
ವಾಷಿಂಗ್‌ಟನ್ (ಮಾ. 02): ತೂಕ ಇಳಿಸಲು ಎಲ್ಲರೂ ಹಸಿ ತರಕಾರಿ ತಿನ್ನುವುದು, ವ್ಯಾಯಾಮ ಹೀಗೆ ನಾನಾ ಕಸರತ್ತು ಮಾಡುತ್ತಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇದಾವುದೂ ಆಗಿ ಬರುವುದಿಲ್ಲ.
ತರಕಾರಿಗಳನ್ನು ಅವರು ಕಣ್ಣೆತ್ತಿಯೂ ನೋಡುವುದಿಲ್ಲ. ಹೀಗಾಗಿ ಆಹಾರದ ಒಳಗಡೆ ತರಕಾರಿಗಳನ್ನು ಅಡಗಿಸಿ ಇಡುತ್ತಿದ್ದೆ. ಆದರೆ, ತನ್ನ ಪ್ರಯತ್ನ ಕೊನೆಗೂ ಈಡೇರಲೇ ಇಲ್ಲ ಎಂಬ ಸಂಗತಿಯನ್ನು ಟ್ರಂಪ್ ಅವರ ಮಾಜಿ ವೈದ್ಯ ರೋನಿ ಜಾಕ್ಸನ್ ಬಹಿರಂಗ ಪಡಿಸಿದ್ದಾರೆ.
ಭಾರತದ ಎದುರು ಅಮೆರಿಕಾ ಫುಲ್ ಡಲ್: ಟ್ರಂಪ್
ಟ್ರಂಪ್ ತೂಕವನ್ನು ಕನಷ್ಠ 6 ಕೆ.ಜಿ.ಯಷ್ಟಾದರೂ ಇಳಿಸಬೇಕು ಎಂಬುದು ತನ್ನ ಗುರಿಯಾಗಿತ್ತು. ಆದರೆ, ಟ್ರಂಪ್‌ಗೆ ಡಯಟ್‌ಕಲಿಸಲು ಸಾಧ್ಯವಾಗಲೇ ಇಲ್ಲ. ತೂಕ ಇಳಿಯುವ ಬದಲು 2 ಕೆ.ಜಿ. ಹೆಚ್ಚಾಯಿತು. ಹೀಗಾಗಿ ತಾನು ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ.
#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್:
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