ವಂದನಾಗೆ ಹಲ್ಲೆ ಮಾಡಿದ ನಟಿ ಸಂಜನಾ To ಕೈಜಾರುತ್ತಾ ಡಿಸಿಎಂ ಸ್ಥಾನ?ಡಿ.27ರ ಟಾಪ್ 10 ಸುದ್ದಿ!

By Suvarna News  |  First Published Dec 27, 2019, 5:17 PM IST

ಸ್ಯಾಂಡಲ್‌ವುಡ್ ವಿವಾದಿತ ನಟಿ ಸಂಜನಾ ರಂಪಾಟ ಮೂಲಕ ಮತ್ತೆ ಸುದ್ದು ಮಾಡುತ್ತಿದ್ದಾರೆ. ನಿರ್ಮಾಪಕಿ ವಂದನಾ ಜೈನ್‌ಗೆ ಹಲ್ಲೆ ಮಾಡಿದ್ದಾರೆ ಅನ್ನೋ ದೂರು ದಾಖಲಾಗಿದೆ. ಇತ್ತ ಹರಿಯಾಣದ ಮೈತ್ರಿ ಪಕ್ಷ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಡಿಸಿಂ ಸ್ಥಾನ ಕೈಜಾರುವ ಆತಂಕದಲ್ಲಿದೆ. ಪ್ರಧಾನಿಗೆ ಪಾಕ್ ಕ್ರಿಕೆಟಿಗನ ಮನವಿ, ಬಿಎಸ್‌ವೈ ಜೀವನಚರಿತ್ರೆ ಸೇರಿದಂತೆ ಡಿಸೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.


ಡ್ರಗ್ಸ್, ಮದ್ಯದ ನಶೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯ ಮಿಡ್‌ ನೈಟ್‌ ರಂಪಾಟ...!

Tap to resize

Latest Videos

undefined

ನಟಿ ಸಂಜನಾ ಗಲ್ರಾನಿ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇತ್ತೀಚೆಗೆ ಮೀಟೂ ವಿಚಾರದಲ್ಲಿ ಸಂಜನಾ ಸುದ್ದಿಯಾಗಿದ್ದರು. ಈಗ ಬಾಲಿವುಡ್​ ನಿರ್ಮಾಪಕಿಯೊಬ್ಬರ ಜೊತೆ ಕಿರಿಕ್​ ಮಾಡಿಕೊಂಡು ಚರ್ಚೆಗೆ ಕಾರಣವಾಗಿದ್ದಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್‍ನಲ್ಲಿ ಡ್ರಗ್ಸ್, ಮದ್ಯದ ನಶೆಯಲ್ಲಿ ಗಲ್ರಾನಿ ರಂಪಾಟ ಮಾಡಿದ್ದಾರೆ. 

ಹಿರಿಯ ನಾಯಕನ ರಾಜೀನಾಮೆ: ಇಕ್ಕಟ್ಟಿನಲ್ಲಿ ಬಿಜೆಪಿ ಮೈತ್ರಿ ಪಕ್ಷ!

ಜನನಾಯಕ್ ಜನತಾ ಪಾರ್ಟಿಯ ಹಿರಿಯ ನಾಯಕರೊಬ್ಬರು ಧಿಡೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಹರ್ಯಾಣದಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಡಿಸಿಎಂ ಆಗಿರುವ ದುಷ್ಯಂತ್ ಚೌಟಾಲಾ ಸದ್ಯ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ದುಷ್ಯಂತ್ ಚೌಟಾಲಾ ವಿರುದ್ಧ ಬಹಿರಂಗವಾಗಿಯೇ ಟೀಕಿಸಿದ್ದ, ಹರ್ಯಾಣದ ಶಾಸಕ ರಾಮ್ ಕುಮಾರ್ ಗೌತಮ್ ಬುಧವಾರದಂದು ಪಕ್ಷದ ಉಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಅವಾರ್ಡ್‌ ಕಾರ್ಯಕ್ರಮದಲ್ಲಿ 'ವಿಜಯ್' ಮದುವೆ ಆಗುವುದಾಗಿ ರೋಸ್‌ ಕೊಟ್ಟ ರಶ್ಮಿಕಾ!

