ಮನುಕುಲ ಉಳಿಸಲು ಸಜ್ಜಾದ ಭಾರತ, ತಗಲಾಕ್ಕೊಂಡ್ರಾ ರಾಧಿಕಾ? ಜ.9ರ ಟಾಪ್ 10 ಸುದ್ದಿ!

By Suvarna News  |  First Published Jan 9, 2021, 4:53 PM IST

ಮೇಡ್ ಇನ್ ಇಂಡಿಯಾ ಲಸಿಕೆಯಿಂದ ಮನುಕುಲ ಉಳಿಸಲು ಭಾರತ ಸಜ್ಜಾಗಿದೆ ಎಂದು ಮೋದಿ ಹೇಳಿದ್ದಾರೆ. ಏನೋ ಮಾಡಲು ಹೋಗಿ ರಾಧಿಕಾ ಕುಮಾರಸ್ವಾಮಿ ತಗಲಾಕ್ಕೊಂಡ್ರಾ ಅನ್ನೋ ಅನುಮಾನ ಇದೀಗ ಕಾಡತೊಡಗಿದೆ. ಭಾರೀ ವಿರೋಧದ ಬೆನ್ನಲ್ಲೇ ವಾಟ್ಸಾಪ್ ನೂತನ ನಿಯಮದಲ್ಲಿ ಬದಲಾವಣೆಯಾಗಿದೆ. ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಬಹುಮತವಿದ್ರೂ ಕಾಂಗ್ರೆಸ್‌ಗೆ ಮುಖಭಂಗ, ತಬು ಇನ್ನು ಮದುವೆಯಾಗಿಲ್ಲ ಯಾಕೆ ಸೇರಿದಂತೆ ಜನವರಿ 9ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


2 ಮೇಡ್ ಇನ್ ಇಂಡಿಯಾ ಲಸಿಕೆಯಿಂದ ಮನುಕುಲ ಉಳಿಸಲು ಭಾರತ ಸಜ್ಜು: ಮೋದಿ!...

Latest Videos

undefined

ಭಾರತದಲ್ಲಿ ನಿರ್ಮಾಣವಾದ ಎರಡು ಕೊರೋನಾ ಲಸಿಕೆಯಿಂದ ಮಾನವರ ಉಳಿಸಲು ದೇಶ ಸಜ್ಜಾಗಿದೆ ಎಂದು ಪಿಎಂ ಮೋದಿ ತಿಳಿಸಿದ್ದಾರೆ. ವಿದೇಶ ವ್ಯವಹಾರಗಳ ಸಚಿವಾಲಯ ಆನ್​ಲೈನ್​ನಲ್ಲಿ ಆಯೋಜಿಸಿದ 16ನೇ ಪ್ರವಾಸಿ ಭಾರತೀಯ ದಿನ ಸಮಾವೇಶವದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಾಗತಿಕವಾಗಿ ಭಾರತೀಯ ಸಮುದಾಯ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಏನೋ ಮಾಡಲು ಹೋಗಿ ತಗಲಾಕ್ಕೊಂಡ ರಾಧಿಕಾ, ಮುಚ್ಚಿಟ್ಟ 'ಗುಟ್ಟು' ರಟ್ಟು ಮಾಡಿದ ಸಹೋದರ.!...

ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ವಿವಾದ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ನಾಲ್ಕು ತಾಸುಗಳ ಕಾಲ ಸಿಸಿಬಿ ವಿಚಾರಣೆಗೆ ಒಳಪಟ್ಟರು. ವಿಚಾರಣೆ ವೇಳೆ 75 ಲಕ್ಷ ವ್ಯವಹಾರದ ಬಗ್ಗೆ ರಾಧಿಕಾ ಬಾಯ್ಬಿಟ್ಟಿದ್ದರು. ಆದರೆ 1 ಕೋಟಿ ನಗದು ವ್ಯವಹಾರದ ಬಗ್ಗೆ ಬಾಯ್ಬಿಟ್ಟಿಲ್ಲ. 

ಆರ್ಮ ರಸ್ಲಿಂಗ್: ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್!...

ಲ್ಯಾರಿ ವೀಲ್ಸ್, ಈ ಹೆಸರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ. ಕಾರಣ ವಿಶ್ವದ ಅತ್ಯಂತ ಬಲಿಷ್ಠ ಬಾಲಿಬಿಲ್ಡರ್ ಅನ್ನೋ ಖ್ಯಾತಿಗೆ ಲ್ಯಾರಿ ವೀಲ್ಸ್ ಪಾತ್ರರಾಗಿದ್ದಾರೆ. ಆದರೆ ಇದೇ ಲ್ಯಾರಿ ವೀಲ್ಸ್‌ಗೆ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಾಕ್ ನೀಡಿದ್ದಾರೆ.

