RCB ಸೇರಿಕೊಂಡ ವಿರಾಟ್, ಗುಡ್‌ ನ್ಯೂಸ್ ಕೊಟ್ಟ ಸುದೀಪ್; ಸೆ.12ರ ಟಾಪ್ 10 ಸುದ್ದಿ!

By Suvarna NewsFirst Published Sep 12, 2021, 4:37 PM IST
Highlights

ಆಫ್ಘಾನಿಸ್ತಾನ ಸರ್ಕಾರದ ಕುರಿತು ಭಾರತ ಕಳವಳ ವ್ಯಕ್ತಪಡಿಸಿದೆ.  ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ಆರ್‌ಸಿಬಿ ತಂಡ ಸೇರಿಕೊಂಡಿದ್ದಾರೆ. ಕಿಚ್ಚ ಕ್ರಿಯೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ರೆಡಿಯಾಗುತ್ತಿದೆ. ರಾಜಕೀಯ ಸೇರುತ್ತಾರಾ ಅನ್ನೋ ಮಾತಿಗೆ ಕಂಗನಾ ಉತ್ತರಿಸಿದ್ದಾರೆ. ಸಿದ್ದು ಅಭಿಪ್ರಾಯಕ್ಕೆ ಪ್ರತಾಪ್ ಸಿಂಹ ಶ್ಲಾಘನೆ, ಸರ್ಪ್ರೈಸ್ ಕೊಟ್ಟ ಮೋದಿ ಸೇರಿದಂತೆ ಸೆಪ್ಟೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಆಫ್ಘನ್‌ ಸರ್ಕಾರದ ಸ್ವರೂ​ಪ​ದ ಬಗ್ಗೆ ಭಾರತದ ಕಳವಳ!

ಅಷ್ಘಾನಿಸ್ತಾನದಲ್ಲಿ ನೂತನವಾಗಿ ರಚನೆಯಾದ ಸರ್ಕಾರದ ಸಮಗ್ರ ಒಳಗೊಳ್ಳುವಿಕೆ ಬಗ್ಗೆ ಭಾರತಕ್ಕೆ ಕಳವಳವಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ಇದು ನೆರೆಯ ದೇಶದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಭಾರತ ನೀಡಿದ ಮೊದಲ ಪ್ರತಿಕ್ರಿಯೆಯಾಗಿದ್ದು, ಇದಕ್ಕೆ ಆಸ್ಪ್ರೇಲಿಯಾ ಕೂಡಾ ಧ್ವನಿಗೂಡಿಸಿದೆ.

ಸಪ್ರೈಸ್ ಕೊಟ್ಟ ಪಿಎಂ ಮೋದಿ: ಕುಣಿದು ಕುಪ್ಪಳಿಸಿದ ನವದಂಪತಿ!

ಪಿಎಂ ಮೋದಿ ಜನಸಾಮಾನ್ಯರ ಜೊತೆಗೆ ಬೆರೆತುಕೊಳ್ಳುವ ವಿಚಾರಕ್ಕೆ ಭಾರೀ ಮನ್ನಣೆ ಪಡೆದುಕೊಂಡಿದ್ದಾರೆ. ಊಹೆಯನ್ನೂ ಇಟ್ಟುಕೊಳ್ಳದವರಿಗೆ ಸಪ್ರೈಜ್ ಕೊಟ್ಟು ಅಚ್ಚರಿ ಮೂಡಿಸುತ್ತಾರೆ. ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೂ ಇದೇ ಬಗೆಯ ತಮ್ಮ ಸರಳತೆಯಿಂದ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಗುಜರಾತ್‌ನ ನವ ದಂಪತಿಗೆ ಪಿಎಂ ಮೋದಿ ಸಪ್ರೈಜ್‌ ನೀಡಿ ಮದುವೆ ದಿನದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

ದುಬೈ ತಲುಪಿದ RCB ನಾಯಕ ವಿರಾಟ್ ಕೊಹ್ಲಿಗೆ ಅದ್ಧೂರಿ ಸ್ವಾಗತ; ಅಖಾಡ ರೆಡಿ!

ಐಪಿಎಲ್ ಟೂರ್ನಿ 2021ರ ಎರಡನೇ ಭಾಗದ ಪಂದ್ಯಕ್ಕಾಗಿ 8 ಫ್ರಾಂಚೈಸಿ ಇದೀಗ ದುಬೈನಲ್ಲಿದೆ. ರಾಷ್ಟ್ರೀಯ ಕರ್ತವ್ಯದಲ್ಲಿದ್ದ ಆಟಗಾರರು ಇದೀಗ ಒಬ್ಬರ ಹಿಂದೊಬ್ಬರು ತಂಡ ಸೇರಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ರದ್ದಾದ ಕಾರಣ ನಾಯಕ ವಿರಾಟ್ ಕೊಹ್ಲಿ ಇದೀಗ ದುಬೈ ತಲುಪಿದ್ದಾರೆ. 

