ವೀಡಿಯೋ ತಾಪತ್ರಯದಿಂದ ಪಾರಾದ ಲಿಂಬಾವಳಿ, ಇಳಿಕೆಯತ್ತ ಈರುಳ್ಳಿ: ಟಾಪ್ 10 ಸುದ್ದಿಗಳು!

By Suvarna News  |  First Published Dec 10, 2019, 5:50 PM IST

ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಹತ್ತು ಹಲವು ಘಟನಾವಳಿಗಳು| ಸುದ್ದಿಯ ಸಾರವರಿತು ಸುದ್ದಿಯ ವಿಶ್ಲೇಷಿಸುವ ನಿಮ್ಮ ಸುವರ್ಣನ್ಯೂಸ್.ಕಾಂ| ದಿನದ ಟಾಪ್ 10 ಸುದ್ದಿಗಳು ನಿಮಗಾಗಿ| ಡಿ.10 ರಂದು ನಡೆದ ವಿವಿಧ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ|


ಬೆಂಗಳೂರು(ಡಿ.10): ದಿನವೊಂದಕ್ಕೆ ದೇಶದಲ್ಲಿ ಅದೆಷ್ಟು ಘಟನೆಗಳು ಸಂಭವಿಸುತ್ತವೆ. ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಸಂಖ್ಯಾತ ಘಟನಾವಳಿಗಳು ಜರುತ್ತಲೇ ಇರುತ್ತವೆ. ಈ ಎಲ್ಲ ಸುದ್ದಿಗಳನ್ನು ಹೆಕ್ಕಿ ತೆಗೆಯುವ, ಸುದ್ದಿಯ ಆಳಕ್ಕಿಳಿದು ವಿಶ್ಲೇಷಿಸುವ ಪತ್ರಿಕಾಧರ್ಮವನ್ನು ನಿಮ್ಮ ಸುವರ್ಣನ್ಯೂಸ್.ಕಾಂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುತ್ತದೆ. ಅದರಂತೆ ಇಂದಿನ ಅಸಂಖ್ಯ ಘಟನಾವಳಿಗಳ ಸಮುದ್ರದಿಂದ ಟಾಪ್ 10 ಸುದ್ದಿ ಎಂಬ ಬೊಗಸೆಯಲ್ಲಿಡಿದು ಓದುಗರ ಮುಂದಿಟ್ಟಿದೆ. ಸುವರ್ಣನ್ಯೂಸ್.ಕಾಂ. ಓದಿರಿ, ಓದಿಸಿರಿ.


1. ಲಿಂಬಾವಳಿ ವೈರಲ್ ವಿಡಿಯೋ: ನಿಜವೆಷ್ಟು -ಸುಳ್ಳೆಷ್ಟು? ವರದಿ ಕೊಟ್ಟ FSL

Tap to resize

Latest Videos


ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಹದೇವಪುರ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರು ಹುಡುಗನೊಬ್ಬನ ಜೊತೆ ಸಲಿಂಗ ಕಾಮ ನಡೆಸಿರುವ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು.  ಆದ್ರೆ, ಇದೀಗ ಅರವಿಂದ್ ಲಿಂಬಾವಳಿ ಎಳೆಯ ಹುಡುಗರಿಗೆ ರಾತ್ರಿಯಲ್ಲ ಕಾಟ,ಚೆಲ್ಲಾಟ ನಿಜವೆಷ್ಟು ಸುಳ್ಳೆಷ್ಟು ಎನ್ನುವುದನ್ನು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೇ ವರದಿ ನೀಡಿದ್ದಾರೆ. ಹಾಗಾದ್ರೆ, ವರದಿಯಲ್ಲೇನಿದೆ..? ವಿಡಿಯೋನಲ್ಲಿ ನೋಡಿ..

2. ಅಮಿತ್ ಶಾ CAB: ವಾಷಿಂಗ್ಟನ್ ಟು ದಿಲ್ಲಿ, ಪಿಕ್ಚರ್ ಅಬಿ ಬಾಕಿ ಹೈ....!


ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ರಾಜ್ಯಸಭೆಯಲ್ಲಿ ರಾಜ್ಯಸಭೆಯಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ಶತಾಯಗತಾಯ ಕಾನೂನನ್ನಾಗಿ ಮಾಡಲು ಸಜ್ಜಾಗಿರುವ ಕೇಂದ್ರ ಸರ್ಕಾರ, ರಾಜ್ಯಸಭೆಯಲ್ಲೂ ಮಸೂದೆಗೆ ಬೆಂಬಲ ಸಿಗುವ ಭರವಸೆಯಲ್ಲಿದೆ.

3. ಬಿಜೆಪಿ ಸರ್ಕಾರ ಸೇಫ್: BSY ಛಲದ ಬಗ್ಗೆ ಡಿಕೆಶಿ ಮೆಚ್ಚುಗೆ ಮಾತುಗಳು ವೈರಲ್

15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಯಡಿಯೂರಪ್ಪನವರ ಸರ್ಕಾರ ಸುಭದ್ರವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಕೇವಲ  ಸ್ಥಾನಗಳಲ್ಲಿ ಜಯಗಳಿಸಿ ಮುಖಭಂಗವಾಗಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ, ವಿಪಕ್ಷ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್ ರಿಸೈನ್ ಮಾಡಿದ್ದಾರೆ. ಇದರ ಮಧ್ಯೆ BSY ಛಲದ ಬಗ್ಗೆ ಡಿಕೆಶಿ ಮೆಚ್ಚುಗೆ ಮಾತುಗಳು ವೈರಲ್ ಆಗಿವೆ.

