300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ!

By Web DeskFirst Published Sep 17, 2019, 1:17 PM IST
Highlights

300 ಡ್ರೋನ್‌ ಬಳಸಿ ಇಡೀ ಭಾರತದ ನಕ್ಷೆ ರಚನೆ| ದೇಶದ ಕರಾರುವಕ್ಕಾದ ಮಾಹಿತಿ, ಡಿಜಿಟಲೀಕರಣಕ್ಕೆ ಈ ನಿರ್ಣಯ| ಇಂಥ ಮಹತ್ವದ ನಿರ್ಣಯಕ್ಕೆ ಮೊದಲ ಸಲ ನಿರ್ಧರಿಸಿದ ಎಸ್‌ಒಐ

ನವದೆಹಲಿ[ಸೆ.17]: ಭಾರತದ ನಕ್ಷೆ ರಚನೆಯ ಮಹತ್ವದ ಹೊಣೆ ಹೊಂದಿರುವ ಸರ್ವೇ ಆಫ್‌ ಇಂಡಿಯಾ, ಇದೇ ಮೊದಲ ಬಾರಿಗೆ ಡ್ರೋನ್‌ಗಳನ್ನು ಬಳಸಿ ಇಡೀ ದೇಶದ ಡಿಟಿಟಲ್‌ ನಕ್ಷೆ ರಚನೆಗೆ ನಿರ್ಧರಿಸಿದೆ. ಇದಕ್ಕಾಗಿ ಸುಮಾರು 300 ಡ್ರೋನ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ.

ನಕ್ಷೆ ರಚನೆಗೆ ಡ್ರೋನ್‌ ಬಳಕೆಯಿಂದ ಭಾರತದ ಭೂ ವಿಸ್ತೀರ್ಣ ಮತ್ತು ಪ್ರಾಕೃತಿಕ ದೃಶ್ಯದ ಕರಾರುವಕ್ಕಾದ ಮಾಹಿತಿ ಸಂಗ್ರಹವಷ್ಟೇ ಅಲ್ಲದೆ, ಭೂಪ್ರದೇಶದ ಅತಿಹೆಚ್ಚು ರೆಸೊಲ್ಯೂಷನ್‌ ಮ್ಯಾಪ್‌ಗಳು ಹಾಗೂ ಗ್ರಾಮಗಳ ಭೂಮಿಯ ಡಿಜಟಲೀಕರಣಕ್ಕೆ ಅನುಕೂಲಕರವಾಗಲಿದೆ ಎಂದು ಈ ಪ್ರಕ್ರಿಯೆಯಲ್ಲಿ ಸಕ್ರಿಯರಾದ ಅಧಿಕಾರಿಗಳು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಒಐ ಪ್ರಧಾನ ನಿರ್ದೇಶಕ ಗಿರೀಶ್‌ ಕುಮಾರ್‌, ‘ಈ ಮೊದಲು ನಾವು ದೇಶದ ಮ್ಯಾಪಿಂಗ್‌ಗಾಗಿ ವಿಮಾನಗಳಿಂದ ಫೋಟೋಗಳನ್ನು ಸೆರೆ ಹಿಡಿಯುತ್ತಿದ್ದೆವು. ಈ ಪ್ರಕ್ರಿಯೆ ತುಂಬಾ ದುಬಾರಿ ಹಾಗೂ ಇದಕ್ಕೆ ಕೆಲವು ಇತಿಮಿತಿಗಳಿವೆ. ಹೀಗಾಗಿ, ಮ್ಯಾಪಿಂಗ್‌ಗೆ ಡ್ರೋನ್‌ಗಳ ಬಳಕೆ ಇದು ಸುಸಂದರ್ಭ ಹಾಗೂ ಸಮಂಜಸ ಕ್ರಮವಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಂಸ್ಥೆಯ ಬಳಿ ಈಗಾಗಲೇ 30 ಡ್ರೋನ್‌ಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ಶೇ.75ರಷ್ಟುಪ್ರಮಾಣದ ಭೂ ಪ್ರದೇಶದ ಮ್ಯಾಪಿಂಗ್‌ಗಾಗಿ 300 ಡ್ರೋನ್‌ಗಳ ಅಗತ್ಯವಿದೆ. ಅಲ್ಲದೆ, ಮ್ಯಾಪಿಂಗ್‌ ಮಾಡುವ ಈ ಯೋಜನೆ ಪೂರ್ಣಗೊಳಿಸಲು 400-500 ಕೋಟಿ ರು. ವೆಚ್ಚವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಲಾ ಎರಡು ಜಿಲ್ಲೆಗಳು ಮತ್ತು ಹರಾರ‍ಯಣದ 6 ಜಿಲ್ಲೆಗಳಲ್ಲಿ ಡ್ರೋನ್‌ ಆಧಾರಿತ ಸರ್ವೆಗಾಗಿ ಒಟ್ಟಾರೆ 6 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ.

click me!