ಸ್ಯಾಂಡಲ್‌ವುಡ್‌ ಬ್ಯೂಟಿ, ಕರ್ನಾಟಕದ ಕ್ರಶ್ ಎಂದೇ ಹೆಸರು ಮಾಡಿರುವ ರಶ್ಮಿಕಾ ಮಂದಣ್ಣ ಚೆನ್ನೈನ ಅವಾರ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ನಿರೂಪಕ ಕೊಟ್ಟ ಟಾಸ್ಕ್‌ನಲ್ಲಿ 'ವಿಜಯ್' ಹೆಸರು ಇರುವ ಹುಡುಗರನ್ನೇ ಆರಿಸಿಕೊಂಡಿದ್ದಾರೆ.

ಪೌರತ್ವ ಕಾಯ್ದೆ ವಿರೋಧ: ರಾಜ್ಯದಲ್ಲೂ ಗಲಭೆ ಮಾಡಿದವರ ಆಸ್ತಿ ಜಪ್ತಿ?

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಸುವ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಉತ್ತರ ಪ್ರದೇಶ ಮಾದರಿಯಲ್ಲಿ ಆಸ್ತಿ ಜಪ್ತಿ ಮಾಡಲಾಗುವುದು. ಇದಕ್ಕಾಗಿ ಕಾನೂನು ಜಾರಿ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಹಿಂದೂ ಅನ್ನೋ ಕಾರಣಕ್ಕೆ ತುಳಿದರು, ಪ್ರಧಾನಿಗೆ ಮನವಿ ಮಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!

ಪಾಕಿಸ್ತಾನದಲ್ಲಿನ ಹಿಂದೂಗಳ ಪರಿಸ್ಥಿತಿ ಹೇಗಿದೆ ಅನ್ನೋದು ಹಲವು ಬಾರಿ ಬಹಿರಂಗವಾಗಿದೆ. ಇದೀಗ ಭಾರತದ ಪೌರತ್ವ ಕಾಯ್ದೆ  ಬೆನ್ನಲ್ಲೇ ಪಾಕಿಸ್ತಾನದ ಹಿಂದೂ ಕ್ರಿಕೆಟಿಗ ಮೇಲಿನ ಕಿರುಕಳ ಮತ್ತೆ ಸದ್ದು ಮಾಡುತ್ತಿದೆ. ಶೋಯೆಬ್ ಅಕ್ತರ್ ಹೇಳಿಕೆ ಬೆನ್ನಲ್ಲೇ ಕ್ರಿಕೆಟಿಗ ದಾನೀಶ್ ಕನೇರಿಯಾ ಇದೀಗ ಪ್ರಧಾನಿಗೆ ಮನವಿ ಮಾಡಿದ್ದಾರೆ. 

ಮಲೆನಾಡಿನಲ್ಲಿ ನಡೆಯಿತು ಹೀನ ಕೃತ್ಯ : ಡ್ರಾಪ್ ಕೊಡೊ ನೆಪದಲ್ಲಿ ಮಹಿಳೆ ಮೇಲೆ ರೇಪ್

ಮಹೀಲೆಗೆ ಡ್ರಾಪ್ ನೀಡುವ ನೆಪದಲ್ಲಿ ಆಕೆಯ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದ ಸಮೀಪ ಘಟನೆ ನಡೆದಿದೆ.

ಸಿನಿಮೀಯ ರೀತಿಯಲ್ಲಿ ಕಳ್ಳರನ್ನು ಹಿಡಿದ ಸ್ಯಾಂಡಲ್‌ವುಡ್ ನಟ!

