
ನವದೆಹಲಿ[ಸೆ.08]: ಪ್ರಧಾನಿ ಮೋದಿ ದಿನದ 18 ಗಂಟೆ ಕೆಲಸ ಕಾರ್ಯದಲ್ಲಿ ಮಗ್ನರಾಗಿರುತ್ತಾರೆ ಕೇವಲ 4 ಗಂಟೆ ವಿಶ್ರಾಂತಿ ಪಡೆಯುತ್ತಾರೆ ಎಂಬ ಮಾತುಗಳು ಚುನಾವಣೆ ಸಂದರ್ಭದಲ್ಲಿ ಸದ್ದು ಮಾಡಿದ್ದವು. ಇದನ್ನು ಅನೇಕರು ವ್ಯಂಗ್ಯವಾಡಿದ್ದರು. ಆದರೆ ಕಳೆದ ಎರಡು ಮೂರು ದಿನಗಳಲ್ಲಿ ಪಿಎಂ ಮೋದಿಗೆ ತಮ್ಮ ಕೆಲಸಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುವುದು ಬಹಿರಂಗವಾಗಿದೆ. ಅಲ್ಲದೇ ಮೋದಿ ಕೆಲಸದ ಮೇಲಿನ ಶ್ರದ್ಧೆಗೆ ಸಂಬಂಧಿಸಿದಂತೆ ಆಪ್ ನಾಯಕ ಮಾಡಿರುವ ಟ್ವೀಟ್ ಕೂಡಾ ಭಾರೀ ವೈರಲ್ ಆಗಿದೆ.
'ಮೋದಿಯನ್ನು ವಿರೋಧಿಸ್ಬಹುದು, ಆದ್ರೆ ಕೆಲಸದ ಮೇಲಿನ ಅವರ ಶ್ರದ್ಧೆ ಟೀಕಿಸಲು ಸಾಧ್ಯವಿಲ್ಲ'
ಸೆ. 4ರಿಂದ 7ರವರೆಗೆ ಪ್ರಧಾನಿ ಮೋದಿಯ ಕಾರ್ಯ ವೈಖರಿಗೆ ಆಪ್ ನಾಯಕ ಮಯಾಂಕ್ ಗಾಂಧಿ ಫುಲ್ ಫಿದಾ ಆಗಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತಾಗಿ ಟ್ವೀಟ್ ಮಾಡಿರುವ ಮಯಾಂಕ್ ಗಾಂಧಿ 'ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಹಾಗೂ ಅವರ ನೀತಿಯನ್ನು ವಿರೋಧಿಸಬಹುದು. ಆದರೆ ತಮ್ಮ ಕೆಲಸದ ಮೇಲೆ ಇಷ್ಟು ಶ್ರದ್ಧೆ ಇಟ್ಟುಕೊಂಡಿರುವ ವ್ಯಕ್ತಿಯನ್ನು ನಾನು ಈವರೆಗೆ ನೋಡಿಲ್ಲ' ಎಂದಿದ್ದಾರೆ.
ಸೆ. 4ರಿಂದ 7ರವರೆಗೆ ಪ್ರಧಾನಿ ಮೋದಿ ಏನೇನು ಮಾಡಿದ್ರು?
