ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

Suvarna News   | Asianet News
Published : Apr 04, 2020, 05:13 PM ISTUpdated : Apr 04, 2020, 05:15 PM IST
ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ವೈರಸ್ ಕಾರಣ ಲಾಕ್‌ಡೌನ್ ಆದೇಶ ಜಾರಿಯಲ್ಲಿದ್ದರೂ ಅನವಶ್ಯಕವಾಗಿ ರೋಡಿಗಳಿದವರೆ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರೋಡಿಗಳಿದ ವಾಹನ ಸೀಝ್ ಹಾಗೂ ಕೇಸ್ ಕೂಡ ದಾಖಲಾಗುತ್ತೆ. ಲಾಕ್‌ಡೌನ್ ಕಾರಣ 3 ದಿನದಿಂದ ಆಹಾರವಿಲ್ಲದೆ ಮಲಗಿದ್ದ ಸಹೋದರಿಯರು ಪಿಎಂ ಕಚೇರಿಗೆ ಫೋನ್ ಮಾಡಿ ಸಹಾಯ ಕೇಳಿದ ಅರ್ಧ ಗಂಟೆಯಲ್ಲಿ ಅಧಿಕಾರಿಗಳು ಓಡೋಡಿ ಬಂದಿದ್ದಾರೆ. ಇತ್ತ ಸನ್ನಿ ಲಿಯೋನ್ ಕಿಸ್ಸಿಂಗ್ ವಿಡಿಯೋ ಭಾರಿ ವೈರಲ್ ಆಗಿದೆ. ಎಂ.ಎಸ್.ಧೋನಿಗೆ ಪುತ್ರಿಯಿಂದ ಮೇಕಪ್, ಭಾರತಕ್ಕೆ ವಿಶ್ವಬ್ಯಾಂಕ್ ನೆರವು ಸೇರಿದಂತೆ ಏಪ್ರಿಲ್ 4ರ ಟಾಪ್ 10 ಸುದ್ದಿ ಇಲ್ಲಿವೆ.

ಸೋನಿಯಾ ಗಾಂಧಿ ಗೆಳತಿಗೆ ತಟ್ಟಿತು ಕೊರೋನಾ ವೈರಸ್

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯ ಇಟಲಿಯ ಗೆಳತಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಹೌದು ಇಟಲಿ ಕನ್ನಡಿಗರ ಸಂಘದ ಅಧ್ಯಕ್ಷರಾಗಿರುವ ಹಾಗೂ ನರ್ಸ್ ಆಗಿರುವ ಚಿಕ್ಕಮಗಳೂರಿನ ಮಧು ಹೇಮೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ.

ಹಸಿವು ತಾಳಲಾರದೆ ಪಿಎಂ ಮೋದಿಗೆ ಫೋನ್ ಮಾಡಿದ ಅನಾಥರು: ಓಡೋಡಿ ಬಂದ ಅಧಿಕಾರಿಗಳು!...

ಲಾಕ್‌ಡೌನ್ ಮುಂದುವರೆಯುತ್ತಿರುವಂತೆ ಜನರೆದುರಿನ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಲಾಕ್‌ಡೌನ್‌ನಿಂದಾಗಿ ಬಡ ವರ್ಗದ ಜನರ ಬಳಿ ಇದ್ದ ಹಣ, ದಿನಸಿ ಎಲ್ಲವೂ ಖಾಲಿಯಾಗಿ ಹಸಿವಿನಿಂದ ಕಂಗಾಲಾಗಿದ್ದಾರೆ. ಇದಕ್ಕೊಂದು ಉದಾಹರಣೆ ಭಾಗಲ್ಪುರದಲ್ಲಿ ಕಂಡು ಬಂದಿದೆ. ಇಲ್ಲಿ ಮೂರು ದಿನಗಳಿಂದ ಹಸಿವಿನಿಂದಿದ್ದ ಮೂವರು ಅನಾಥ ಸಹೋದರಿಯರು ಪತ್ರಿಕೆಯಲ್ಲಿ ಕಂಡು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಕಚೇರಿಯ ಸಹಾಯವಾಣಿ ಸಂಖ್ಯೆ 1800118797 ಕರೆ ಮಾಡಿ, ತಮ್ಮ ಪರಿಸ್ಥಿತಿ ತಿಳಿಸಿದ್ದಾರೆ.


ಭಾರತಕ್ಕೆ ವಿಶ್ವಬ್ಯಾಂಕ್‌ 7500 ಕೋಟಿ ನೆರವು ಘೋಷಣೆ!...

ಕೊರೋನಾ ನಿಗಹ: ಭಾರತಕ್ಕೆ ವಿಶ್ವಬ್ಯಾಂಕ್‌ನಿಂದ 7500 ಕೋಟಿ ನೆರವು ಘೋಷಣೆ|  ಆರೋಗ್ಯ ಸುರಕ್ಷತೆಗಾಗಿ ಭಾರತಕ್ಕೆ ವಿಶ್ವ ಬ್ಯಾಂಕ್‌ನಿಂದ ಹಿಂದೆಂದೂ ಸಿಗದಷ್ಟು ದೊಡ್ಡ ಮೊತ್ತದ ಪರಿಹಾರ 


ಊಟ ಸಿಗುತ್ತಿಲ್ಲವೇ? 155214 ಕ್ಕೆ ಕರೆ ಮಾಡಿ!...

