
ನವದೆಹಲಿ (ಡಿ.17): ಭಾರತೀಯ ರೈಲ್ವೇ (Indian Railways) ತನ್ನ ಭೂಮಿಯ ಮೇಲಿನ ಅತಿಕ್ರಮಗಳ ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು ಹಾಗೂ ಭೂಅತಿಕ್ರಮ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ (Supreme Court ) ಹೇಳಿದೆ. ಅದರೊಂದಿಗೆ ಗುಜರಾತ್ ನಲ್ಲಿ (Gujarat) 5 ಸಾವಿರ ಗುಡಿಸಲುಗಳು ರೈಲ್ವೇಸ್ ಗೆ ತನ್ನ ಜಾಗವನ್ನು ಮರಳಿ ನೀಡಬೇಕು ಎಂದು ಸೂಚನೆ ನೀಡಿದೆ. "ನಮ್ಮ ದೇಶ ಮುಂದಿನ ವರ್ಷ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಆದರೆ, ದುಃಖಕರ ಸಂಗತಿ ಏನೆಂದರೆ, ಇಂದು ದೇಶದ ಎಲ್ಲಾ ಪ್ರಮುಖ ನಗರಗಳು ಕೊಳೆಗೇರಿಗಳಾಗಿ ಮಾರ್ಪಟ್ಟಿದೆ ಹಾಗೂ 75 ವರ್ಷಗಳಿಂದಲೂ ಇದು ನಡೆಯುತ್ತಿದೆ ಎನ್ನುವುದು ಬೇಸರದ ಸಂಗತಿ' ಎಂದು ಅಭಿಪ್ರಾಯಪಟ್ಟಿದೆ. ಆ ಮೂಲಕ ಸ್ಲಮ್ ನಿವಾಸಿಗಳು (Slum Dwellers) ಗುಡಿಸಲುಗಳನ್ನು ಕೆಡವದೇ ಇರುವಂತೆ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ದೇಶದ ಯಾವುದೇ ನಗರವನ್ನು ಬೇಕಾದರೆ ನೋಡಿ, ಬಹುಶಃ ಚಂಡೀಗಢವೊಂದು (Chandigarh) ಹೊರತಾಗಿರಬಹುದು. ಅಲ್ಲಿಯೂ ಕೆಲವೊಂದು ಸಮಸ್ಯೆಗಳಿವೆ. ಭೂ ಅತಿಕ್ರಮ ಇಂದು ಎಲ್ಲೆಡೆ ನಡೆಯುತ್ತಿದೆ. ವಾಸ್ತವಕ್ಕೆ ಬಂದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸೋಣ' ಎಂದು ನ್ಯಾಯಮೂರ್ತಿಗಳಾದ ಎಎಂ ಖಾನ್ ವಿಲ್ಕರ್ (AM Khanwilkar), ದಿನೇಶ್ ಮಹೇಶ್ವರಿ (Dinesh Maheshwari ) ಹಾಗೂ ಸಿಟಿ ರವಿಕುಮಾರ್ (CT Ravikumar) ಇದ್ದ ತ್ರಿಸದಸ್ಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಕ್ರಮವಾಗಿ ರೈಲ್ವೇಸ್ ಭೂಮಿಯನ್ನು ಒತ್ತುವರಿ ಮಾಡಿದವರ ವಿರುದ್ಧ ಶೀಘ್ರವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದ ಸುಪ್ರೀಂ ಕೋರ್ಟ್, "ರೈಲ್ವೇಸ್ ತನ್ನ ಜವಾಬ್ದಾರಿಯಿಂದ ಪಾರಾಗಲು ಸಾಧ್ಯವಿಲ್ಲ. ಭೂ ಅತಿಕ್ರಮ ತಡೆಯುವುದು ಕೇವಲ ರಾಜ್ಯ ಸರ್ಕಾರದ ಕೆಲಸವಲ್ಲ. ನಿಗಮಗಳೂ ಅತಿಕ್ರಮಣವನ್ನು ತೊಡೆದುಹಾಕುವ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಕೋರ್ಟ್ ಹೇಳಿದ್ದು, ರೈಲ್ವೇಸ್ ತೆಗೆದುಕೊಂಡ ಕ್ರಮಗಳ ಬಗ್ಗೆ ಪರಿಶೀಲನೆ ಮಾಡುವುದಾಗಿ ತಿಳಿಸಿದೆ. ಅದರೊಂದಿಗೆ ರೈಲ್ವೇಸ್ ಭೂಮಿಯನ್ನು ಒತ್ತುವರಿ ಮಾಡಲು ಬಿಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
Char Dham Road Project: 900 ಕಿಮೀ ಡಬಲ್‌ಲೇನ್ ರಸ್ತೆಗೆ ಸುಪ್ರೀಂ ಅಸ್ತು!