ಅನೂಪ್ ಭಂಡಾರಿ ಜೊತೆ ಕೈ ಜೋಡಿಸಿ ಮತ್ತೊಂದು ಗುಡ್‌ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್!

ಅಶ್ವತ್ಥಾಮ ಚಿತ್ರದ ಬಗ್ಗೆ ಅಪ್ಡೇಟ್ ಹಂಚಿಕೊಂಡ ಕಿಚ್ಚ ಸುದೀಪ್. ಕಿಚ್ಚ ಕ್ರಿಯೇಷನ್‌ನಲ್ಲಿ ಮತ್ತೊಂದು ಹೊಸ ಸಿನಿಮಾ ರೆಡಿ.......

ಕಂಗನಾ ರಣಾವತ್ ರಾಜಕೀಯಕ್ಕೆ ಸೇರುತ್ತಾರಾ? ನಟಿ ಹೇಳಿದ್ದಿಷ್ಟು!

ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಸ್ತುತ ತಮ್ಮ ಮುಂಬರುವ ಸಿನಿಮಾ ತಲೈವಿಯ ಪ್ರಚಾರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯಲ್ಲಿ ತಲೈವಿ ಚಿತ್ರದ ಪ್ರಚಾರದ ಸಮಯದಲ್ಲಿ  ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಮಾತನಾಡಿದರು. ಈ ಬಗ್ಗೆ ನಟಿ ಹೇಳಿದ್ದೇನು? ವಿವರ ಇಲ್ಲಿದೆ. 

ಸಿದ್ದರಾಮಯ್ಯ ಅಭಿಪ್ರಾಯಕ್ಕೆ ಪ್ರತಾಪ್ ಸಿಂಹ ಶ್ಲಾಘನೆ

ಜಿಲ್ಲೆಯಲ್ಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅಗ್ರಹಾರದ 101 ಗಣಪತಿ ದೇವಸ್ಥಾನ ತೆರವಿಗೆ ಮುಂದಾಗಿರುವ ಮೈಸೂರು ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ವಾಟ್ಸಾಪ್‌ ಆನ್‌ಲೈನ್ ಸ್ಟೇಟಸ್ ಮರೆಮಾಚಬಹುದು!

ಈವರೆಗೆ ನಿಮ್ಮ ವಾಟ್ಸಾಪ್ ಆನ್‌ಲೈನ್ ಸ್ಟೇಟಸ್ ಅನ್ನು ಆಯ್ದ ಕಾಂಟಾಕ್ಟ್‌ಗಳಿಗೆ ಮರೆ ಮಾಚಲು ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಮರೆ ಮಾಚಿದರೆ ಎಲ್ಲರಿಗೂ ಮರೆಮಾಚಬೇಕಿತ್ತು. ಇದೀಗ ಕಂಪನಿಯು ಇದರಲ್ಲಿ ಆಯ್ಕೆಯನ್ನು ನೀಡಲು ಮುಂದಾಗಿದ್ದು, ನಿಮಗೆ ಬೇಡವಾದ ಕಾಂಟಾಕ್ಟ್‌ಗಳಿಗೆ ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ಮಾತ್ರವೇ ಮರೆ ಮಾಚಲು ಸಾಧ್ಯವಾಗಲಿದೆ ಶೀಘ್ರವೇ.

3 ಲಕ್ಷ ಮಾರಾಟ ಕಂಡ ಮಾರುತಿಯ ಸೆಡಾನ್ ಸಿಯಾಜ್!

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಸೆಡಾನ್ ಸಿಯಾಜ್ ದಾಖಲೆಯನ್ನು ಬರೆದಿದೆ. 2014ರಲ್ಲಿ ಲಾಂಚ್ ಆದ ಈ ಕಾರ್ ಇದೀಗ 3 ಲಕ್ಷ ಮಾರಾಟ ಕಂಡಿದೆ. ಭಾರತದಲ್ಲೀಗ ಸೆಡಾನ್ ಕಾರುಗಳ ಮಾರಾಟ ಇಳಿಮುಖವಾಗುತ್ತಿರುವ ಹೊತ್ತಿನಲ್ಲಿ ಸಿಯಾಜ್‌ನ ಈ ದಾಖಲೆಯ ಮಾರಾಟವು ವಿಶೇಷವಾಗಿದೆ.

click me!