
ಮೈಸೂರು, [ನ.12]: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮೈಸುರು ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದು, ಮಾತನಾಡುವ ವೇಳೆ ಗದ್ಗದಿತರಾಗಿ ಕಣ್ಣೀರಿಟ್ಟರು.
ಮೊದಲ ಭಾರಿ ಸಂಸದನಾಗಿ ಸದನಕ್ಕೆ ಹೋದ ನನಗೆ ಅವರು ಹಿರಿ ಅಣ್ಣನಂತೆ ಇದ್ದರು. ನನ್ನ ಕ್ಷೇತ್ರದ ಯಾವುದೇ ಕೆಲಸವನ್ನು ಮೊದಲ ಪ್ರಾಶಸ್ತ್ಯ ನೀಡಿ ಮಾಡಿಸಿಕೊಡುತ್ತಿದ್ದರು ಎಂದು ಅನಂತಕುಮಾರ್ ಅವರ ಕಾರ್ಯವೈಖರಿಯನ್ನ ನೆನೆದು ಗದ್ಗದಿತರಾದರು.
"
Live Updates: ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ
ಅವರು ಕರ್ನಾಟಕಕ್ಕೂ ಕೇಂದ್ರ ಸರ್ಕಾರಕ್ಕೂ ಸೇತುವಾಗಿದ್ದರು. ಅವರ ಸಾವು ಕೇವಲ ಬಿಜೆಪಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ನಷ್ಟ. ಕಳೆದ ಅಧಿವೇಶನದಲ್ಲಿ ತೆಳ್ಳಗಾಗಿದ್ದರೇ ವಿನಃ ಬಹಳ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದರು. ದೇವರು ಅವರನ್ನು ಇಷ್ಟುಬೇಗ ಕರೆಸಿಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ.
ಅಗಲಿದ ಕೇಂದ್ರ ಸಚಿವ ಅನಂತಕುಮಾರ್ ಸಂಕ್ಷಿಪ್ತ ಪರಿಚಯ
ಅವರಿಂದಾಗಿ ರಾಜ್ಯಕ್ಕೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಸಬರ್‌ಬನ್ ರೈಲು, ಮೈಸೂರಿಗೆ ಪಾಸ್‌ಪೋರ್ಟ್ ಸೇವಾಕೇಂದ್ರ, ತ್ವರಿತಗತಿಯಲ್ಲಿ ಬೆಂಗಳೂರು ಮೈಸೂರು ದಶಪಥ ರಸ್ತೆ ಜಾರಿಯಾಗಲು ಅನುಕೂಲ ಆಯ್ತು.
ನಾವು ಜನರನ್ನು ಕಾಪಾಡಿದರೆ, ದೇವರು ನಮ್ಮನ್ನು ಕಾಪಾಡುತ್ತಾನೆ ಎನ್ನುತ್ತಾರೆ. ಆದರೆ, ಅನಂತ್ ಕುಮಾರ್ ವಿಚಾರದಲ್ಲಿ ಅದು ಸುಳ್ಳಾಗಿದೆ ಎಂದು ಅನಂತಕುಮಾರ್ ಬಗ್ಗೆ ಮಾತನಾಡುತ್ತಾ ಪ್ರತಾಪ್ ಸಿಂಹ ಗದ್ಗದಿತರಾಗಿ ಅರ್ಧಕ್ಕೆ ಮಾತು ನಿಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.