ರಾಜ್ಯದಲ್ಲಿರುವ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಶುಕ್ರವಾರದಿಂದ 155214 ದಾಸೋಹ ಎಂಬ ಸಹಾಯವಾಣಿ ಆರಂಭಿಸಿದೆ. ಹಸಿವಿನಿಂದ ಬಳಲುವವರು ಈ ಸಂಖ್ಯೆಗೆ ಕರೆ ಮಾಡಿದರೆ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಮಡಿಕೇರಿಯಲ್ಲಿ ಜೋಳಿಗೆ ಹಿಡಿದು ತಿರುಗ್ತಿದ್ದಾರೆ 9 ಮಂದಿ ತಬ್ಲಿಘಿಗಳು...

ದೆಹಲಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕೊರೋನಾ ಸೋಂಕಿತ ತಬ್ಲಿಘಿಗಳಿರುವಾಗಲೇ ಇದೀಗ ಮಡಿಕೇರಿಯ ವಿರಾಜಪೇಟೆಯಲ್ಲಿ 9 ಜನ ತಬ್ಲಿಘಿಗಳು ಕಂಡು ಬಂದಿದ್ದಾರೆ.


ಲಾಕ್‌ಡೌನ್ ವೇಳೆ ಧೋನಿ ಬ್ಯೂಟಿಷಿಯನ್ ಆದ ಪುತ್ರಿ ಝಿವಾ; ಕೆಲಸ ಕಳೆದುಕೊಂಡೆ ಎಂದ ಡಿಸೈನರ್!...


ಐಪಿಎಲ್ ಟೂರ್ನಿ ರದ್ದು ಹಾಗೂ ಭಾರತ ಲಾಕ್‌ಡೌನ್‌ನಿಂದ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸದ್ಯ ರಾಂಚಿಯಲ್ಲಿನ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ಧೋನಿ ಪುತ್ರಿ ಝಿವಾ ಇದೀಗ ಬ್ಯೂಟಿಷಿಯ್ ಆಗಿ ಬದಲಾಗಿದ್ದಾರೆ. ಧೋನಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ. ಆದರೆ ಇದು ಧೋನಿ ಹೇರ್‌ಸ್ಟೈಲ್ ಡಿಸೈನರ್‌ ತಲೆನೋವು ಹೆಚ್ಚಿಸಿದೆ.


ಈಜು ಕೊಳದಲ್ಲಿ ಮಿಂದೆದ್ದು ಬಿಸಿ ಹೆಚ್ಚಿಸಿದ ಕನ್ನಡದ ನಂಬರ್ 1 ಸೀರಿಯಲ್ ನಾಯಕಿ!...

 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ಕಮಲಿ' ಮುಖ್ಯ ಪಾತ್ರಧಾರಿ ಕಮಲಿ ಅಲಿಯಾಸ್‌ ಅಮೂಲ್ಯಾ ಗೌಡ ದಿನೇ ದಿನೇ ಸಾಮಾಜಿಕ ಜಾಕತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಈ ಗ್ಲಾಮರಸ್ ಫೋಟೋಗಳನ್ನು ನೋಡಿ...


ಸನ್ನಿ ಕಿಸ್ಸಿಂಗ್ ವಿಡಿಯೋ ಹಾಕಿದ್ದೇ ತಡ ವೈರಲ್ಲೋ ವೈರಲ್!...

ಸೆಕ್ಸಿ ಕ್ವೀನ್ ಸನ್ನಿ ಲಿಯೋನ್ ಕಿಸ್ಸಿಂಗ್ ವಿಡಿಯೋವೊಂದನ್ನು ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇದೀಗ ವೈರಲ್ ಅಗಿದೆ. 


ಇರೋದಕ್ಕೆ ಐಷಾರಾಮಿ ರೂಮ್ ಬೇಕಂತೆ; ಜಮಾತ್‌ಗೆ ಹೋಗಿ ಬಂದವರ ಸೊಕ್ಕಿನ ನಡೆಯಿದು!...

ಬೆಂಗಳೂರು ಲಾಕ್‌ಡೌನ್: ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಬಿಸಿ ಮುಟ್ಟಿಸಿದ ಖಾಕಿ ಪಡೆ...

ಅನಾವಶ್ಯಕವಾಗಿ ಓಡಾಡುವ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಲಾಕ್‌ಡೌನ್ ಮುಗಿದ ಬಳಿಕವಷ್ಟೇ ಮಾಲೀಕರಿಗೆ ಹಿಂತಿರುಗಿಸಲಿದ್ದಾರೆ. ವಾಹನಗಳನ್ನು ವಶಕ್ಕೆ ಪಡೆಯುವುದು ಮಾತ್ರವಲ್ಲದೇ ಕೇಸನ್ನು ದಾಖಲಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸ್ಫೋಟಕ ಇರುವ ಶಂಕೆ : ಲಂಡನ್‌ನಲ್ಲಿ ಪಾಕ್‌ ಸಚಿವ ಕಾರು ತಪಾಸಣೆ