ತಬು ಯಾಕೆ ಇನ್ನೂ ಮದುವೆಯಾಗಿಲ್ಲ? ಜಾಕಿ ಶ್ರಾಫ್ ಈಕೆಯನ್ನು ರೇಪ್ ಮಾಡಿದ್ನಾ?...

ತಬು ಹಲವಾರು ನಟರೊಂದಿಗೆ ಸುತ್ತಾಡಿದ್ದಾಳೆ. ಹಲವರೊಂದಿಗೆ ಆಕೆಯ ಪ್ರೇಮಜೀವನ. ಆದರೆ ಯಾರನ್ನೂ ಆಕೆ ಮದುವೆಯಾಗಿಲ್ಲ. ಯಾಕೆ?

ಭಾರೀ ವಿರೋಧದ ಬೆನ್ನಲ್ಲೇ ವಾಟ್ಸಾಪ್ ನೂತನ ನಿಯಮದಲ್ಲಿ ಬದಲಾವಣೆ!...

ವಾಟ್ಸಪ್‌ನಲ್ಲಿ ಇನ್ನು ಮುಂದೆ ಬಳಕೆದಾರರು ತಮ್ಮ ಮಾಹಿತಿಯನ್ನು ಫೇಸ್‌ಬುಕ್‌ ಜೊತೆ ಹಂಚಿಕೊಳ್ಳಬೇಕು ಎಂಬ ನೂತನ ನಿಯಮ| ಫೇಸ್‌ಬುಕ್‌ ಜೊತೆ ಮಾಹಿತಿ ಹಂಚಿಕೆ ವಾಟ್ಸಪ್‌ ಬ್ಯುಸಿನೆಸ್‌ ಚಾಟ್‌ಗಳಿಗೆ ಮಾತ್ರ ಅನ್ವಯ

2 ಲಕ್ಷ ರು.ವರೆಗೆ ಚಿನ್ನಾಭರಣ ಖರೀದಿಗೆ ಕೆವೈಸಿ ಅಗತ್ಯವಿಲ್ಲ!...

ಗ್ರಾಹಕರು ನಗದು ಮೂಲಕ ಖaರೀದಿಸುವ ಚಿನ್ನ, ಬೆಳ್ಳಿ ಸೇರಿದಂತೆ ಇನ್ನಿತರ ಬೆಲೆಬಾಳುವ ಹವಳಗಳಿಗೆ ಸಂಬಂಧಿಸಿದಂತೆ ಕೆವೈಸಿ ಸಲ್ಲಿಕೆ| 2 ಲಕ್ಷ ರು.ವರೆಗೆ ಚಿನ್ನಾಭರಣ ಖರೀದಿಗೆ ಕೆವೈಸಿ ಅಗತ್ಯವಿಲ್ಲ: ನಿಯಮದ ಬಗ್ಗೆ ಕೇಂದ್ರದ ಸ್ಪಷ್ಟನೆ

ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !...

ಭೀಕರ ಅಪಘಾತ, ಆಕ್ಸಿಡೆಂಟ್ ತೀವ್ರತೆಗೆ ಕಾರು ನಾಲ್ಕು ಪಲ್ಟಿಯಾಗಿ ಮುಗುಚಿ ಬಿದ್ದಿದೆ. ಆದರೆ ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಟಾಟಾಗೆ ಧನ್ಯವಾದ ಹೇಳಿದ್ದಾರೆ. 

ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಬಹುಮತವಿದ್ರೂ ಕಾಂಗ್ರೆಸ್‌ಗೆ ಮುಖಭಂಗ...

ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ತೆರೆಬಿದ್ದಿದೆ.

100 ದಿನ ಒಂದೇ ಬಟ್ಟೆ ಧರಿಸಿದ ಮಹಿಳೆ, ಕಾರಣ ಕೇಳಿದ್ರೆ ಆಗುತ್ತೆ ಅಚ್ಚರಿ!...

100 ಡೇ ಚಾಲೆಂಜ್, ನೂರು ದಿನ ಒಂದೇ ಬಟ್ಟೆ ಧರಿಸಿದ ಮಹಿಳೆ| ಚಾಲೆಂಜ್ ಸ್ವೀಕರಿಸಲೂ ಇತ್ತು ಕಾರಣ| ಕಾರಣ ಕೇಳಿ ಅಚ್ಚರಿಗೀಡಾದ ನೆಟ್ಟಿಗರು

ಆಗ ಏನೆಲ್ಲ ಆಯ್ತು ಎಂದು ಹೇಳಲೇ: ಡಿಕೆಶಿ, ಸಿದ್ದುಗೆ ಎಚ್ಚರಿಕೆ ಕೊಟ್ಟ ಮಾಜಿ ಕಾಂಗ್ರೆಸ್ ಲೀಡರ್‌...

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಹೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್  ಎಚ್ಚರಿಕೆ ಕೊಟ್ಟಿದ್ದಾರೆ.

click me!