫೋಟೋ ತಮ್ಮ ಜೀವನದ ಉತ್ತಮಕ ನೆನಪುಗಳಲ್ಲಿ ಒಂದು ಎಂದು ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.