ಮಾರಣಹೋಮಕ್ಕೆ ಕಾರಣ ನಾನೇ: ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಸಿಸ್!

Published : Apr 23, 2019, 05:51 PM IST
ಮಾರಣಹೋಮಕ್ಕೆ ಕಾರಣ ನಾನೇ: ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಸಿಸ್!

ಸಾರಾಂಶ

ಶ್ರೀಲಂಕಾ ದಾಳಿಯ ಹೊಣೆ ಹೊತ್ತ ಐಸಿಸ್!| ಕೊಲಂಬೋ ಚರ್ಚ್ ಗಳಲ್ಲಿ ನಡೆದ ದಾಳಿ ನಡೆಸಿದ್ದು ತಾನೇ ಎಂದ ಐಸಿಸ್| ಅಮಾಕ್ ನ್ಯೂಸ್ ಏಜೆನ್ಸಿಯಲ್ಲಿ ವರದಿ ಪ್ರಸಾರ|

ಕೊಲಂಬೋ(ಏ.23): ಶ್ರೀಲಂಕಾದಲ್ಲಿ 320ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಭೀಕರ ಬಾಂಬ್ ಸ್ಫೋಟ ದಾಳಿಯ ಹೊಣೆಯನ್ನು ಕುಖ್ಯಾತ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ.

ಕಳೆದ ಭಾನುವಾರ ಈಸ್ಟರ್ ಸಂಡೆ ನಿಮಿತ್ತ ಕೊಲಂಬೋ ಚರ್ಚ್ ಗಳಲ್ಲಿ ನಡೆದ ದಾಳಿ ನಡೆಸಿದ್ದು ತಾನೇ ಎಂದು ಐಸಿಸ್ ಹೇಳಿದೆ. ಐಸಿಸ್ ಸಂಘಟನೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಸುದ್ದಿ ಪ್ರಸಾರ ಮಾಡುವ ಅಮಾಕ್ ನ್ಯೂಸ್ ಏಜೆನ್ಸಿ, ಈ ಕುರಿತು ವರದಿ ಮಾಡಿದೆ.

ಆದರೆ ದಾಳಿಗೆ ಸಂಬಂಧಿಸಿದಂತೆ ಐಸಿಸ್ ಯಾವುದೇ ವಿವರಣೆಯಾಗಲಿ ಅಥವಾ ಸಾಕ್ಷ್ಯಾಧಾರವಾಗಲಿ ಇದುವರೆಗೂ ಐಸಿಸ್ ಸಂಘಟನೆ ನೀಡಿಲ್ಲ. ಅಮಾಕ್ ವರದಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

15 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ: ಭಾವುಕರಾದ ಗೆಳೆಯರು
ಕೆಜಿಗೆ 3 ಲಕ್ಷ ಗಡಿಯತ್ತ ಬೆಳ್ಳಿ, ಮೂರೇ ದಿನದಲ್ಲಿ 34 ಸಾವಿರ ಏರಿಕೆ; ನಿಜವಾದ ಬೆಳ್ಳಿ ಗುರುತಿಸುವ ನಾಲ್ಕು ಮಾರ್ಗಗಳಿವು!