* ಲಾಕ್ ಅಪ್ ಒಳಗಿದ್ದ ವ್ಯಕ್ತಿಯ ವರ್ತನೆ ಕಂಡು ಪೊಲೀಸರೇ ಕಂಗಾಲು
* ಬಟ್ಟೆ ಬಿಚ್ಚಿದ ವ್ಯಕ್ತಿ ಮಹಿಳಾ ಪೊಲೀಸರ ಮೇಲೆ ಅಶ್ಲೀಲ ಕಮೆಂಟ್ ಮಾಡಿದ
* ಗಲಭೆ ಮತ್ತು ಪೊಲೀಸರ ಮೇಲೆ ಹಲ್ಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು
ಸೂರತ್(ಸೆ. 12) ಇದೊಂದು ವಿಚಿತ್ರ ಪ್ರಕರಣ. ಲಾಕಪ್ ನಲ್ಲಿ ಇದ್ದ ವ್ಯಕ್ತಿ ತನ್ನ ಎಲ್ಲ ಬಟ್ಟೆ ಬಿಚ್ಚಿಹಾಕಿದ್ದಾನೆ. ಗುಜರಾತ್ ನ ಸಲಾಬತಪುರ ಪೊಲೀಸ್ ಠಾಣೆಯ ಲಾಕ್-ಅಪ್ ನಿಂದ ಘಟನೆ ವರದಿಯಾಗಿದೆ.
ವ್ಯಕ್ತಿ ಇಷ್ಟಕ್ಕೆ ಸುಮ್ಮನಾಗಿಲ್ಲ. ಅಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಅಶ್ಲೀಲ ಮಾತುಗಳನ್ನು ರವಾನಿಸಿದ್ದಾನೆ. ವ್ಯಕ್ತಿಯನ್ನು ಸುರತ್ ಜಿಲ್ಲೆಯ ತಲೋದಾರ ಗ್ರಾಮದ ನಿವಾಸಿ ಸುರೇಶ್ ನಂದವಾಣಿ (55) ಎಂದು ಗುರುತಿಸಲಾಗಿದೆ.
ಪೋನ್ ಮುಂದೆ ಬಟ್ಟೆ ಬಿಚ್ಚಿ ಬೆತ್ತಲೆ ಲೈವ್ದ ಬಾ.. ವಿದೇಶಿ ಗಂಡನ ಹುಚ್ಚಾಟ
ಮಧ್ಯದಾರಿಯಲ್ಲಿ ಗಲಭೆ ಸೃಷ್ಟಿ ಮಾಡಿದ್ದು ಅಲ್ಲದೇ ಪೊಪೀಸ್ ಅಧಿಕಾರಿಗಳ ಮೇಲೆ ದಾಳಿಗೆ ಯತ್ನ ನಡೆಸಿದ್ದ ಆರೋಪಿದ ಮೇಲೆ ಈತನನ್ನು ಬಂಧಿಸಿ ಕರೆದುಕೊಂಡು ಬರಲಾಗಿತ್ತು, ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದ್ದು ಲಾಕ್ ಅಪ್ ನಲ್ಲಿ ಇಡಲಾಗಿತ್ತು.
ಲಾಕ್ ಅಪ್ ನಲ್ಲಿ ಇದ್ದಾಗ ವ್ಯಕ್ತಿ ಕೂಗಾಡುತ್ತಿದ್ದ. ಈ ವೇಳೆ ಪೊಲೀಸ್ ಅಧಿಕಾರಿ ಸುಮ್ಮನಿರು ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡವ ಬಟ್ಟೆ ಬಿಚ್ಚಿ ಹಾಕಿದ್ದಾನೆ. ಬಟ್ಟೆ ಹಾಕಿಕೊಳ್ಳಲು ಅಧಿಕಾರಿಗಳು ತಿಳಿಸಿದರೂ ಆತ ತಲೆ ಕೆಡಿಸಿಕೊಂಡಿಲ್ಲ. ಲಾಕ್ ಅಪ್ ಓಪನ್ ಮಾಡಿದ ಪೊಲೀಸರು ಆತನನ್ನು ಹಿಡಿದು ಬಟ್ಟೆ ಹಾಕಿಸಿದ್ದಾರೆ.