ಹೌದು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 4 ರಂದು 3 ದಿನಗಳ ರಷ್ಯಾ ಪ್ರವಾಸಕ್ಕೆಂದು ತೆರಳಿದ್ದರು. ಮಹತ್ವದ ಸಭೆ, ಮಾತುಕತೆಗಳನ್ನು ನಡೆಸಿದ್ದ ಮೋದಿ ಸೆ. 06ರಂದು ದೆಹಲಿಗೆ ಬಂದಿಳಿದಿದ್ದರು. ಅಲ್ಲಿಂದ ಮತ್ತೆ ವಿಮಾನವನ್ನೇರಿದ್ದ ಮೋದಿ ಚಂದ್ರಯಾನ 2 ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸಲು ಹಾಗೂ ಮಾಹಿತಿ ಪಡೆಯಲು ಖುದ್ದು ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿದ್ದರು. ಕೊಂಚವೂ ವಿಶ್ರಾಂತಿ ಪಡೆಯದ ಮೋದಿ, ಇಸ್ರೋ ವಿಜ್ಞಾನಿಗಳೊಂದಿಗೆ ಕುಳಿತು ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸುತ್ತಿದ್ದರು. '
ಭಾರತ ಮತ್ತು ರಷ್ಯಾ, ಇದು ರಾಷ್ಟ್ರಗಳ ಹೃದಯದ ವಿಷ್ಯ: ಪ್ರಧಾನಿ ಮೋದಿ
ದುರಾದೃಷ್ಟವಶಾತ್ ರಾತ್ರಿ ಸುಮಾರು ರಾತ್ರಿ 1.57ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯಲು 2.1 ಕಿ. ಮೀಟರ್ ಇದೆ ಎನ್ನುವಷ್ಟರಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಈ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಕೊಂಚ ಹಿನ್ನಡೆಯಾಗಿತ್ತು. ಆದರೆ ಈ ವೇಳೆ ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದ ಮೋದಿ ನಿರಾಸೆಗೊಳ್ಳದಿರಿ, ನೀವು ಮಾಡಿದ್ದು ಅಸಾಧಾರಣ ಕೆಲಸ ಎಂದು ಬೆನ್ನು ತಟ್ಟಿದ್ದರು. ಹೀಗೆ ಸುಮಾರು 3 ಗಂಟೆವರೆಗೂ ಮೋದಿ ವಿಜ್ಞಾನಿಗಳೊಂದಿಗಿದ್ದರು.
ಆತಂಕ ಉಂಟು ಮಾಡಿದ ಚಂದ್ರಯಾನದ ಕೊನೆಯ 15 ನಿಮಿಷ: ಚಿತ್ರಪಯಣ
ಇದಾದ ಮರುದಿನ ಅಂದರೆ ಸೆ. 07ರಂದು ಬೆಳಗ್ಗೆ ಸುಮಾರು 8 ಗಂಟೆಗೆ ಮೋದಿ ಮತ್ತೆ ತಮ್ಮ ಜಕೆಲಸದಲ್ಲಿ ತೊಡಗಿಕೊಂಡಿದ್ದರು. ಇಸ್ರೋ ಕಚೇರಿಗೆ ಆಗಮಿಸಿದ ಅವರು ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲದೇ ವಿಜ್ಞಾನಿಗಳ ಸಾಧನೆಯನ್ನು ಹಾಡಿ ಹೊಗಳಿದ್ದರು. ಭಾಷಣ ಮುಗಿಸಿದ್ದ ಮೋದಿ ಸ್ಟೇಸ್ ಕ್ವಿಜ್ ನಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕೆಲಸ ಮುಗಿಯುತ್ತಿದ್ದಂತೆಯೇ ಮುಂಬೈನತ್ತ ಪ್ರಯಾಣ ಬೆಳೆಸಿದ್ದ ಪ್ರಧಾನಿ ಅಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶ, ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಅಮಾರಂಭದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇಸ್ರೋ ವಿಜ್ಞಾನಿಗಳೇ, ನಿಮ್ಮೊಂದಿಗಿದೆ ಭಾರತ: ಮೋದಿ ವಿಶ್ವಾಸದ ಮಾತಿಗೆ ವಿಜ್ಞಾನಿಗಳು ಭಾವುಕ!
ಹೀಗೆ ಸತತ 4 ದಿನಗಳ ಕಾಲ ಪ್ರಧಾನಿ ಮೋದಿ ವಿಶ್ರಾಂತಿಗೆ ಹೆಚ್ಚು ಒತ್ತು ನೀಡದೆ ತಮ್ಮ ಕೆಲಸಗಳಿಗೆ ಮಹತ್ವ ನೀಡಿದ್ದರು. ಒಂದಾದ ಬಳಿಕ ಮತ್ತೊಂದರಂತೆ ತಮ್ಮೆಲ್ಲಾ ಕಾರ್ಯಕ್ರಮಗಳನ್ನು ಮುಗಿಸಿದ್ದರು. ಇದು ಪ್ರಧಾನಿ ಮೋದಿ ತಮ್ಮ ಕೆಲಸಕ್ಕೆ ಎಷ್ಟು ಮಹತ್ವ ನೀಡುತ್ತಾರೆಂಬುವುದಕ್ಕೆ ಉದಾಹರಣೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.