ಪಟ್ಟದಕಲ್ಲು, ಗೋಲ್‌ಗುಂಬಜ್‌ಗೆ ಕಡೆ ಹೊರಟಿದ್ದೀರಾ? ನಿಮಗೊಂದು ಗುಡ್‌ ನ್ಯೂಸ್!

Published : Jul 30, 2019, 04:04 PM ISTUpdated : Jul 30, 2019, 04:10 PM IST
ಪಟ್ಟದಕಲ್ಲು, ಗೋಲ್‌ಗುಂಬಜ್‌ಗೆ ಕಡೆ ಹೊರಟಿದ್ದೀರಾ? ನಿಮಗೊಂದು ಗುಡ್‌ ನ್ಯೂಸ್!

ಸಾರಾಂಶ

ರಾತ್ರಿ 9ರವರೆಗೂ ಪಟ್ಟದಕಲ್ಲು, ಗೋಲ್‌ಗುಂಬಜ್‌ಗೆ ಪ್ರವೇಶ| 10 ಪಾರಂಪರಿಕ ತಾಣಗಳ ವೀಕ್ಷಣೆ ಅವಧಿ ವಿಸ್ತರಣೆ| ಸಂಸ್ಕೃತಿ ಸಚಿವಾಲಯ ನಿರ್ಧಾರ

ನವದೆಹಲಿ[ಜು.30]: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವ ಪಟ್ಟದಕಲ್ಲು, ವಿಜಯಪುರದ ಗೋಲ್‌ಗುಂಬಜ್‌ ಸೇರಿದಂತೆ ದೇಶದ 10 ಪಾರಂಪರಿಕ ಸ್ಥಳಗಳ ಪ್ರವೇಶ ಅವಧಿಯನ್ನು ಸೂರ್ಯೋದಯದಿಂದ ರಾತ್ರಿ 9ರವರೆಗೂ ವಿಸ್ತರಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ನಿರ್ಧರಿಸಿದೆ.

ಸದ್ಯ ಈ ಪಾರಂಪರಿಕ ತಾಣಗಳಿಗೆ ಸಂಜೆ 6ರ ನಂತರ ಪ್ರವೇಶ ಇಲ್ಲ. ಕೆಲವೊಂದು ಸ್ಥಳಗಳನ್ನು ರಾತ್ರಿ ಹೊತ್ತೂ ವೀಕ್ಷಿಸಲು ಪ್ರವಾಸಿಗರು ಹಾಗೂ ಸ್ಥಳೀಯರು ಬಯಸುತ್ತಿರುವ ಹಿನ್ನೆಲೆಯಲ್ಲಿ ಸಂಜೆ 6ರ ನಂತರವೂ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಪರಿಷ್ಕೃತ ಸಮಯ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಸೋಮವಾರ ತಿಳಿಸಿದರು.

ಗೋಳಗುಮ್ಮಟದ ಸ್ವಚ್ಛತೆಗೆ ಅಂಗವಿಕಲನ ನಿಸ್ವಾರ್ಥ ಸೇವೆ

ದೆಹಲಿಯ ಹುಮಾಯೂನ್‌ ಗೋರಿ, ಸಫ್ದರ್‌ಜಂಗ್‌ ಗೋರಿ, ಭುವನೇಶ್ವರದ ರಾಜರಾಣಿ ದೇಗುಲ, ಖಜುರಾಹೋದ ದುಲ್ಹದೇವ ದೇಗುಲ, ಕುರುಕ್ಷೇತ್ರದ ಶೇಖ್‌ ಚಿಲ್ಲಿ ಗೋರಿ, ಮಹಾರಾಷ್ಟ್ರದ ಮಾರ್ಕಂಡ ದೇಗುಲ ಸಮೂಹ, ವಾರಾಣಸಿಯ ಮನ್‌ ಮಹಲ್‌, ಗುಜರಾತಿನ ಪಠಾಣ್‌ನಲ್ಲಿರುವ ರಾಣಿ ಕಿ ಬಾವ್‌ ಪ್ರವೇಶಾವಧಿಯನ್ನು ಕೂಡ ವಿಸ್ತರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು