
ನವದೆಹಲಿ(ಡಿ.27): ಬೆಂಕಿ ಹಚ್ಚಿಸುವವರು ನಾಯಕರೇ ಅಲ್ಲ ಎಂಬ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ವಿಪಕ್ಷಗಳು ಕೆಂಡಾಮಂಡಲವಾಗಿವೆ. ಸೇನಾ ಮುಖ್ಯಸ್ಥರು ರಾಜಕೀಯ ಹೇಳಿಕೆ ನೀಡಿರುವುದು ಖಂಡನೀಯ ಎಂದು ಪ್ರತಿಪಕ್ಷಗಳು ಕಿಡಿಕಾರಿವೆ.
ವಿದ್ಯಾರ್ಥಿಗಳು ಹಾಗೂ ಜನ ಸಮೂಹಕ್ಕೆ ಬೆಂಕಿ ಹಚ್ಚಲು ಹಾಗೂ ಹಿಂಸಾಚಾರ ನಡೆಸಲು ಮಾರ್ಗದರ್ಶನ ಮಾಡುವುದು ನಾಯಕತ್ವವಲ್ಲ. ಅಂತಹವರು ನಾಯಕರಾಗಲು ಯೋಗ್ಯರೂ ಅಲ್ಲ ಎಂದು ಬಿಪಿನ್ ರಾವತ್ ಹೇಳಿಕೆ ನೀಡಿದ್ದರು.
ಮಿಲಿಟರಿಗಾಗಿ ಹೊಸ ಇಲಾಖೆ, ಹೊಸ ಬಾಸ್!
ರಾವತ್ ಹೇಳಿಕೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಇದೇ ಡಿ.31ರಂದು ನಿವೃತ್ತರಾಗಲಿರುವ ಜನರಲ್ ರಾವತ್ ರಾಜಕೀಯ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ ಎಂದು ಹರಿಹಾಯ್ದಿವೆ.
70 ವರ್ಷಗಳ ಭಾರತೀಯ ಸೇನೆಯ ಇತಿಹಾಸದಲ್ಲಿ ಸಂಪ್ರದಾಯದಿಂದ ವಿಮುಖವಾಗಿರುವುದನ್ನು ರಾವತ್ ಅವರ ರಾಜಕೀಯ ಹೇಳಿಕೆ ಬಿಂಬಿಸುತ್ತಿದೆ ಎಂದು ಹೋರಾಟಗಾರ ಯೋಗೇಂದ್ರ ಯಾವದ್ ಹೇಳಿದ್ದಾರೆ.
POK ಕಸಿಯಲು ನಾವು ರೆಡಿ: ರಾವತ್ ಹೇಳಿಕೆಯಿಂದ ಪಾಕ್‌ನಲ್ಲಿ ಗಡಿಬಿಡಿ!
ಸೇನಾ ಮುಖ್ಯಸ್ಥರಿಗೆ ರಾಜಕೀಯ ಬಗ್ಗೆ ಮಾತನಾಡಲು ಅನುಮಿತಿ ನೀಡಿದರೆ ಸರ್ಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಅನುಮತಿ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ.
ಅದರಂತೆ ಬಿಪಿನ್ ರಾವತ್ ಹೇಳಿಕೆಯನ್ನು ಖಂಡಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಒವೈಸಿ, ತಮ್ಮ ಕಾರ್ಯವ್ಯಾಪ್ತಿ ತಿಳಿದುಕೊಳ್ಳುವುದು ಕೂಡ ನಾಯಕತ್ವದ ಭಾಗ ಎಂಬುದನ್ನು ಸೇನಾ ಮುಖ್ಯಸ್ಥರು ಮರೆತಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