ಮೋದಿ 69ನೇ ಜನ್ಮದಿನ: ವಿಪಕ್ಷ ನಾಯಕರ ಶುಭ ಸಂದೇಶಗಳು ವಿಭಿನ್ನ!

By Web Desk  |  First Published Sep 17, 2019, 1:50 PM IST

69ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ| ಪ್ರಧಾನಿ ಮೋದಿಗೆ ವಿಪಕ್ಷ ನಾಯಕರಿಂದ ಜನ್ಮದಿನದ ಶುಭಾಶಯ| ಮೋದಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಸೋನಿಯಾ ಗಾಂಧಿ| ಮಮತಾ ಬ್ಯಾನರ್ಜಿಯಿಂದ ಪ್ರಧಾನಿಗೆ ಮೋದಿಗೆ ಜನ್ಮ ದಿನದ ಶುಭಾಶಯ| ಮೋದಿ ದೀರ್ಘಾಯುವಾಗಲಿ ಎಂದು ಹಾರೈಸಿದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ| ಮೋದಿಗೆ ಹ್ಯಾಪಿ ಬರ್ತ್'ಡೇ ಎಂದು ಶುಭ ಕೋರಿದ BSP ಮುಖ್ಯಸ್ಥೆ ಮಾಯಾವತಿ|


ನವದೆಹಲಿ(ಸೆ.17): ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕರು ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಅವರಿಗೆ ಜನ್ಮ ದಿನದ ಶುಭ ಕೋರಿದ್ದು, ಮೋದಿ ಆರೋಗ್ಯವಂತರಾಗಿ ಸಂತೋಷದಿಂದ ದೀರ್ಘಕಾಲ ಬಾಳಲಿ ಎಂದು ಹಾರೈಸಿದ್ದಾರೆ.

Birthday greetings to Prime Minister ji

প্রধানমন্ত্রী নরেন্দ্র মোদিজী কে জন্মদিনের শুভেচ্ছা

— Mamata Banerjee (@MamataOfficial)

Tap to resize

Latest Videos

undefined

ಅದರಂತೆ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಪ್ರಧಾನಿ ಅವರಿಗೆ ಜನ್ಮ ದಿನದ ಶುಭ ಕೋರಿದ್ದು, 69ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿಗೆ ಜನ್ಮ ದಿನದ ಶುಭಾಶಯ ಎಂದು ಹೇಳಿದ್ದಾರೆ.

I wish a very happy birthday. May God bless you with good health and prosperity.

— H D Devegowda (@H_D_Devegowda)

ಇನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಕೂಡ ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು, ಪ್ರಧಾನಿ ಅವರಿಗೆ ದೇವರು ದೀರ್ಘ ಆಯುಷ್ಯ ಹಾಗೂ ಆರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ.

प्रधानमंत्री श्री नरेन्द्र मोदी जी को उनके 69वें जन्मदिन के शुभ अवसर पर हार्दिक बधाई व शुभकामनाएं तथा उनके दीर्घायु होने की कुदरत से प्रार्थना।

— Mayawati (@Mayawati)

BSP ಮುಖ್ಯಸ್ಥೆ ಮಾಯಾವತಿ ಕೂಡ ಪ್ರಧಾನಿ ಮೋದಿ ಅವರಿಗೆ ಜನ್ಮ ದಿನದ ಶುಭ ಸಂದೇಶ ಕಳುಹಿಸಿದ್ದು, ಮೋದಿ ದೀರ್ಘಾಯುವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

click me!