ಬಿಜೆಪಿಯಲ್ಲಿ ಅಸಮಧಾನ ಸ್ಫೋಟ, ಕ್ಲೀನ್ ಸ್ಪೀಪ್ ಗೆಲುವು ಸಾಧಿಸಿದ ಭಾರತ; ಫೆ.2ರ ಟಾಪ್ 10 ಸುದ್ದಿ!

By Suvarna News  |  First Published Feb 2, 2020, 5:10 PM IST

ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಅಸಮಧಾನ ಸ್ಫೋಟ ಗೊಂಡಿದೆ. ಮಂತ್ರಿ ಸ್ಥಾನಕ್ಕಾಗಿ ರಾಜೀನಾಮೆ ಅಸ್ತ್ರ ಪ್ರಯೋಗಿಸಲು ಸಚಿವರು ಮುಂದಾಗಿದ್ದಾರೆ. ಇತ್ತ ಬಜೆಟ್‌ನಲ್ಲಿ ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂಪಾಯಿ ಮೀಸಲಿಡಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಗೆಲುವು ಸಾಧಿಸಿದ ಟೀಂ ಇಂಡಿಯಾ ಸರಣಿ ಕ್ಲೀನ್ ಸ್ಪೀಪ್ ಮಾಡಿದೆ. ಫೆಬ್ರವರಿ 2ರ ಭಾನುವಾರ ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.


ಮಂತ್ರಿಗಿರಿಗಾಗಿ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ರಾಜೀನಾಮೆ ಬೆದರಿಕೆ

Tap to resize

Latest Videos

undefined

ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆಯೇ, ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮಂತ್ರಿಗಿರಿಗಾಗಿ ಸಚಿವಾಕಾಂಕ್ಷಿಗಳು ಬಿಎಸ್‌ವೈ ದುಂಬಾಲು ಬಿದ್ದಿದ್ದಾರೆ. ಅದರಲ್ಲೂ ಹಿರಿಯ ಶಾಸಕರೊಬ್ಬರ ಬೆಂಬಲಿಗರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ. 

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಒಂದೂವರೆ ತಿಂಗಳಿಂದ ಮಂತ್ರಿಗಿರಿಗಾಗಿ ಕಾಯ್ತಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಸಿಹಿ ಸುದ್ದಿ ಕೊಟ್ಟಿದೆ. ಸಂಪುಟ ವಿಸ್ತರಣೆ ಫೆ.6ಕ್ಕೆ ಪಕ್ಕಾ ಆಗಿದೆ. ಆದ್ರೆ ಯಾರ್ ಯಾರಿಗೆ ಸಚಿವ ಸ್ಥಾನ ಸಿಗಲಿದೆ. ಗೆದ್ದ ನೂತನ ಶಾಸಕರ ಪೈಕಿ ಎಷ್ಟು ಜನರಿಗೆ ಅವಕಾಶ ಸಿಗುತ್ತೆ. ಮೂಲ ಬಿಜೆಪಿಗರಲ್ಲಿ ಯಾರಿಗೆ ಮಂತ್ರಿಭಾಗ್ಯ ಒಲಿಯುತ್ತೆ ಅನ್ನೋದು ಕುತೂಹಲವಾಗಿಯೇ ಇದೆ. 

ವಾಕಿಂಗ್ ಮಾಡ್ತಿದ್ದ ವಿಶ್ವ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರ ಭೀಕರ ಕೊಲೆ!

ಮುಂಜಾನೆ ವಾಯುವಿಹಾರಕ್ಕೆಂದು ತೆರಳಿದ್ದ ಉತ್ತರ ಪ್ರದೇಶದ ವಿಶ್ವ ಹಿಂದೂ ಮಹಾಸಭಾ ಅಧ್ಯಕ್ಷ ರಂಜಿತ್ ಬಚ್ಚನ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಲಕ್ನೋದ ಹಜರತ್ ಗಂಜ್ ನಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.

ಪೊಲೀಸಪ್ಪನಿಗೆ ಒದ್ದ ಲಂಗೂರ್, ವಿಡಿಯೋ ಫುಲ್ ವೈರಲ್!

ಟ್ವೀಟ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಪೊಲೀಸ್ ಪರೇಡ್‌ ನಡೆಯುತ್ತಿದ್ದ ಮೈದಾನಕ್ಕೆ ಬಂದ ಲಂಗೂರ್‌ ಒಂದು ಎಂಟ್ರಿ ಕೊಟ್ಟಿದ್ದು, ಅಲ್ಲಿ ಡ್ರಿಲ್ ನಿರತ ಪೊಲೀಸ್ ಅಧಿಕಾರಿಯೊಬ್ಬರಿಗೆ ಒದೆ ಕೊಟ್ಟು ಓಡಿದೆ. ಅದೆಷ್ಟು ಜೋರಾಗಿ ಒದ್ದಿದೆ ಎಂದರೆ ಮಾರ್ಚ್ ಮಾಡುತ್ತಿದ್ದ ಪೊಲೀಸಪ್ಪನೂ ಸಮತೋಲನ ಕಳೆದುಕೊಂಡಿದ್ದಾರೆ. IPS ಪಂಕಜ್ ನೈನ್ ಶೇರ್ ಮಾಡಿಕೊಂಡಿರುವ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಸರಣಿ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ರಾಸ್ ಟೇಲರ್, ಟಿಮ್ ಸೈಫರ್ಟ್ ಅರ್ಧಶತಕದ ಹೊರತಾಗಿಯೂ ಟೀಂ ಇಂಡಿಯಾ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 7 ರನ್‌ಗಳ ರೋಚಕ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡುವುದರ ಮೂಲಕ ಏಕದಿನ ವಿಶ್ವಕಪ್ ಸೆಮಿಫೈನಲ್‌ ಸೋಲಿನ ಸೇಡು ತೀರಿಸಿಕೊಂಡಿದೆ.

ರಶ್ಮಿಕಾ ಹೊಸ ಅವತಾರಕ್ಕೆ ಅಭಿಮಾನಿಗಳು ಕಳೆದು ಹೋಗೋದು ಗ್ಯಾರಂಟಿ!

ತೆಲುಗು ಸ್ಟಾರ್ ನಟ ನಿತಿನ್ ಜತೆ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ತೆಲುಗು ಸಿನಿಮಾ ‘ಭೀಷ್ಮ’. ಈ ಚಿತ್ರದ ಹಾಡೊಂದರಲ್ಲಿ ರಶ್ಮಿಕಾ ನೀಡಿರುವ ಸೆಕ್ಸಿ ಪೋಸ್ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದೀಗ ಭೀಷ್ಮ ಸಿನಿಮಾದ 'ವಾಟ್ ಎ ಲವ್ಲೀ ಬ್ಯೂಟಿ..' ಹಾಡಿನ ಸಣ್ಣ ಟೀಸರ್ ಪ್ರೋಮೊ ರಿಲೀಸ್ ಆಗಿದೆ. ಈ ಹಾಡನ್ನು ನೋಡಿದ್ರೆ ರಶ್ಮಿಕಾ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗೋದು ಗ್ಯಾರಂಟಿ.

ಪ್ರಧಾನಿ ಮೋದಿ ಭದ್ರತೆಗೆ 600 ಕೋಟಿ ರೂ. ಮೀಸಲಿಟ್ಟ ಬಜೆಟ್!

 ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆ(ಫೆ.01) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸಿದ್ದು, ಬಜೆಟ್’ಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರ ಭದ್ರತೆಗಾಗಿ ಪ್ರಸಕ್ತ ಬಜೆಟ್ ಬರೋಬ್ಬರಿ 600 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.  

ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್!

ಮೋದಿ ಆಡಳಿತಾವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇವಡು ಮಂಡಿಸಿರುವ ಬಜೆಟ್‌ಗೆ ಪರ ವಿರೋಧಗಳು ವ್ಯಕ್ತವಾಗಿವೆ. ಕೃಷಿ, ಆರೋಗ್ಯ, ಉದ್ಯಮ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಿಗೆ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್, ಬೆಲೆ ಏರಿಕೆಯ ಕಹಿಯನ್ನೂ ನೀಡಿದ್ದಾರೆ. 

ರಾಜಕೀಯ ನಾಯಕರಿಗೆ, ಚುನಾವಣಾ ಪ್ರಚಾರಕ್ಕೆ ಮಾಡಿಫೈಡ್ ಟಾಟಾ ಹೆಕ್ಸಾ!

ರಾಜಕೀಯ ಮುಖಂಡರು ತಮಗೆ ಬೇಕಾದ ರೀತಿಯಲ್ಲಿ ಕಾರು ಮಾಡಿಫಿಕೇಶನ್ ಮಾಡಿಸುತ್ತಾರೆ. ತಮ್ಮ ಪ್ರಯಾಣ, ಸಾರ್ವಜನಿಕ ಸಭೆ, ಕಾರ್ಯಕ್ರಮಗಳಿಗೆ ತೆರಳಲು ತಮ್ಮ ಕಾರನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಇದು ಚುನಾವಣಾ ಪ್ರಚಾರದ ವೇಳೆ ಮಾಡಿಫಿಕೇಶನ್ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಇದೀಗ ಟಾಟಾ ಹೆಕ್ಸಾ ಕಾರನ್ನು ರಾಜಕೀಯ ನಾಯಕರಿಗಾಗಿ ಮಾಡಿಫೈ ಮಾಡಲಾಗಿದೆ. 

ಸಂಪುಟ ಸೇರ್ಪಡೆಗೂ ಮುನ್ನವೇ ಸಚಿವರಾದ ಬಿಜೆಪಿ ನೂತನ ಶಾಸಕ

ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸಂಪುಟಕ್ಕೆ ಸೇರ್ಪಡೆಗೂ ಮುನ್ನವೇ ಆಹ್ವಾನ ಪತ್ರಿಕೆಯಲ್ಲಿ ಸಚಿವರಾಗಿ ಮಿಂಚುತ್ತಿದ್ದಾರೆ. ವೀರಶೈವ-ಲಿಂಗಾಯತ ಯುವಕ ಸೇವಾ ಟ್ರಸ್ಟ್ ಇಂದು (ಭಾನುವಾರ) ಕೆಂಗೇರಿ ಉಪಚನಗರದ ಕೊಮ್ಮಘಟ್ಟ ಬಳಿ ಡಾ.  ಶಿವಕುಮಾರ್ ಸ್ವಾಮೀಜಿ ಅವರ 1ನೇ ವರ್ಷದ ಪುಣ್ಯತಿಥಿ ಸಮಾರಂಭವನ್ನು ಹಮ್ಮಿಕೊಂಡಿದೆ. 
 

click me!