ವಯನಾಡಿನಲ್ಲಿ ಭಾರತ ಸೋತಿದೆಯೇ?: ಮೋದಿ ಗುಡುಗು!

Published : Jun 26, 2019, 03:33 PM IST
ವಯನಾಡಿನಲ್ಲಿ ಭಾರತ ಸೋತಿದೆಯೇ?: ಮೋದಿ ಗುಡುಗು!

ಸಾರಾಂಶ

ಕಾಂಗ್ರೆಸ್ ಸೊಕ್ಕಿನ ನುಡಿಗಳಿಗೆ ಪ್ರಧಾನಿ ಮೋದಿ ತಿರುಗೇಟು| ‘ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ಭಾರತ ಸೋತಿದೆ’| ವಯನಾಡಿನಲ್ಲಿ ಭಾರತ ಸೋತಿದೆಯೇ ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ| ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮೋದಿ ಭಾಷಣ| ರಾಜ್ಯಸಭೆಯಲ್ಲಿ ಮಾತಿನ ಮೂಲಕವೇ ಕಾಂಗ್ರೆಸ್ ಬೆವರಿಳಿಸಿದ ಪ್ರಧಾನಿ| ನವಭಾರತದ ನಿರ್ಮಾಣಕ್ಕೆ ಎಲ್ಲ ಸದಸ್ಯರ ಬೆಂಬಲ ಕೋರಿದ ಮೋದಿ|

ನವದೆಹಲಿ(ಜೂ.26): ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ, ಭಾರತ ಸೋತಿದೆ ಎಂಬ ವಿಪಕ್ಷಗಳ ಕುಹುಕದ ಮಾತಿಗೆ ಪ್ರಧಾನಿ ಮೋದಿ ಸೂಕ್ತ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಚುನಾವಣೆಯಲ್ಲಿ ಭಾರತ ಸೋತಿದೆ ಎಂದಾದರೆ ಕೇರಳದ ವಯನಾಡು ಕ್ಷೇತ್ರದಲ್ಲೂ  ಭಾರತ ಸೋತಿದೆಯೇ ಎಂದು ಪ್ರಶ್ನಿಸಿದರು.

ಜನಾದೇಶವನ್ನು ಹೀಗಳೆಯುತ್ತಿರುವ ಕಾಂಗ್ರೆಸ್ ಪಕ್ಷದ ಸೊಕ್ಕಿನ ನುಡಿಗಳಿಗೆ ಕಾಲವೇ ಸೂಕ್ತ ತಿರುಗೇಟು ನೀಡಲಿದೆ ಎಂದು ಪ್ರಧಾನಿ ಮೋದಿ ಗುಡುಗಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಎಲ್ಲ ಸದಸ್ಯರ ಭಾಷಣಕ್ಕೆ ಧನ್ಯವಾದ ಸಲ್ಲಿಸಿದ ಮೋದಿ, ನವಭಾರತದ ನಿರ್ಮಾಣಕ್ಕೆ ಪಕ್ಷ, ವಿಪಕ್ಷಗಳ ಜಂಜಾಟದಿಂದ ಮೇಲೆದ್ದು ಬರಬೇಕಿದೆ ಎಂದು ಕರೆ ನೀಡಿದರು.

ವಿಪಕ್ಷಗಳ ಕೊಂಕು ನುಡಿಗಳಿಗೆ ತಮ್ಮದೇ ವ್ಯಂಗ್ಯಭರಿತ ಧಾಟಿಯಲ್ಲಿ ತಿರುಗೇಟು ನೀಡಿದ ಮೋದಿ, ಯಾರಿಗೆ ಯಾವ ಜವಾಬ್ದಾರಿ ಎಂಬುದನ್ನು ಈ ದೇಶದ ಜನತೆ ನಿರ್ಧರಿಸಿದ್ದಾರೆ ಎಂದು ವಿಪಕ್ಷಗಳನ್ನು ಕೆಣಕಿದರು.

ಇದೇ ವೇಳೆ ಸರ್ಕರದ ಮುಂದಿನ ಐದು ವರ್ಷಗಳ ಅಭಿವೃದ್ಧಿ ದಾರಿಯನ್ನು ಬಿಚ್ಚಿಟ್ಟ ಪ್ರಧಾನಿ, ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾ ಭಾರತವನ್ನು ಸದೃಢಗೊಳಿಸುವ ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸುವಂತೆ ಎಲ್ಲ ಸದಸ್ಯರಿಗೆ ಕರೆ ನೀಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!