
ಬೆಂಗಳೂರು (ಜ. 09): ನಯ ವಂಚಕ ಯುವರಾಜ್ ಜೊತೆ ಹಣಕಾಸು ವ್ಯವಹಾರ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಇದು ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ವಿಚಾರಣೆ ವೇಳೆ ಯುವರಾಜ್‌ನಿಂದ 75 ಲಕ್ಷ ತೆಗೆದುಕೊಂಡಿದ್ದು ನಿಜ. ಆದರೆ ಆತನ ಬೇರೆ ಕೆಲಸಗಳಿಗೆ ಸಾಥ್ ನೀಡಿಲ್ಲ ಎಂದಿದ್ದಾರೆ. ಇಲ್ಲಿ ಬರೀ 75 ಲಕ್ಷ ಮಾತ್ರವಲ್ಲ, 1 ಕೋಟಿ ರೂ ಪಡೆದಿದ್ದಾರೆ. ಅದನ್ನು ಸಿಸಿಬಿ ಮುಂದೆ ಮುಚ್ಚಿಡಲು ಹೋಗಿ ತಗಲಾಕ್ಕೊಂಡಿದ್ದಾರೆ.
ಸಿಸಿಬಿ ವಿಚಾರಣೆ ಬಿಗಿಯಾಗುತ್ತಿದ್ದಂತೆ ರಾಧಿಕಾ, ಪ್ರಭಾವಿಗಳಿಂದ ಒತ್ತಡ ಹಾಕಿಸಲು ಪ್ರಾರಂಭಿಸುತ್ತಾರೆ. ಆದರೆ ಇದಕ್ಕೆಲ್ಲಾ ಸಿಸಿಬಿ ಬಗ್ಗುವುದಿಲ್ಲ.
ನಯವಂಚಕ ಯುವರಾಜ್ ಜೊತೆ ಪ್ರಭಾವಿ ರಾಜಕಾರಣಿಗಳ ಫೋಟೊ ಸಿಕ್ಕಿದ್ದು, ಇದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