ಊಟ ಸಿಗುತ್ತಿಲ್ಲವೇ? 155214 ಕ್ಕೆ ಕರೆ ಮಾಡಿ!

By Kannadaprabha NewsFirst Published Apr 4, 2020, 8:53 AM IST
Highlights

ಊಟ ಸಿಗುತ್ತಿಲ್ಲವೇ? 155214ಕ್ಕೆ ಕರೆ ಮಾಡಿ | ರಾಜ್ಯ ಸರ್ಕಾರದಿಂದ ‘ದಾಸೋಹ’ ಸಹಾಯವಾಣಿ ಆರಂಭ | ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಸಿದವರಿಗೆ ಆಹಾರ ನೀಡಲು ವ್ಯವಸ್ಥೆ | ಸುವರ್ಣನ್ಯೂಸ್‌ ಫೋನ್‌ ಇನ್‌ನಲ್ಲಿ ಸಚಿವ ಹೆಬ್ಬಾರ್‌ ಹೇಳಿಕೆ

ಬೆಂಗಳೂರು (ಏ. 04): ರಾಜ್ಯದಲ್ಲಿರುವ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಶುಕ್ರವಾರದಿಂದ 155214 ದಾಸೋಹ ಎಂಬ ಸಹಾಯವಾಣಿ ಆರಂಭಿಸಿದೆ. ಹಸಿವಿನಿಂದ ಬಳಲುವವರು ಈ ಸಂಖ್ಯೆಗೆ ಕರೆ ಮಾಡಿದರೆ ಆಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ತಿಳಿಸಿದರು.

ಸುವರ್ಣನ್ಯೂಸ್‌ ಸುದ್ದಿವಾಹಿನಿಯಲ್ಲಿ ಶುಕ್ರವಾರ ‘ಹಲೋ ಮಿನಿಸ್ಟರ್‌- ಕಿಕ್‌ಔಟ್‌ ಕೊರೋನಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಾಯವಾಣಿಯು ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿದೆ. ಮೊದಲಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿದ್ದು, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಹಸಿದವರಿಗೆ ಒದಗಿಸಲು ಈ ಸಹಾಯವಾಣಿ ನೆರವಾಗಲಿದೆ ಎಂದರು.

ಸದ್ಯ ಬೆಂಗಳೂರಿನಲ್ಲಿ ಎಂಟು ವಲಯ ಮಾಡಿಕೊಂಡು 55 ಸಾವಿರ ಜನರಿಗೆ ಆಹಾರ ವಿತರಿಸಲಾಗುವುದು. ಅದಮ್ಯ ಚೇತನ, ಆರ್ಟ್‌ ಆಫ್‌ ಲಿವಿಂಗ್‌, ಇಸ್ಕಾನ್‌ ಸೇರಿ ಐದು ಸಂಸ್ಥೆಗಳು ಈ ಯೋಜನೆಗೆ ಕೈ ಜೋಡಿಸಿವೆ. ಉಳಿದಂತೆ ರಾಜ್ಯಾದ್ಯಂತ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ, ಅಂಗನವಾಡಿ ಹಾಗೂ ಸರ್ಕಾರಿ ಹಾಸ್ಟೆಲ್‌ಗಳಿಗೆ ಆಹಾರ ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ನಂಜಗೂಡು ಸೋಂಕಿತರು ನೂರೂ ಆಗಬಹುದು, ಸಾವಿರವೂ ಆಗಬಹುದು: ಮೈಸೂರು ಡಿಸಿ ಕಳವಳ

ಇದಲ್ಲದೆ, ರಾಜ್ಯಾದ್ಯಂತ ಪ್ರತಿದಿನ 14 ಲಕ್ಷ ಕುಟುಂಬಗಳಿಗೆ ಅರ್ಧ ಲೀಟರ್‌ನಂತೆ 7 ಲಕ್ಷ ಲೀ. ಹಾಲು ವಿತರಿಸಲಾಗುತ್ತಿದೆ. 85 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಅಕ್ಕಿ, ಗೋಧಿ ಸೇರಿದಂತೆ ಇನ್ನಿತರ ಅಡುಗೆ ಪದಾರ್ಥಗಳನ್ನು ಒಳಗೊಂಡ ‘ಆಹಾರ ಕಿಟ್‌’ ನೀಡಲಾಗುತ್ತಿದೆ ಎಂದರು.

ಸರ್ಕಾರ ಈಗಾಗಲೇ ಘೋಷಿಸಿರುವಂತೆ ಏ.10ರೊಳಗೆ ಕಾರ್ಮಿಕರಿಗೆ ಎರಡು ಸಾವಿರ, ಕಟ್ಟಡ ಕಾರ್ಮಿಕರಿಗೆ ಒಂದು ಸಾವಿರ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಆರ್ಥಿಕ ವರ್ಷದ ಕೊನೆಯ ದಿನವಾಗಿದ್ದರಿಂದ ಸ್ವಲ್ಪ ತೊಂದರೆಯಾಗಿದೆ. ವಾರದೊಳಗೆ ಕಾರ್ಮಿಕರಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು.

ವೇತನ ಕಡಿತ ಮಾಡಿದ್ರೆ ಕಠಿಣ ಕ್ರಮ:

ಲೌಕ್‌ಡೌನ್‌ ಅವಧಿಯಲ್ಲಿ ಯಾವುದೇ ಸಂಸ್ಥೆ, ಕಾರ್ಖಾನೆ ಅಥವಾ ವ್ಯಾಪಾರಿಗಳು ತಮ್ಮ ಕಾರ್ಮಿಕರಿಗೆ ವೇತನ ಕಡಿತ ಮಾಡಬಾರದು. ವೇತನ ಕಡಿತದ ಬಗ್ಗೆ ದೂರು ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಇದೇ ವೇಳೆ ಎಚ್ಚರಿಕೆ ನೀಡಿದರು.

ಯಾವುದೇ ಕಾರ್ಖಾನೆ, ಕಂಪನಿಗಳು, ಸಣ್ಣ ಪುಟ್ಟವ್ಯವಹಾರಸ್ಥರು ಮತ್ತು ಹೊರ ಗುತ್ತಿಗೆ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬ ಕಾರ್ಮಿಕರಿಗೂ ವೇತನ ಸಹಿತ ರಜೆ ನೀಡಬೇಕು. ವೇತನ ಕಡಿತ ಮಾಡಿದರೆ ಸರ್ಕಾರ ಉಗ್ರ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.

ಲಾಕ್‌ಡೌನ್: ಟ್ರಕ್‌​ನಲ್ಲೇ ದಿನ​ದೂ​ಡು​ತ್ತಿ​ರುವ ಜಾರ್ಖಂಡ್‌ ಕಾರ್ಮಿ​ಕ​ರು!

ಹೊರ ರಾಜ್ಯದಲ್ಲಿ ಉಳಿದಿರುವ ಅಸಂಘಟಿತ ಕಾರ್ಮಿಕರು, ಹೋಟೆಲ್‌ ಕಾರ್ಮಿಕರು ಸೇರಿದಂತೆ ವಿವಿಧ ಕಾರ್ಮಿಕರಿಗೆ ಆಹಾರ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆ ಗೋವಾ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಸ್ಥಳೀಯವಾಗಿ ಆಶ್ರಯ ಪಡೆದು ನಿರ್ಭೀತಿಯಿಂದ ಅಲ್ಲಿಯೇ ಉಳಿಯುವಂತೆ ಸಚಿವರುವ ಮನವಿ ಮಾಡಿದರು.

click me!