
ನಗೋಯಾ(ಜೂ.26): ಜಪಾನ್’ನ ನಗೋಯಾದಲ್ಲಿ ಕಂಡ ವಿಚಿತ್ರ ಪ್ರಾಣಿಯೊಂದು ಇಂಟರ್ನೆಟ್’ನಲ್ಲಿ ಸನ್ಸೇಶನ್ ಸೃಷ್ಟಿಸಿದ್ದು, ಈ ವಿಚಿತ್ರ ಪ್ರಾಣಿಯ ಕಂಡ ದಂಗಾದ ಜನ ದಂಗಾಗಿದ್ದಾರೆ.
ನಗರದ ಕಟ್ಟಡವೊಂದರಲ್ಲಿ ಏಕಾಏಕಿ ಕಂಡ ಈ ಪ್ರಾಣಿ ಕಂಡ ಜನ ಇದೇನೆಂದು ಕೇಳುವ ಮೊದಲೇ ಹಕ್ಕಿಯಂತೆ ಹಾರಿ ಹೋಗಿ ಮತ್ತಷ್ಟು ಭಯ ಮೂಡಿಸಿದೆ.
ಅಸಲಿಗೆ ಇದು ನಾವು ಇದುವರೆಗೂ ಕಂಡು ಕೇಳರಿಯದ ಯಾವುದೇ ಹೊಸ ಪ್ರಾಣಿಯಲ್ಲ. ಬದಲಿಗೆ ಕಾಗೆಯೊಂದು ತನ್ನ ರೆಕ್ಕೆಗಳನ್ನು ನೆಲಕ್ಕೆ ತಾಕಿಸಿ ಕುಳಿತ ಪರಿಣಾಮ ಅದು ಗೋರಿಲ್ಲಾ ರೀತಿ ಕಾಣುತ್ತಿದೆ.
ತನ್ನ ರೆಕ್ಕೆಗಳನ್ನು ಅಗಲಿಸಿದ ಪರಿಣಾ ಗೋರಿಲ್ಲಾ ಮಾದರಿಯಲ್ಲೇ ನಡೆಯುತ್ತಿರುವಂತೆ ಜನರಿಗೆ ಭಾಸವಾಗಿದೆ. ಸದ್ಯ ಈ ಕಾಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.