'ಅನ್ವೀಷಿ' ಹಾಗೂ 'ಲವ್‌ ಯೂ 2' ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ನಟ ರಘು ಭಟ್ ಕಳ್ಳನೋರ್ವನನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಅವನೇ ಶ್ರೀಮನ್ನಾರಾಯಣ ಪ್ರೀಮಿಯರ್ ಶೋ ವೀಕ್ಷಿಸಿ ಪತ್ನಿಯೊಂದಿಗೆ ಮಧ್ಯರಾತ್ರಿ ತೆರಳುವಾಗ ಘಟನೆ ನಡೆದಿದೆ. 

ನಿಂಬೆಹಣ್ಣು ಮಾರುತ್ತಿದ್ದ ಹುಡುಗ ಸಿಎಂ: ಬಿಎಸ್‌ವೈ ಜೀವನ ಚರಿತ್ರೆಯಲ್ಲಿ ಸ್ಫೋಟಕ ಸತ್ಯ.

ರಾಜ್ಯದಲ್ಲೀಗ ಆತ್ಮಚರಿತ್ರೆಗಳ ಸುಗ್ಗಿಕಾಲ. ಕರ್ನಾಟಕದ ಮೂವರು ರಾಜಕೀಯ ದಿಗ್ಗಜರ ಜೀವನಚರಿತ್ರೆಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗ್ತಾ ಇವೆ. ಮೊದಲು ಎಸ್.ಎಂ ಕೃಷ್ಣ, ನಂತ್ರ ದೇವೇಗೌಡ್ರು, ಬಳಿಕ ಯಡಿಯೂರಪ್ಪ. ಮುಖ್ಯಮಂತ್ರಿ ಯಡಿಯೂರಪ್ಪನವರ ರೋಚಕ ಜೀವನಕಥೆ ರೆಡಿಯಾಗ್ತಿದೆ. ಜನ್ಮದಿನಕ್ಕೆ ಬಿಡುಗಡೆಯಾಗಲಿರುವ ಬಿಎಸ್‌ವೈ ಜೀವನಚರಿತ್ರೆಯೇ ತ್ರಿವಿಕ್ರಮ ಯಡಿಯೂರಪ್ಪ.


ನೀವು ತಿಳಿದುಕೊಳ್ಳಲೇಬೇಕಾದ ಚಿನ್ನದ ದರ: ಮಾರುಕಟ್ಟೆ ಹರೋಹರ!

ಮಲ್ಟಿ ಕಮೋಡಿಟಿ ಎಕ್ಸಚೇಂಜ್'ನಲ್ಲಿ ಚಿನ್ನದ ಬೆಲೆಯಲ್ಲಿ ಶೇ. 0.32ರಷ್ಟು ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ ದೇಶೀಯ ಮಾರುಕಟ್ಟೆಯಲ್ಲಿ ಇದೀಗ 38,763 ರೂ. ಆಗಿದೆ. ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಗುಡ್ ಬೈ 2019: ಆಟೋ ಕ್ಷೇತ್ರದಲ್ಲಿ ಅಚ್ಚರಿ ನೀಡಿದ ಟಾಪ್ 10 ಸುದ್ದಿ!

2019ಕ್ಕೆ ಗುಡ್ ಬೈ ಹೇಳಿ 2020ನ್ನು ಆಹ್ವಾನಿಸಲು ಸಜ್ಜಾಗಿದ್ದೇವೆ. 2019ರಲ್ಲಿ ಆಟೋಮೊಬೈಲ್ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಅಷ್ಟೇ ಹಿನ್ನಡೆಯನ್ನು ಅನುಭವಿಸಿದೆ. 2019ರಲ್ಲಿ ಹಲವು ಕಾರು ಕಂಪನಿಗಳು ಭಾರತಕ್ಕೆ ಎಂಟ್ರಿ ಕೊಟ್ಟು ಯಶಸ್ವಿಯಾಗಿದೆ. ಆದರೆ ವರ್ಷಾಂತ್ಯದಲ್ಲಿ ವಾಹನ ಮಾರಾಟ ಕುಸಿತ ಸೇರಿದಂತೆ ಹಲವು ಸಂಕಷ್ಟಗಳನ್ನೂ ಅಟೋ ಕ್ಷೇತ್ರ ಕಂಡಿದೆ. 

click me!