4. 'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ

ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ 'ಚಪಕ್' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.  ಚಿತ್ರದ ಟ್ರೇಲರ್ ರಿಲೀಸ್ ವೇಳೆ ದೀಪಿಕಾ ಪಡುಕೋಣೆ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ.

5. ಕೊನೆ ಕ್ಷಣದಲ್ಲಿ ಸುಪ್ರೀಂ ಮೆಟ್ಟಿಲೇರಿದ ನಿರ್ಭಯಾ ರೇಪಿಸ್ಟ್‌: ಗಲ್ಲು ಶಿಕ್ಷೆ ಮತ್ತಷ್ಟು ವಿಳಂಬ?


ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನಗಣನೆ ಆರಂಭವಾಗಿದೆ, ತಿಹಾರ್ ಜೈಲಿನಲ್ಲೂ ಎಲ್ಲಾ ತಯಾರಿ ನಡೆಯುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆಯೇ 2012ರಲ್ಲಿ ನಿರ್ಭಯಾಳನ್ನು ಅತ್ಯಾಚಾರಗೈದಿದ್ದ ಅಪರಾಧಿಗಳಲ್ಲೊಬ್ಬ ಅಕ್ಷಯ್ ಸಿಂಗ್ ಗಲ್ಲು ಶಿಕ್ಷೆ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ.

6. ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ದುಬೆಗೆ ಅವಕಾಶ..?


ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಯುವ ಆಲ್ರೌಂಡರ್ ಶಿವಂ ದುಬೆ ವಿಂಡೀಸ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ.

7. ಕೆಜಿಎಫ್‌ ಸಂಗೀತ ನಿರ್ದೇಶಕನ ಹೈಟೆಕ್ ಸ್ಟುಡಿಯೋ; ಫೋಟೋ ನೋಡಿ!
ಬೆಂಗಳೂರಿನ ನಾಗರಬಾವಿಯಲ್ಲಿ  ರೆಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆ ಮಾಡಿದ ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಫೇಸ್‌ಬುಕ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

8. ಆಕಾಶದಿಂದ ಪಾತಾಳಕ್ಕೆ: ಈರುಳ್ಳಿ ಬೆಲೆ 25 ರೂ. ಕೆಜಿಗೆ!


ಗಗನ ಸೀಳಿ ಬ್ರಹ್ಮಾಂಡ ತಲುಪಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಇಳಿಕೆಯತ್ತ ಮುಖ ಮಾಡಿದೆ. ದೇಶದ ವಿವಿಧೆಡೆ 200 ರೂ. ಗಡಿ ದಾಟಿದ್ದ ಈರುಳ್ಳಿ ಬೆಲೆ ಇದೀಗ 170 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಆದರೆ ನೆರೆಯ ಆಂಧ್ರಪ್ರದೇಶದಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ. ಅಂದರೆ ನಿಮಗೆ ಅಚ್ಚರಿಯಾದಿತು. ಹೌದು, ಆಂಧ್ರ ಸರ್ಕಾರ ಈರುಳ್ಳಿಗೆ ಸಬ್ಸಿಡಿ ಘೋಷಣೆ ಮಾಡಿದ್ದು, ಕೆಜಿ ಈರುಳ್ಳಿ ಬೆಲೆ ಕೇವಲ 25 ರೂ,. ಆಗಿದೆ.

9. ಶೀಘ್ರ ಸಂಪುಟ ವಿಸ್ತರಣೆ : ಯಾರಿಗೆ ಒಲಿಯುತ್ತೆ ಯಾವ ಖಾತೆ?


ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳು ಬಿಜೆಪಿ ಪಾಲಾಗಿವೆ.  ಶೀಘ್ರ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಸಂಪುಟ ವಿಸ್ತರಣೆಯಲ್ಲಿ ಅನರ್ಹರಾಗಿ ಈಗ ಗೆದ್ದು ಅರ್ಹರಾದ ಶಾಸಕರಿಗೆ ಸಚಿವನ ಸ್ಥಾನ ಸಿಗುವುದು ಪಕ್ಕಾ ಆದಂತಾಗಿದೆ.  ಯಾರಿಗೆ ಯಾವ ಸ್ಥಾನ ದೊರೆಯಲಿದೆ, ಲಿಸ್ಟ್ ಇಲ್ಲಿದೆ.

10. ರೆಡಿಯಾಗಿ ಸಿಗುವ ಯಾವುದೂ ಒಳಿತಲ್ಲ, ಇನ್ಸ್‌ಟೆಂಟ್ ನೂಡಲ್ಸ್ ಇದಕ್ಕೆ ಹೊರತಲ್ಲ!


ಅನುಮಾನವಿದ್ದರೆ ಯಾವ ವೈದ್ಯರನ್ನಾದರೂ ಕೇಳಿ ನೋಡಿ, ಇನ್ಸ್‌ಟೆಂಟ್ ನೂಡಲ್ಸ್ ಆರೋಗ್ಯಕ್ಕೆ ಒಳ್ಳೆಯದೆನ್ನುವ ಒಬ್ಬರಾದರೂ ಸಿಕ್ಕರೆ ಆಮೇಲೆ ಮಾತಾಡಿ. ಜೀವನದಲ್ಲಿ ಕಷ್ಟಪಡದೆ ಸಿಕ್ಕುವುದು ಯಾವುದೂ ಹೇಗೆ ಒಳ್ಳೆಯದಲ್ಲವೋ, ಸುಲಭವಾಗಿ ತಯಾರಾಗುವ ನೂಡಲ್ಸ್ ಕೂಡಾ ಹಾಗೆಯೇ.

click me!