ಭಾರತದವರಿಂದ ಅಮೆರಿಕ ಕಂಟ್ರೋಲ್, ಶೂನ್ಯ ಸಂಪಾದಿಸಿದ ವಿರಾಟ್: ಮಾ.5ರ ಟಾಪ್ 10 ಸುದ್ದಿ!

By Suvarna NewsFirst Published Mar 5, 2021, 4:57 PM IST
Highlights

ಭಾರತದವರು ಅಮೆರಿಕವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ ಮೇಲೆ ಕೊನೆಗೂ ಕೇಸ್ ಬಿದ್ದಿದೆ. ಶೂನ್ಯ ಸಂಪಾದನೆಯಲ್ಲಿ ವಿರಾಟ್ ಕೊಹ್ಲಿ,  ಧೋನಿ ದಾಖಲೆ ಸರಿಗಟ್ಟಿದ್ದಾರೆ. ಡ್ರೈವಿಂಗ್‌ ಲೈಸನ್ಸ್‌ ಸೇರಿ 18 ಆರ್‌​ಟಿಒ ಸೇವೆ​ಗಳು ಆನ್‌​ಲೈ​ನ್‌​ನ​ಲ್ಲೇ ಲಭ್ಯವಿದೆ. ವಾಟ್ಸಾಪ್‌ ವೆಬ್‌​ನಲ್ಲೂ ಇನ್ನು ವಿಡಿಯೋ, ಸಾಮಾನ್ಯ ಕರೆ, 291 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಮಮತಾ ಬ್ಯಾನರ್ಜಿ ಸೇರಿದಂತೆ ಮಾರ್ಚ್ 5ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕೊನೆಗೂ ರಮೇಶ್ ಮೇಲೆ ಕೇಸ್.. ಬೆನ್ನು ಬಿದ್ದ ಮಹಿಳಾ ಆಯೋಗ...

 ರಮೇಶ್ ಜಾರಕಿಹೊಳಿ ಕಾಮಕಾಂಡ ಪ್ರಕರಣಕ್ಕೆ ಸಂಬಂಧಿಸಿ  ಕೊನೆಗೂ ರಮೇಶ್ ಜಾರಕಿಹೊಳಿ ವಿರುದ್ಧ ಕೇಸ್ ದಾಖಲಾಗಿದೆ.

ಭಾರತದವರು ಅಮೆರಿಕವನ್ನು ನಿಯಂತ್ರಿಸುತ್ತಿದ್ದಾರೆ ಎಂದ ಬೈಡನ್...

ಅಮೆರಿಕದಲ್ಲಿರೋ ಭಾರತೀಯರು ಅಮೆರಿಕನ್ನು ಟೇಕ್ ಓವರ್ ಮಾಡುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜಾಯ್ ಬೈಡನ್ ಹೇಳಿದ್ದಾರೆ.

ಶೂನ್ಯ ಸಂಪಾದನೆಯಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್‌ ಕೊಹ್ಲಿ..!...

ಹಮದಾಬಾದ್‌: ಟೀಂ ಇಂಡಿಯಾ ನಾಯಕ ರನ್‌ ಗಳಿಕೆ ವಿಚಾರದಲ್ಲಿ ಹಲವಾರು ಅಪರೂಪದ ದಾಖಲೆಗಳನ್ನು ಬ್ರೇಕ್‌ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಿಂಗ್ ಕೊಹ್ಲಿ ಶೂನ್ಯ ಸುತ್ತುವ ವಿಚಾರದಲ್ಲಿ ಬೇಡದ ದಾಖಲೆಗೆ ಭಾಜನರಾಗಿದ್ದಾರೆ.

ಐಶ್ವರ್ಯಾ ರೈ ಥರ ಕಾಣಿಸೋ ಚೆಲುವೆಗೆ ಈಗ ಅವಕಾಶಗಳ ಹೊಳೆ!...

ವಿಶ್ವಸುಂದರಿ ಐಶ್ವರ್ಯ ರೈ ಥರವೇ ಕಾಣಿಸುವ ಪಾಕಿಸ್ತಾನದ ಚೆಲುವೆಗೆ ತನ್ನನ್ನು ಐಶ್‌ಗೆ ಹೋಲಿಸಿದ್ದರಿಂದ ಬಹಳ ಖುಷಿಯಾಗಿದೆಯಂತೆ!

ವಾಟ್ಸಾಪ್‌ ವೆಬ್‌​ನಲ್ಲೂ ಇನ್ನು ವಿಡಿಯೋ, ಸಾಮಾನ್ಯ ಕರೆ...

