ಐಸ್ ಕ್ರೀಂ ಟ್ರೋಲಿಯಲ್ಲಿ ಅವಿತು ಕುಳಿತ ಮಗು, ಉಸಿರುಗಟ್ಟಿ ಸಾವು!

Published : Jul 30, 2019, 03:54 PM IST
ಐಸ್ ಕ್ರೀಂ ಟ್ರೋಲಿಯಲ್ಲಿ ಅವಿತು ಕುಳಿತ ಮಗು, ಉಸಿರುಗಟ್ಟಿ ಸಾವು!

ಸಾರಾಂಶ

ಸ್ನೇಹಿತರಿಗೆ ಸಿಗಬಾರದೆಂದು ಐಸ್ ಕ್ರಿಂ ಟ್ರೋಲಿಯಲ್ಲಿ ಅವಿತು ಕುಳಿತ ಬಾಲಕ| ಜೀವಕ್ಕೇ ಕುತ್ತು ತಂದ ಕಣ್ಣಾಮುಚ್ಚಾಲೆಯಾಟ| ಐಸ್‌ಕ್ರೀಂ ಟ್ರೋಲಿ ಲಾಕ್, ಉಸಿರುಗಟ್ಟಿ ಬಾಲಕ ಸಾವು!

ಲಕ್ನೋ[ಜು.30]: ತನ್ನ ಸ್ನೇಹಿತರೊಂದಿಗೆ ಕಣ್ಣು ಮುಚ್ಚಾಲೆಯಾಡುತ್ತಿದ್ದ 5 ವರ್ಷದ ನರ್ಸರಿ ಬಾಲಕ ಐಸ್ ಕ್ರೀಂ ಟ್ರೋಲಿಯೊಳಗೆ ಅವತು ಕುಳಿತುಕೊಂಡಿದ್ದಾನೆ. ಮಗು ಡಬ್ಬದೊಳಗೆ ಕುಳಿತುಕೊಳ್ಳುತ್ತಿದ್ದಂತೆಯೇ ಮುಚ್ಚಳ ಹೊರಗಿನಿಂದ ಮುಚ್ಚಿಕೊಂಡಿದೆ. ಹೀಗಾಗಿ ಹೊರ ಬರಲಾರದ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮಾದೋಟಾಂಡಾ ಪೊಲೀಸ್ ಠಾಣೆಯ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ ಈ ಘಟನೆ ಸೋಮವಾರ ಕಲೀನಗರದಲ್ಲಿ ನಡೆದಿದೆ. ಸ್ನೇಹಿತರೊಮದಿಗೆ ಆಟವಾಡಲು ತೆರಳಿದ್ದ ಅಥರ್ವ ಗುಪ್ತಾ ಬಹಳ ಸಮಯವಾದರೂ ಮರಳದಿದ್ದಾಗ ಆತಂಕಗೊಂಡ ಪೋಷಕರು ಹುಡು ಕಾಟ ಆರಂಭಿಸಿದ್ದಾರೆ. ಎಷ್ಟೇ ಹುಡುಕಾಟ ನಡೆಸಿದರೂ ಮಗು ಪತ್ತೆಯಾಗದಾಗ ಹೆತ್ತವರು ಆತಂಕಗೊಂಡಿದ್ದಾರೆ.

ಹೀಗಿರುವಾಗ ಆಕಸ್ಮಿಕವಾಗಿ ಕುಟುಂಬ ಸದಸ್ಯರೊಬ್ಬರು ಮನೆ ಹೊರಗೆ ನಿಲ್ಲಿಸಲಾಗಿದ್ದ ಐಸ್ಸ್‌ಕ್ರೀಂ ಟ್ರೋಲಿಯ ಛೇಂಬರ್ ಮುಚ್ಚಳ ತೆಗೆದಿದ್ದಾರೆ. ಈ ವೇಳೆ ಮಗು ಸಾವನ್ನಪ್ಪಿರುವ ವಿಚಾರ ಬಯಲಾಗಿದೆ. ಭಾನುವಾರದಂದು ಮಗನಿಗೆ ಸ್ವಲ್ಪ ಗಾಯವಾಗಿತ್ತು ಹೀಗಾಗಿ ಆತನನ್ನು ಸೋಮವಾರ ಶಾಲೆಗೆ ಕಳುಹಿಸಿರಲಿಲ್ಲ ಎಂದು ಅಥರ್ವ ತಂದೆ ತಿಳಿಸಿದ್ದಾರೆ. 

SHO ಉಮೆಶ್ ಸಿಂಗ್ ಘಟನೆಯ ಮಾಹಿತಿ ನೀಡಿದ್ದು, 'ಮಗು ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿತ್ತು' ಎಂದಿದ್ದಾರೆ. ಘಟನೆ ಸಂಬಂಧ ಪೊಲೀಸರು FIR ದಾಖಲಿಸಿಲ್ಲ, ಅಲ್ಲದೇ ಶವದ ಪೋಸ್ಟ್ ಮಾರ್ಟಂ ಕೂಡಾ ಮಾಡಸಿಲ್ಲ ಎಂಬುವುದು ಉಲ್ಲೇಖನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು