ಚೌಕಿದಾರ್ ಚೋರ್ ಹೈ: ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೊಟೀಸ್!

By Web DeskFirst Published Apr 23, 2019, 5:30 PM IST
Highlights

ರಫೆಲ್ ಕುರಿತ ಸುಪ್ರೀಂ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದ ರಾಹುಲ್ ಗಾಂಧಿ| ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೊಟೀಸ್| ಏಪ್ರಿಲ್ 30ಕ್ಕೆ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್| ರಾಹುಲ್ ಗಾಂಧಿ ಖುದ್ದು ಹಾಜರಾತಿಗೆ ಮುಕುಲ್ ರೊಹ್ಟಗಿ ಆಗ್ರಹ| 

ನವದೆಹಲಿ(ಏ.23): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ವತಃ ಸುಪ್ರೀಂ ಕೋರ್ಟ್ ‘ಚೌಕಿದಾರ್ ಚೋರ್ ಹೈ’ ಎಂದು ತೀರ್ಪು ನೀಡಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಹೊಸ ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ಇಂದು ನೊಟೀಸ್ ಜಾರಿ ಮಾಡಿದ್ದು, ಏಪ್ರಿಲ್ 30ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ರಾಹುಲ್ ಗಾಂಧಿಗೆ ಇಂದು ನೊಟೀಸ್ ಜಾರಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಏಪ್ರಿಲ್‌ 22ರೊಳಗೆ ವಿವರಣೆ ನೀಡುವಂತೆ ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು. ನಿನ್ನೆ(ಏ.23) ರಾಹುಲ್‌ ಅಫಿಡವಿಟ್‌ ಸಲ್ಲಿಸಿ  ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ವ್ಯಾಖ್ಯಾನ ಮಾಡಿರುವುದು ನಿಜವೆಂದು ತಪ್ಪೊಪ್ಪಿಕೊಂಡಿದ್ದರು.

ಆದರೆ ಇಂದು ನಡೆದ ವಿಚಾರಣೆ ವೇಳೆ ಮೀನಾಕ್ಷಿ ಲೇಖಿ ಅವರ ಪರ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಮುಕುಲ್ ರೊಹ್ಟಗಿ, ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ಟು ಕೇವಲ ಬಾಯಿ ಮಾತಿಗೆ ತಪ್ಪಾಗಿ ಒಪ್ಪಿಕೊಂಡಿದ್ದಾಗಿದ್ದು ಅವರು ಕ್ಷಮೆ ಕೇಳಿಲ್ಲ ಎಂದು ಆಕ್ಷೇಪವೆತ್ತಿದರು. ಅಲ್ಲದೇ ಖುದ್ದು ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ನೀಡುವಂತೆ ರೊಹ್ಟಗಿ ಮನವಿ ಮಾಡಿದರು.

click me!