ಇನ್ಮುಂದೆ ವಾಟ್ಸಾಪ್‌ ವೆಬ್‌ನಲ್ಲಿ​ದ್ದಾ​ಗಲೂ ನಿಮ್ಮ ಆತ್ಮೀ​ಯ​ರಿಗೆ ವಾಟ್ಸಾಪ್‌ ಕರೆ ಅಥವಾ ವಿಡಿಯೋ ಕಾಲಿಂಗ್‌ ಮಾಡಬಹುದು

ಹೀಗೆ ಮಾಡಿದ್ರೆ ಪೆಟ್ರೋ​ಲ್‌ 75 ರು.ಗೆ ಲಭ್ಯ...

ದೇಶದಲ್ಲಿ ಪೆಟ್ರೋಲ್ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜನ ತೈಲ ದರ ಏರಿಕೆಯಿಂದ ತತ್ತರಿಸಿದ್ದು ಹೀಗ್ ಮಾಡಿದಲ್ಲಿ 75 ರು.ಗೆ ಗ್ರಾಹಕರಿಗೆ ಪೆಟ್ರೋಲ್ ಸಿಗಲಿದೆ. 

ಡ್ರೈವಿಂಗ್‌ ಲೈಸನ್ಸ್‌ ಸೇರಿ 18 ಆರ್‌​ಟಿಒ ಸೇವೆ​ಗಳು ಆನ್‌​ಲೈ​ನ್‌​ನ​ಲ್ಲೇ...

ವಾಹನ ಚಾಲನೆ ಕಲಿಕಾ ಪರ​ವಾ​ನಗಿ, ವಾಹನ ಚಾಲನೆ ಪರ​ವಾ​ನ​ಗಿಯ ನವೀ​ಕ​ರಣ, ನಕಲಿ ಡ್ರೈವಿಂಗ್‌ ಲೈಸನ್ಸ್‌, ವಾಹನ ಚಾಲನೆ ಪರ​ವಾ​ನಗಿ ಮತ್ತು ನೋಂದ​ಣಿ​ಯ​ಲ್ಲಿನ ವಿಳಾಸ ಬದಲು, ಅಂತಾ​ರಾ​ಷ್ಟ್ರೀಯ ಡ್ರೈವಿಂಗ್‌ ಅವ​ಕಾಶ ಸೇರಿ​ದಂತೆ ಒಟ್ಟು 18 ಸೇವೆ​ಗ​ಳನ್ನು ಆನ್‌ಲೈನ್ ಮೂಲಕ ಪಡೆಯಬಹುದು

ರಮೇಶ್ ಜಾರಕಿಹೊಳಿಯ 2 ಸ್ಥಾನಕ್ಕೆ ಬಿಜೆಪಿಯಲ್ಲಿ ಶುರುವಾಯ್ತು ಭಾರೀ ಪೈಪೋಟಿ...

ರಾಜ್ಯ ರಾಜಕಾರಣದಲ್ಲಿ ಸಿ.ಡಿ. ಸದ್ದು ಜೋರಾಗಿದ್ದು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ಇವರ ಖಾತೆ ಭಾರೀ ಪೈಪೋಟಿ ಶುರುವಾಗಿದೆ.

ಆದಿವಾಸಿಗಳು ಹಿಂದೂಗಳಲ್ಲ : ಜಾರ್ಖಂಡ್ ಸಿಎಂ ಹೇಳಿಕೆಗೆ ಬಾರಿ ವಿರೋಧ!...

ಆದಿವಾಸಿಗಳು ಹಿಂದೂಗಳಲ್ಲ, ಅವರೂ ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ಜಾರ್ಖಂಡ್ ಮುಖ್ಯಮಂತ್ರಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೆ ಕಾರಣವಾಗಿದೆ. ಜಾರ್ಖಂಡ್ ಸಿಎಂ ನೀಡಿದ ಕಾರಣಗಳೇ ಇದೀಗ ಉರುಳಾಗಿದೆ. ಜಾರ್ಖಂಡ್ ಸಿಎಂ ಹೇಳಿಕೆ, ಇದೀಗ ಹುಟ್ಟಿಕೊಂಡಿರುವ ವಿರೋಧದ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಪಶ್ಚಿಮ ಬಂಗಾಳ ಚುನಾವಣೆ: 291 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಮಮತಾ ಬ್ಯಾನರ್ಜಿ!...

ಪಶ್ಚಿಮ ಬಂಗಾಳ ಚುನಾವಣೆ ಕಾವು ಏರುತ್ತಿದೆ.  ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ. ಇನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಚುನಾವಣೆ ಸ್ಪರ್ಧಿಸುವುದಾಗಿ ಖಚಿತಪಡಿಸಿದ್ದಾರೆ. 

click me!