
ರಾಯ್‌ಪುರ್(ಡಿ.27): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಛತ್ತೀಸ್'ಗಡ್'ನ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವಕ್ಕೆ ಚಾಲನೆ ನೀಡಿದ್ದು, ವೇದಿಕೆ ಮೇಲೆ ಸಾಂಪ್ರದಾಯಿಕ ನೃತ್ಯ ಮಾಡಿ ಗಮನ ಸೆಳೆದರು.
ರಾಯ್‌ಪುರ್'ದಲ್ಲಿ ಇಂದಿನಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಬುಡಕಟ್ಟು ನೃತ್ಯೋತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದೆ. ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್, ನೃತ್ಯಗಾರರೊಂದಿಗೆ ಹೆಜ್ಜೆ ಹಾಕುವ ಮೂಲಕ ಸಭಿಕರ ಮನಗೆದ್ದರು.
ರಾಹುಲ್, ಪ್ರಿಯಾಂಕಾ ಜೀವಂತ ಪೆಟ್ರೋಲ್ ಬಾಂಬ್ ಇದ್ದಂಗೆ: ಅನಿಲ್ ವಿಜ್!
ದೇಶದ ಅತೀ ದೊಡ್ಡ ಬುಡಕಟ್ಟು ನೃತ್ಯೋತ್ಸವ ಎಂದೇ ಖ್ಯಾತಿ ಪಡೆದಿರುವ ಈ ಕಾರ್ಯಕ್ರಮದಲ್ಲಿ ಭಾರತದ 25 ರಾಜ್ಯಗಳ ಬುಡಕಟ್ಟು ನೃತ್ಯಗಾರರಲ್ಲದೇ ಶ್ರೀಲಂಕಾ, ಉಗಾಂಡಾ, ಬೆಲಾರಸ್, ಮಾಲ್ಡೀವ್ಸ್, ಥೈಲ್ಯಾಂಡ್ ಮತ್ತು ಬಾಂಗ್ಲಾದೇಶಗಳ ಸುಮಾರು 1200ಕ್ಕೂ ಅಧಿಕ ನೃತ್ಯಗಾರರು ಪಾಲ್ಗೊಂಡಿದ್ದಾರೆ.
'ರಾಹುಲ್ ಗಾಂಧಿ ಮೂಲತಃ ಪಾಕಿಸ್ತಾನಿ, ಅವರೊಬ್ಬ ಪಾಕ್ ಏಜೆಂಟ್'
ಇನ್ನು ವೇದಿಕೆ ಮೇಲೆ ರಾಹುಲ್ ನೃತ್ಯ ಮಾಡುವಾಗ ಛತ್ತೀಸ್'ಗಡ್ ಸಿಎಂ ಭೂಪೇಶ್ ಬಗೇಲಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