ನಾಯಿಗಿಂತ ಕೀಳಾದ ಮನುಷ್ಯ: ಗೊತ್ತಾ 1 ಕಿ.ಮೀ ಶ್ವಾನ ಎಳೆದೊಯ್ದ ವಿಷ್ಯ?

Published : Sep 08, 2019, 01:25 PM ISTUpdated : Sep 08, 2019, 01:33 PM IST
ನಾಯಿಗಿಂತ ಕೀಳಾದ ಮನುಷ್ಯ: ಗೊತ್ತಾ 1 ಕಿ.ಮೀ ಶ್ವಾನ ಎಳೆದೊಯ್ದ ವಿಷ್ಯ?

ಸಾರಾಂಶ

ಮುಂದುವರೆದಿದೆ ಮೂಕಪ್ರಾಣಿಗಳ ಮೇಲಿನ ದೌರ್ಜನ್ಯ| ಬೀದಿ ನಾಯಿಯನ್ನು 1. ಕಿ. ಮೀಟರ್ ಎಳೆದೊಯ್ದ 'ಮಾನವ'| ಗಾಯಾಳು ನಾಯಿಯ ವಿಡಿಯೋ ವೈರಲ್, ನೆಟ್ಟಿಗರು ಫುಲ್ ಗರಂ!

ಹೈದರಾಬಾದ್[ಸೆ.08]: ಮೂಕಪ್ರಾಣಿಗಳ ಮೇಲಿನ ದೌರ್ಜನ್ಯದ ವರದಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಪ್ರಾಣಿಗಳನ್ನು ಹೊಡೆದು ಬಡಿದು ಹಿಂಸಿಸುವುದು ಮಾತ್ರವಲ್ಲದೇ, ಅವುಗಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳೂ ಸದ್ದು ಮಾಡುತ್ತವೆ. ಸದ್ಯ ಹೈದರಾಬಾದ್ ನಲ್ಲಿ ನಾಯಿಯ ಮೇಲೆ ವ್ಯಕ್ತಿಯೊಬ್ಬ ನಡೆಸಿದ ದೌರ್ಜನ್ಯದ ದೃಶ್ಯಗಳು ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಹೈದರಾಬಾದ್ ನ ಶಾಲೆಯೊಂದರ ವಾಚ್ ಮ್ಯಾನ್ ನಾಯಿಯೊಂದನ್ನು ತನ್ನ ಬೈಕ್ ಗೆ ಕಟ್ಟಿ ಹಾಕಿ ಸಿಕಂದರಾಬಾದ್ ನ ರಸ್ತೆಯೊಂದರಲ್ಲಿ ಸುಮಾರು 1ಕಿ. ಮೀಟರ್ ದೂರ ಎಳೆದೊಯ್ದಿದ್ದಾನೆ. ಈ ಘಟನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಯಿ ಗಂಭೀರ ಗಾಯಗೊಂಡಿರುವುದು ಕಾಣಬಹುದಾಗಿದೆ.

ಪ್ರಾಣಿ ದಯಾ ಸಂಘದ ಕಾರ್ಯಕರ್ತ ವದಲ್ ಮಣಿ ಮೂರ್ತಿ ಎಂಬವರು ಘಟನೆಯ ದೃಶ್ಯಗಳನ್ನು ಶೇರ್ ಮಾಡಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ವರದಿಯನ್ವಯ ಈ ಬೀದಿ ನಾಯಿ ಇಲ್ಲಿನ ಪಿಜಿ ರಸ್ತೆಯಲ್ಲಿರುವ ವೆಸ್ಲಿ ಬಾಯ್ಸ್ ಸ್ಕೂಲ್ ಪರಿಸರದಲ್ಲಿ ಓಡಾಡಿಕೊಂಡಿತ್ತು. ಹೀಗಾಘಿ ಶಾಲೆಯ ಪ್ರಾಂಶುಪಾಲರು ವಾಚ್ ಮನ್ ಬಳಿ ಇದನ್ನು ಎಲ್ಲಾದರೂ ದೂರಕ್ಕೊಯ್ದು ಬಿಟ್ಟು ಬರುವಂತೆ ಸೂಚಿಸಿದ್ದರು. ಹೀಗಾಗಿ ವಚ್ ಮನ್ ಇದನ್ನು ತನ್ನ ಬೈಕ್ ಗೆ ಕಟ್ಟಿ 1ಕಿ. ಮೀಟರ್ ದೂರ ಎಳೆದೊಯ್ದಿದ್ದ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?