ಇಂಥ ವಿಚಾರಗಳಲ್ಲಿ ರಾಜ್ಯ ಸರ್ಕಾರಗಳು (State Government) ಹಾಗೂ ಸ್ಥಳೀಯ ನಿಗಮಗಳೊಂದಿಗೆ ನಿಮ್ಮ ಹೊಣೆಗಾರಿಕೆಯೂ ಇರುತ್ತದೆ. ತನ್ನ ಆಸ್ತಿಯನ್ನು ರಕ್ಷಣೆ ಮಾಡಲು ವಿಫಲವಾಗುವ ಮಾಲೀಕ ಕೂಡ ರಾಜ್ಯ ಸರ್ಕಾರ ಹಾಗೂ ನಿಗಮದಷ್ಟೇ ಜವಾಬ್ದಾರನಾಗಿರುತ್ತಾನೆ ಎಂದುನ್ಯಾಯಮೂರ್ತಿ ಖಾನ್ ವಿಲ್ಕರ್, ರೈಲ್ವೇಸ್ ಪರ ವಕೀಲ ಅಡೀಷನಲ್ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರಿಗೆ ಹೇಳಿದರು.
Delhi Pollution: ಸರ್ಕಾರಕ್ಕೆ 24 ಗಂಟೆ ಟೈಂ ಕೊಟ್ಟ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ ನ ಈ ಆದೇಶದಿಂದಾಗಿ ಗುಜರಾತ್ ನ ಸೂರತ್ ನ (Surat) ರೈಲ್ವೇ ಟ್ರ್ಯಾಕ್ ಬಳಿ ಇರುವ ಬೃಹತ್ ಗುಡಿಸಲುಗಳನ್ನು ತೆರಲು ಮಾಡಲು ಅನುಮತಿ ಸಿಕ್ಕಂತಾಗಿದೆ. ಈ ತೆರವು ಕಾರ್ಯಾಚರಣೆಯಿಂದ 10 ಸಾವಿರ ಜನರು ನಿರಾಶ್ರಿತರಾಗಲಿದ್ದಾರೆ. ನಿರಾಶ್ರಿತರಾದ ಪ್ರತಿ ಗುಡಿಸಲಿಗೆ ಮುಂದಿನ 6 ತಿಂಗಳವರೆಗೆ ತಿಂಗಳಿಗೆ 2 ಸಾವಿರ ರೂಪಾಯಿ ಪರಿಹಾರವನ್ನು ಗುಜರಾತ್ ಸರ್ಕಾರ ಹಾಗೂ ರೈಲ್ವೇಸ್ ನೀಡಬೇಕು. ಅವರು ಪುನರ್ ವಸತಿ ಪಡೆಯುವವರೆಗೂ ಹಣ ಪಾವತಿಯಾಗಬೇಕು ಎಂದು ಸೂಚನೆ ನೀಡಿದೆ. "ಸ್ಲಂ ನಿವಾಸಿಗಳು ಅರ್ನಜಿಗಳನ್ನು ಸಲ್ಲಿಸಿದಲ್ಲಿ ಹಾಗೂ ಅರ್ಹತೆ ಇದ್ದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana) ಅಡಿವಸತಿ ಪಡೆಯಲು ಅಹರ್ರಾಗುತ್ತಾರೆ" ಎಂದು ನ್ಯಾಯಾಲಯ ಹೇಳಿದೆ. ಇದಕ್ಕೂ ಮುನ್ನ ಗುಡಿಸಲುಗಳನ್ನು ತೆರವು ಮಾಡಲು ತಡೆ ನೀಡಿದ್ದ ನ್ಯಾಯಾಲಯ ಈ ಕುರಿತಾಗಿ ಕೇಂದ್ರ ಸರ್ಕಾರ, ವೆಸ್ಟರ್ನ್ ರೈಲ್ವೇ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.