ಮೋದಿ ಹುಟ್ಟು ಹಬ್ಬ ಸಂಭ್ರಮ; ಅಮೂಲ್ ಸಂದೇಶದಲ್ಲಿ ಪ್ರಧಾನಿ ಪಯಣ!

Published : Sep 17, 2019, 01:40 PM IST
ಮೋದಿ ಹುಟ್ಟು ಹಬ್ಬ ಸಂಭ್ರಮ; ಅಮೂಲ್ ಸಂದೇಶದಲ್ಲಿ ಪ್ರಧಾನಿ ಪಯಣ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಈ ಶುಭಹಾರೈಕೆಯಲ್ಲಿ ಅಮೂಲ್ ಮಿಲ್ಕ್ ಕಂಪನಿಯ ಸಂದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿ ಬಾರಿಯಂತೆ ಇದೀಗ ವಿಶಿಷ್ಠ ರೀತಿಯಲ್ಲಿ ಅಮೂಲ್ ಪ್ರಧಾನಿ ಮೋದಿಗೆ ಶುಭಕೋರಿದೆ.

ಅಹಮ್ಮದಾಬಾದ್(ಸೆ.17): ದೇಶದ ಪ್ರಗತಿ, ಕ್ರೀಡಾಪಟುಗಳ ಸಾಧನೆ, ಗಣ್ಯರ ಹುಟ್ಟು ಹಬ್ಬ ಸೇರಿದಂತೆ ಪ್ರತಿ ಸಂಭ್ರಮವನ್ನು ಅಮೂಲ್ ಮಿಲ್ಕ್ ಕಂಪನಿ ವಿಶೇಷ ಕಾರ್ಟೂನ್ ಮೂಲಕ ಇಮ್ಮಡಿಗೊಳಿಸಿದೆ. ಇದೀಗ 69ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ವಿಶಿಷ್ಠ ಕಾರ್ಟೂನ್ ಮೂಲಕ ಶುಭ ಕೋರಿದೆ. 

ಇದನ್ನೂ ಓದಿ: ಪ್ರಧಾನಿಗೆ 69ನೇ ಹುಟ್ಟುಹಬ್ಬದ ಸಂಭ್ರಮ: ಟ್ವಿಟರ್‌ನಲ್ಲಿ ಮೋದಿ ಟ್ರೆಂಡ್!

ಮೋದಿ ಹುಟ್ಟು ಹಬ್ಬ ಸಂಭ್ರಮದಲ್ಲಿ ಅಮೂಲ್(Anand Milk Union Limited) ವಿಶೇಷ ಅನಿಮೇಶನ್ ವಿಡಿಯೋವನ್ನು ಪೋಸ್ಟ್ ಮಾಡಿದೆ. ಪ್ರಧಾನಿ ಮೋದಿ ಸಾಧನೆ, ಸ್ವಚ್ಚ ಭಾರತ, ಮೇಕ್ ಇನ್ ಇಂಡಿಯಾ ಸೇರಿದಂತೆ ಜನಪ್ರಿಯ ಯೋಜನೆ ಹಾಗೂ ಐತಿಹಾಸಿಕ ಘಟ್ಟಗಳನ್ನು ಕಾರ್ಟೂನ್ ವಿಡಿಯೋ ಮೂಲಕ ಶುಭ ಹಾರೈಸಿದೆ.

 

ವಿಡಿಯೋದ ಅಂತ್ಯದಲ್ಲಿ 3.6 ಮಿಲಿಯನ್ ಗುಜರಾತ್ ರೈತರು, ಪ್ರಧಾನಿ ಮೋದಿಗೆ ಈ ಮೂಲಕ ಶುಭಕೋರುತ್ತಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು ಎಂದು ಅಮೂಲ್ ಹೇಳಿದೆ.

ಅಮೂಲ್ ವಿಶೇಷ ಸಂದೇಶ ಹಾಗೂ ಶುಭಹಾರೈಕೆಯನ್ನು ಟ್ವಿಟರಿಗರು ಮೆಚ್ಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru New Year 2026: ಎಂಜಿ ರೋಡ್ ಬಿಟ್ಟು ಕೋರಮಂಗಲಕ್ಕೆ ಜನಸಾಗರ; ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಹಿಳೆ ಜೊತೆ ಟೋಯಿಂಗ್ ಚಾಲಕನ ಕಿರಿಕ್!
ಹೊಸ ವರ್ಷಕ್ಕೆ ಕೆಲವೇ ಹೊತ್ತಲ್ಲಿ ಶಾಕ್! ಕೊಳ್ಳೇಗಾಲದಲ್ಲಿ ಭೀಕರ ಅಗ್ನಿ ಅವಘಡ; ಬೇಕರಿ ಸೇರಿದಂತೆ ಮೂರು ಅಂಗಡಿಗಳು ಭಸ್ಮ!