
ನವದೆಹಲಿ[ಫೆ.02]: 2020ರ ಕೇಂದ್ರ ಬಜೆಟ್ ಮಂಡನೆಯಾಗಿದೆ. ಪ್ರತಿಯೊಂದು ವಾಟ್ಸಾಪ್ ಗ್ರೂಪ್ ಗಳಲ್ಲಿ ಅರ್ಥ ಶಾಸ್ತ್ರಜ್ಞರು ಹುಟ್ಟಿಕೊಂಡಿದ್ದಾರೆ. ಆದರೆ ಇವೆಲ್ಲವನ್ನೂ ಹೊರತುಪಡಿಸಿ ಸದ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮಂಡಿಸುತ್ತಿದ್ದಾಗಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. Baklol ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೋ ಪೋಸ್ಟ್ ಮಾಡಿದ್ದು, ಇದು ಬೆಂಕಿಯಂತೆ ಹಬ್ಬಿಕೊಳ್ಳುತ್ತಿದೆ. ಈ ವಿಡಿಯೋದಲ್ಲಿ ನಿರ್ಮಲಾ ಹಿಂದೆ ಕುಳಿತಿರುವ ಸಂಸದರೊಬ್ಬರು ತಮ್ಮ ಕಣ್ಣುಗಳನ್ನು ನಿರಂತರವಾಗಿ ಮುಚ್ಚಿ ತೆರೆಯುತ್ತಿರುವ ದೃಶ್ಯಗಳಿವೆ. ಸದ್ಯ ಈ ವಿಡಿಯೋ ಟ್ರೋಲ್ ಆಗಲಾರಂಭಿಸಿದೆ.
ನಿದ್ದೆ ಬೀಳದಂತೆ ಎಚ್ಚರವಾಗಿರಲು ಪ್ರಯತ್ನ?
ಈ ವಿಡಿಯೋ ಶೇರ್ ಮಾಡುತ್ತಾ 'ಉದ್ದದ ಬೋರಿಂಗ್ ಭಾಷಣದ ವೇಳೆ ತನ್ನನ್ನು ತಾನು ಹೇಗೆ ಎಚ್ಚರವಾಗಿರಿಸುವುದು ಎಂದು ನೋಡಿ' ಎಂದು ಬರೆದಿದ್ದಾರೆ.
ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!
ಕಾಂಟಾಕ್ಟ್ ಲೆನ್ಸ್ ಸರಿಪಡಿಸುವ ಯತ್ನ
ಹಣಕಾಸುಬ ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಆಡಳಿತ ಅವಧಿಯಲ್ಲಿ ಎರಡನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಆರ್ಥಿಕತೆಗೆ ಟಾನಿಕ್ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇದು ಕೇವಲ ಅಂಕಿ ಅಂಶ ಪ್ರಸ್ತುತಪಡಿಸುವ ಬಜೆಟ್ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