ಪರಪ್ಪನ ಅಗ್ರಹಾರ ಸೇರಿದ ಜನಾರ್ದನ ರೆಡ್ಡಿ ಕೈದಿ ಸಂಖ್ಯೆ ಎಷ್ಟು..?

By Web DeskFirst Published Nov 12, 2018, 9:37 AM IST
Highlights

ಆ್ಯಂಬಿಡೆಂಟ್ ಕಂಪನಿ ಅವ್ಯವಹಾರದ ಕುರಿತು ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣದ ರದ್ದತಿಗಾಗಿ ನಡೆದ ಡೀಲ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರ ಸೇರಿದ್ದಾರೆ. 

ಬೆಂಗಳೂರು :  ಪರಪ್ಪನ ಅಗ್ರಹಾರ ಜೈಲು ಸೇರಿದ ಜನಾರ್ದನ ರೆಡ್ಡಿ ಅವರಿಗೆ 10902 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.

 ಮೊದಲಿಗೆ ಜನಾರ್ದನರೆಡ್ಡಿ ಅವರನ್ನು ಮಂಗಳೂರು ಮೂಲದ ಪೂಜಾರಿ ಎಂಬ ಕೈದಿ ಇದ್ದ ಬ್ಯಾರಕ್‌ಗೆ ಬಿಡಲಾಗಿತ್ತು. 

ಈ ವೇಳೆ  ರೆಡ್ಡಿ ಅವರು ಪ್ರತ್ಯೇಕ ಕೊಠಡಿಗೆ  ಮನವಿ ಮಾಡಿದರು. ನಂತರ ಅದೇ ಬ್ಯಾರಕ್‌ನಲ್ಲಿದ್ದ ಪೂಜಾರಿಯನ್ನು ರೌಡಿಶೀಟರ್ ಸೈಕಲ್ ರವಿ ಇದ್ದ ಬ್ಯಾರಕ್‌ಗೆ ಕಳುಹಿಸಿ, ರೆಡ್ಡಿ ಅವರಿಗೆ ಕೊಠಡಿ ಬಿಟ್ಟು ಕೊಡಲಾಯಿತು ಎಂದು ಜೈಲು ಮೂಲಗಳು ಹೇಳಿವೆ.

click me!