ಚಿಕ್ಕಬಳ್ಳಾಪುರ: ಕ್ರಿಕೆಟ್ ಆಡ್ತಿದ್ದ ಫಾರೆಸ್ಟ್ ಆಫೀಸರ್ ಗೆ ನೋಟಿಸ್!

By Web DeskFirst Published Jun 26, 2019, 4:13 PM IST
Highlights

ಸರಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರುವುದಿಲ್ಲ. ಸಮಯ ಪರಿಪಾಲನೆ ಅವರಿಗೆ ಗೊತ್ತೇ ಇಲ್ಲ. ಸಾರ್ವಜನಿಕರ ಸೇವಕರು ಜನರ ಮೇಲೆ ಸವಾರಿ ಮಾಡುತ್ತಾರೆ... ಈ ರೀತಿ ಅನೇಕ ದೂರುಗಳನ್ನು ಪ್ರತಿದಿನ ಕೇಳುತ್ತಲೇ ಇರುತ್ತವೆ. ಆದರೆ ಇದು ಅದೆಲ್ಲದಕ್ಕಿಂತ ಒಂದು ಚೂರು ಭಿನ್ನವಾದ ಸುದ್ದಿ.. 

ಚಿಕ್ಕಬಳ್ಳಾಪುರ(ಜೂ. 26)  ಅರಣ್ಯ ಸಂರಕ್ಷಣೆ ಎಂಬ ಮಹತ್ವದ ಜವಾಬ್ದಾರಿ ಹೊತ್ತುಕೊಂಡಿದ್ದ ಅಧಿಕಾರಿ ಕೆಲಸದ ಸಮಯದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಮಾಹಿತಿ ಪಡೆದುಕೊಂಡ ಹಿರಿಯ ಅಧಿಕಾರಿ ಮಾತ್ರ ಸುಮ್ಮನಾಗಿಲ್ಲ. ಕಾರಣ ಕೇಳು ನೋಟಿಸ್ ಜಾರಿ ಮಾಡಿದ್ದಾರೆ.

ಕೆಲಸದ ಸಮಯದಲ್ಲಿ ಕ್ರಿಕೆಟ್ ಆಡಿದ ಸರಕಾರಿ ಅಧಿಕಾರಿ ನೋಟಿಸ್ ಗೆ ಉತ್ತರ ನೀಡಬೇಕಾದ ಕಾಲ ಬಂದಿದೆ. ಜೂನ್ 25  ರಂದು ಕಾರಣ ಕೇಳಿ ಫಾರೆಸ್ಟ್ ಆಫೀಸರ್ ಕೆ.ಆರ್.ಅವಿನಾಶ್ ಅವರಿಗೆ ನೋಟಿಸ್ ನೀಡಲಾಗಿದೆ. ಜೂನ್ 24 ರಂದು ಸಾಯಂಕಾಲ 5 ಗಂಟೆಗೆ ನಿಮ್ಮ ವಸತಿ ಗೃಹದ ಸಂಕೀರ್ಣದಲ್ಲಿ ಸರ್ಕಾರಿ ಕೆಲಸದ ವೇಳೆ ಕ್ರಿಕೆಟ್ ಆಡುತ್ತಿರುವುದು ಗಮನಕ್ಕೆ ಬಂದಿದೆ. 

ಅರಣ್ಯ ರಕ್ಷಣೆ ಎನ್ನುವುದು ದಿನದ 24 ಗಂಟೆಯ ಕೆಲಸ ಆದರೂ ನೀವು ಕ್ರಿಕೆಟ್ ಆಡುತ್ತಿರುವುದು ವಿಷಾದನೀಯ. ಹಾಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮದ ಅನ್ವಯ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬಾರದು? ಎಂದು ನೊಟೀಸ್ ನಲ್ಲಿ ಪ್ರಶ್ನೆ ಮಾಡಲಾಗಿದೆ. ಮೂರು ದಿನದ ಒಳಗೆ ಉತ್ತರ ನೀಡಲು ತಿಳಿಸಲಾಗಿದೆ.

ಚಿಕ್ಕಬಳ್ಳಾಪುರ: ಜೂಜು ಅಡ್ಡೆಯಲ್ಲಿ ಕಂತೆ ಕಂತೆ ಹಣ..ಮೊತ್ತ!

ಅರಣ್ಯ ರಕ್ಷಕರ ಗೋಳು ಕೇಳುವವರಿಲ್ಲವೇ? : ಇನ್ನೊಂದು ಕಡೆ ಅರಣ್ಯ ರಕ್ಷಕರು ಸಹ ತಮ್ಮ ನೋವು ಹೊರಹಾಕಿದ್ದಾರೆ. ಇಲಾಖೆ ಮತ್ತು ಹಿರಿಯ ಅಧಿಕಾರಿಗಳಿಗೆ ಒಂದಿಷ್ಟು ಪ್ರಶ್ನೆ ಕೇಳಿದ್ದಾರೆ..

1) ಅರಣ್ಯ ರಕ್ಷಣೆ 24 ಗಂಟೆ ಅಂದರೆ ನಾವು ನಮ್ಮ ವೈಯಕ್ತಿಕ ಕೆಲಸಕ್ಕೆ ಸಮಯವೇ ಇಲ್ಲವೇ?

2) ಪೊಲೀಸರಿಗಿಂತ ಹೆಚ್ಚಿನ ಸಮಯ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ವಾರದ ಭತ್ಯ ಕೇವಲ 30 ರೂಪಾಯಿ... ಆದ್ರೆ ಪೊಲೀಸ ರಿಗೆ 400 ರೂಪಾಯಿ... ವಿಪರ್ಯಾಸವೆಂದರೆ ಇದರ ಬಗ್ಗೆ ಯೋಚಿಸದ ಅಧಿಕಾರಗಳು ಕ್ರಿಕೆಟ್ ಯಾಕೆ ಆಡಿದೆ ಅಂತಾ ಮೆಮೊ ಕೊಡ್ತಾರೆ!

3) ನಿಜವಾಗ್ಲೂ ನಮಗೂ ಪೋಲೀಸರ ಹಾಗೇ ಶಿಫ್ಟ್ ಡ್ಯೂಟಿ ಕೊಡಿ ಆ ಸಮಯದಲ್ಲಿ ನಾವು ಡ್ಯೂಟಿ ಮಾಡದಿದ್ದರೆ ಅಮಾನತು ಮಾಡಲಿ.

4) ಹಾಗಾದರೆ ಎಲ್ಲ ಅಧಿಕಾರಗಳು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿರುವರೇ ! ನಮಗೂ ಖಾಸಗಿ ಜೀವನ ಅನ್ನುವುದು ಇಲ್ಲವೇ?

5) ಅರಣ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಗಳು ಅಟ್ಟಹಾಸ ಮಾಡುತ್ತಿದ್ದಾರೆ.  ಚಿಕ್ಕ ವಿಷಯಗಳಿಗೆ ಮೆಮೊ ನೀಡಿ ಮುಂಚೂಣಿ ಸಿಬ್ಬಂದಿಗಳ ನೈತಿಕ ಸ್ಥೈರ್ಯ ಹಾಳುಮಾಡುತ್ತಿದ್ದರೆ.

6) ಯಾವ ಸಮಯದಲ್ಲಿ ಕರ್ತವ್ಯ ನಿರ್ವಹಿಸಬೇಕು ಇಲಾಖೆಯ ಹಿರಿಯ ಅಧಿಕಾರಿಗಳೇ ಸಮಯ ನಿಗದಿಪಡಿಸಲಿ..

click me!