ವಿಶ್ವಾಸ ಕಳೆದುಕೊಂಡಿತಾ ಜೆಡಿಎಸ್, ಸದ್ದು ಮಾಡುತ್ತಿದೆ ದೀಪಿಕಾ ಡ್ರೆಸ್; ಮಾ.2ರ ಟಾಪ್ 10 ಸುದ್ದಿ!

By Suvarna News  |  First Published Mar 2, 2020, 5:23 PM IST

ಜೆಡಿಎಸ್ ಪಕ್ಷದಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರಮುಖ ನಾಯಕ ಮಧು ಬಂಗಾರಪ್ಪ, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಖಾಯಂ ಆಗಿದೆ. ಪತಿ ರಣವೀರ್ ಸಿಂಗ್ ರೀತಿಯಲ್ಲೇ ವಿಚಿತ್ರ ಡ್ರೆಸ್ ಮೊರೆ ಹೋದ ದೀಪಿಕಾ, ಭಾರತ ಪ್ರವಾಸಕ್ಕೆ ದಕ್ಷಿಣಾ ಆಫ್ರಿಕಾ ತಂಡ ಪ್ರಕಟ ಸೇರಿದಂತೆ ಮಾರ್ಚ್ 2ರ ಟಾಪ್ 10 ಸುದ್ದಿ ಇಲ್ಲಿವೆ. 


ಭಾರತದ ಎದುರು ಅಮೆರಿಕಾ ಫುಲ್ ಡಲ್: ಟ್ರಂಪ್

Tap to resize

Latest Videos

undefined

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಭಾರತ ಭೇಟಿಯ ಗುಂಗಿನಿಂದ ಇನ್ನೂ ಹೊರಬಂದಂತಿಲ್ಲ. ‘ಅಹಮದಾಬಾದ್‌ನ ಮೊಟೇರಾ ಕ್ರೀಡಾಂಗಣದಲ್ಲಿ ತಾವು ಭಾಷಣ ಮಾಡಿದಾಗ ಸೇರಿದಷ್ಟುಜನ ಇನ್ನು ಬೇರೆಡೆ ಎಲ್ಲೂ ಸೇರಲಿಕ್ಕಿಲ್ಲ. ನನಗೆ ಇನ್ನು ಜನಸ್ತೋಮ ನೋಡಿ ಮೊದಲಿನಷ್ಟುಉತ್ಸಾಹ ಆಗಲಿಕ್ಕಿಲ್ಲ’ ಎಂದು ಹೇಳಿದ್ದಾರೆ.

ನಿರ್ಭಯಾ ಹಂತಕರಿಗೆ ನೇಣು ನಿಶ್ಚಿತ : ಇದು ಕಾಲನ ಅಂತಿಮ ಕರೆ

ನಿರ್ಭಯಾ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರರಣದ ನಾಲ್ವರು ಆರೋಪಿಗಳಿಗೆ ಡೆತ್ ವಾರೆಂಟ್ ನಂತೆ ಗಲ್ಲು ಶಿಕ್ಷೆಯಾಗುವುದು ಖಚಿತವಾಗಿದೆ. ಮೂವರು ದೋಷಿಗಳಾದ ಪವನ್ ಗುಲ್ತಾ, ಅಕ್ಷಯ್ ಸಿಂಗ್, ವಿನಯ್ ಶರ್ಮಾ ಗಲ್ಲು ಶಿಕ್ಷೆ ಪ್ರಶ್ನಿಸಿ ಹಾಗೂ ತಡೆ ಕೋರಿ  ಕೋರ್ಟ್ಗೆ  ಸರ್ಜಿ ವಜಾಗೊಂಡಿದೆ. 


ಬೆಂಕಿ ಕೆಂಡವಾದ ಮಧು ಬಂಗಾರಪ್ಪ: HDK, HDD ವಿರುದ್ಧ ವಾಗ್ದಾಳಿ


ಈಗಾಗಲೇ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿರುವ ಮಾಜಿ ಶಾಸಕ, ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ, ಪಕ್ಷದಲ್ಲಿ ವ್ಯವಸ್ಥೆಯೇ ಸರಿಯಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತ ಎದುರಿನ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದ್ದು, ಫಾಫ್ ಡುಪ್ಲೆಸಿಸ್ ಹಾಗೂ ರಾಸ್ಸಿ ವ್ಯಾನ್ ಡರ್ ಡ್ಯುಸೇನ್ ತಂಡ ಕೂಡಿಕೊಂಡಿದ್ದಾರೆ.

ಇದೇನಪ್ಪಾ ದೀಪಿಕಾ ಪಡುಕೋಣೆಗೆ ಇಂಥ ಡ್ರೆಸ್‌ ಕೊಡ್ಸೋದಾ ಪತಿ ರಣವೀರ್‌ ಸಿಂಗ್?

ಡಿಫರೆಂಟ್‌ ಫ್ಯಾಷನ್‌ ಲುಕ್ಸ್‌ ಫಾಲೋ ಮಾಡೋ ರಣವೀರ್‌ ಸಿಂಗ್‌ ಮದುವೆ ಆದ್ಮೇಲೆ ದೀಪಿಕಾ ಪಡುಕೋಣೆ ಡ್ರೆಸ್ಸಿಂಗ್ ಸೆನ್ಸ್‌ ಬದಲಾಯಿಸಿತಾ? ಆ ರಣವೀರ್ ಡ್ರೆಸ್ ನೋಡೋಕೆ ಹಿಂಸೆ ಆಗುತ್ತಿತ್ತು. ಪತಿಯ ಫ್ಯಾಷನ್ ಬದಲಾಯಿಸುತ್ತಾರೆ ನೋಡಿದ್ರೆ, ಡಿಪ್ಪಿಯೇ ಪತಿ ರೀತಿ ಡ್ರೆಸ್ ಮಾಡೋಕೆ ಶುರುಮಾಡಿದ್ದಾರೆ.

ನಾನು ಹೆಸರಿಗೆ ಮಾತ್ರ ಡಾನ್! ಅಂಡರ್ವರ್ಲ್ಡ್‌ನ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ರವಿ ಪೂಜಾರಿ

ಒಂದು ಕಾಲದಲ್ಲಿ ಬೆಂಗಳೂರನ್ನು ಬಹಳವಾಗಿ ಕಾಡಿದ್ದ ಭೂಗತ ಪಾತಕಿ ರವಿ ಪೂಜಾರಿ ಈಗ ಸಿಸಿಬಿ ವಶದಲ್ಲಿದ್ದಾನೆ. ಪೊಲೀಸರ ತನಿಖೆಗೆ ಒಂದೊಂದಾಗಿ ತನ್ನ ಕರ್ಮಕಾಂಡಗಳನ್ನು ರವಿ ಪೂಜಾರಿ ಬಾಯ್ಬಿಡ್ತಿದ್ದಾನೆ. 

ಪೆಟ್ರೋಲ್, ಡೀಸೆಲ್‌ಗೂ ಕೊರೋನಾ ಎಫೆಕ್ಟ್ : ನಿರಂತರ ಇಳಿಯುತ್ತಿದೆ ದರ, ಈಗೆಷ್ಟು..?

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾದ ಬೆನ್ನಲ್ಲೇ ಭಾರತದಲ್ಲಿ  ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗಿದೆ. ಕೊರೋನಾ ಎಫೆಕ್ಟ್ ಪೆಟ್ರೋಲ್ , ಡೀಸೆಲ್ ಮೇಲೂ ಬಿದ್ದಿದೆ. 

BS6 ಜಾವಾ ಬೈಕ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

ಏಪ್ರಿಲ್ 1, 2020 ರಿಂದ ಮಾರಾಟವಾಗುವ ಎಲ್ಲಾ ನೂತನ ವಾಹಗಳು  BS6 ಎಮಿಶನ್ ಎಂಜಿನ್ ಹೊಂದಿರಬೇಕು. ಈಗಾಗಲೇ ಹಲವು ಆಟೋಮೇಕರ್ BS6 ಎಂಜಿನ್ ಅಪ್‌ಗ್ರೇಡ್ ಮಾಡಿ ವಾಹನ ಬಿಡುಗಡೆ ಮಾಡಿದೆ. ಇದೀಗ ಜಾವಾ ಮೋಟರ್‌ಸೈಕಲ್   BS6 ಎಂಜಿನ್ ಅಪ್‌ಗ್ರೇಡ್ ಮಾಡಿದೆ.

SSLC, PUC, ಡಿಗ್ರಿ ಪಾಸಾದವರಿಗೂ ಕೇಂದ್ರ ಸರ್ಕಾರಿ ಹುದ್ದೆ

ಸ್ಟಾಫ್ ಸೆಲೆಕ್ಷನ್ ಕಮಿಷನ್(SSC)2020ನೇ ಸಾಲಿನ 1355 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. 8ನೇ ಹಂತದ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಇದೇ ಮಾರ್ಚ್ 20 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಐಹೊಳೆ ರಕ್ಷಣೆಗೆ ಮೋದಿಗೆ ಪತ್ರ ಬರೆದ ಯುವಕ: ಪ್ರಧಾನಿ ಕಚೇರಿಯಿಂದ ಬಂತು ಉತ್ತರ!

ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಐಹೊಳೆ ಗ್ರಾಮದ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಜಿಲ್ಲೆಯ ಹುನಗುಂದ ತಾಲೂಕಿನ ಸೂಳಿಬಾವಿ ಗ್ರಾಮದ ಪ್ರಕಾಶ ಕಡೂರಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸ್ಪಂದನೆ ದೊರಕಿದೆ. 

click me!