
ಬೆಂಗಳೂರು(ನ.08) ಬಿಜೆಪಿ ಮಂಡ್ಯದಲ್ಲಿ ಗಮನಾರ್ಹ ಮತಗಳನ್ನು ಪಡೆದುಕೊಂಡಿದ್ದು ಬಿಟ್ಟರೆ ಶಿವವಮೊಗ್ಗದಲ್ಲಿ ಗೆದ್ದರೂ ಮತಗಳ ಅಂತರದಲ್ಲಿ ಭಾರೀ ವ್ಯತ್ಯಾಸವಾಗಿದೆ.
ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೆಡ್ ಹುಟ್ಟಿಕೊಂಡು ಬಿಜೆಪಿ ನಾಯಕತ್ವ ಬದಲಾವಣೆಗೆ ಕಸರತ್ತು ಶುರುಮಾಡಿದ್ದ ನಾಯಕರು ಈಗ ಸಹ ನಿಧಾನಕ್ಕೆ ಮುನ್ನೆಲೆಗೆ ಬಂದರೆ ಆಶ್ಚರ್ಯವಿಲ್ಲ. ಬಿಜೆಪಿ ಹೈಕಮಾಂಡಿಗೂ ಇರುವ ನಾಯಕತ್ವದ ಕುರಿತು ದೂರು ದಾಖಲಾಗಬಹುದು.
ನಾಯಕತ್ವದ ಕುರಿತು ಸೊಗಡು ಶಿವಣ್ಣ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ,. ಇನ್ಜು ಸಿಟಿ ರವಿ ಮತ್ತು ಸುರೇಶ್ ಕುಮಾರ್ ಇದು ಪಕ್ಷದ ಆತ್ಮಾವಲೋಕನಕ್ಕೆ ಸಕಾಲ ಎಂದು ಹೇಳಿದ್ದಾರೆ.
ಶಿವಮೊಗ್ಗ ಬಿಜೆಪಿ ಗೆಲುವಿಗೆ 6 ಕಾರಣ, ಕಾಂಗ್ರೆಸ್ ಕೊಡುಗೆಯೂ ಉಂಟು!
ಎಲ್ಲೆಡೆ ಒಂದೊಂದು ಬಣಗಳಾಗಿ ಮಾರ್ಪಟ್ಟಿದೆ. ಜಾತಿಗೊಬ್ಬ ನಾಯಕನಂತೆ ಎಲ್ಲಾ ಕಡೆ ಗುಂಪುಗಾರಿಕೆ ಮಾಡಿಕೊಂಡು ಪಕ್ಷವನ್ನು ಅವನತಿಯತ್ತ ಕೊಂಡೊಯ್ಯಲಾಗುತ್ತಿದೆ. ಇನ್ನಾದರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು. ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಲಗ್ಗೆ ಇಟ್ಟಿವೆ. ಬಿಜೆಪಿ ಶಕ್ತಿಯನ್ನು ಕುಂದುವಂತೆ ಮಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಅನ್ಯ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಕರೆತಂದು ಮೂಲ ಕಾರ್ಯಕರ್ತರನ್ನು, ಮುಖಂಡರನ್ನು ಕಡೆಗಣಿಸುತ್ತಿರುವುದೇ ಸಮಸ್ಯೆಗೆ ಮೂಲ ಕಾರಣ ಎಂದು ಸೊಗಡು ಶಿವಣ್ಣ ಹೇಳಿದ್ದಾರೆ.
5 ಕ್ಷೇತ್ರಗಳ ಉಪ ಚುನಾವಣೆ : ಯಾರಿಗೆ ಎಷ್ಟು ಮತಗಳು? ಫುಲ್ ಡಿಟೇಲ್ಸ್
ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ಬಿಜೆಪಿಗೆ ಹೊಸ ನಾಯಕತ್ವ ದೊರೆಯಲಿದೆಯೇ? ಈಗಿರುವ ನಾಯಕತ್ವ ಬದಲಾವಣೆಗೆ ತೆರೆಮರೆಯ ಕಸರತ್ತು ಆರಂಭವಾಗಿದೆಯೇ? ಉಪಚುನಾವಣೆ ವೇಳೆ ಜವಾಬ್ದಾರಿ ಪಡೆದುಕೊಂಡಿದ್ದ ನಾಯಕರನ್ನು ಹಿಂದಕ್ಕೆ ಸರಿಸಲಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಸ್ವತಃ ಬಿಜೆಪಿ ನಾಯಕರ ಆದಿಯಾಗಿ ಕಾರ್ಯಕರ್ತರಿಗಿದೆ. ಒಟ್ಟಿನಲ್ಲಿ ಉಪಚುನಾವಣೆ ಸೋಲಿನ ನಂತರ ರಾಜ್ಯ ಬಿಜೆಪಿ ಕವಲುದಾರಿಗೆ ಬಂದು ನಿಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.